Hostel Hudugaru Bekagiddare: ಹಾಸ್ಟೆಲ್ ಹುಡುಗರು ಮಲಯಾಳಂನ ಮೋಹನ್‌ ಲಾಲ್‌ರನ್ನು ಭೇಟಿಯಾಗಿದ್ದೇಕೆ?

ಸದ್ಯ ರಾಜ್ಯದಲ್ಲಿ ಎಲ್ಲಿ ನೋಡಿದರೂ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ್ದೇ ಅಬ್ಬರ. ಹೌದು, ಕಳೆದ ಶುಕ್ರವಾರ ( ಜುಲೈ 21 ) ಬಿಡುಗಡೆಗೊಂಡ ದೊಡ್ಡ ದೊಡ್ಡ ಚಿತ್ರಗಳ ನಡುವೆ ಸಣ್ಣ ಪ್ರಮಾಣದ ಸಂಖ್ಯೆಯ ಚಿತ್ರಮಂದಿರಗಳಲ್ಲಿಯೇ ತೆರೆಗೆ ಬಂದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಹೆಚ್ಚಾಗಿ ಸದ್ದು ಮಾಡ್ತಿದೆ. ಹೌದು, ತನ್ನ ಜತೆ ಬಿಡುಗಡೆಗೊಂಡ ಹಾಲಿವುಡ್‌ನ ದೈತ್ಯ ಸಿನಿಮಾಗಳಾದ ಆಪನ್‌ಹೈಮರ್ ಹಾಗೂ ಬಾರ್ಬಿ ಚಿತ್ರಗಳನ್ನು ಹಿಂದಿಕ್ಕಿ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಭರ್ಜರಿ ಸದ್ದು ಮಾಡುತ್ತಿದೆ.

ಹೌದು, ಹೊಸಬರ ತಂಡ ಸೇರಿ ಮಾಡಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ರಾಜ್ಯ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ಮೊದಲ ದಿನಕ್ಕಿಂತ ಎರಡು ಹಾಗೂ ಮೂರನೇ ದಿನದ ಪ್ರದರ್ಶನಗಳಲ್ಲಿ ದುಪ್ಪಟ್ಟು, ಮೂರು ಪಟ್ಟು ಕಲೆಕ್ಷನ್ ಅನ್ನು ಮಾಡಿ ಕನ್ನಡ ಸಿನಿ ರಸಿಕರಿಂದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ರೀತಿ ಗೆದ್ದು ಬೀಗುವವರು ಬೇಕಾಗಿದ್ದಾರೆ ಎಂದು ಕನ್ನಡ ಸಿನಿ ರಸಿಕರು ಹಾಡಿ ಹೊಗಳುತ್ತಿದ್ದಾರೆ.

hostel-hudugaru-bekagiddare-team-meets-mohanlal

ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ 5 ದಿನಕ್ಕೆ 7 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ಸದ್ಯ ಎರಡನೇ ವಾರದ ಅಬ್ಬರದ ಪ್ರದರ್ಶನವನ್ನು ಕಾಣುತ್ತಿದೆ. ಹೀಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ಇದೀಗ ಮಲಯಾಳಂನ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರನ್ನು ಭೇಟಿ ಮಾಡಿದೆ.

ಹೌದು, ಮೈಸೂರಿನಲ್ಲಿ ನಡೆಯುತ್ತಿರುವ ಮೋಹನ್ ಲಾಲ್ ಹಾಗೂ ನಂದ ಕಿಶೋರ್ ಕಾಂಬಿನೇಶನ್‌ನ ಚಿತ್ರ ವೃಷಭ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಮೋಹನ್ ಲಾಲ್ ಅವರನ್ನು ಭೇಟಿಯಾಗಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ತಮ್ಮ ಚಿತ್ರದ ಟ್ರೈಲರ್ ತೋರಿಸಿದೆ ಹಾಗೂ ಯಾವ ರೀತಿಯ ಪ್ರದರ್ಶನವನ್ನು ಕಾಣುತ್ತಿದೆ ಎಂಬುದನ್ನು ತಿಳಿಸಿದ್ದಾರೆ. ಚಿತ್ರದ ಕುರಿತು ಹಾಗೂ ಟ್ರೈಲರ್ ಕುರಿತು ಚಿತ್ರತಂಡದ ಜತೆ ಮಾತನಾಡಿದ ನಟ ಮೋಹನ್ ಲಾಲ್ ತಂಡದ ಕೆಲಸವನ್ನು ಹೊಗಳಿ ಅಭಿನಂದಿಸಿದ್ದಾರೆ.

ಮೋಹನ್ ಲಾಲ್ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಟ್ರೈಲರ್ ವೀಕ್ಷಿಸುತ್ತಾ ಇರುವ ದೃಶ್ಯಗಳು ಹಾಗೂ ಆ ಬಳಿಕ ಚಿತ್ರತಂಡದ ಜತೆ ತೆಗೆಸಿಕೊಂಡಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇನ್ನು ಮೋಹನ್ ಲಾಲ್ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇದ್ದು, ತಮಿಳಿನ ಜೈಲರ್ ಚಿತ್ರದಲ್ಲಿಯೂ ಸಹ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದು, ಸದ್ಯ ಕನ್ನಡದ ನಿರ್ದೇಶಕ ನಂದ ಕಿಶೋರ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.

More from Filmibeat

English summary
Hostel Hudugaru Bekagiddare: Team Meets Mohanlal and received appreciation from him
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X