15 ದಿನಕ್ಕೆ ಹಾಸ್ಟೆಲ್ ಹುಡುಗರು ಗಳಿಸಿದ್ದೆಷ್ಟು? ಫ್ರೀ ಟಿಕೆಟ್ ಆಫರ್ ಬಿಟ್ಟಿದ್ದೇಕೆ?

ಥಿಯೇಟರ್‌ಗಳಲ್ಲಿ ಹಾಸ್ಟೆಲ್ ಹುಡುಗರ ಹಾವಳಿ ಇನ್ನು ನಿಂತಿಲ್ಲ. 15 ದಿನಗಳ ಹಿಂದೆ ರಿಲೀಸ್ ಆಗಿದ್ದ ಸಿನಿಮಾ ಗೆಲುವಿನ ಓಟ ಮುಂದುವರೆಸಿದೆ. ನಿತಿನ್ ಕೃಷ್ಣಮೂರ್ತಿ ಅಂಡ್ ಟೀಂ ಪ್ರಯತ್ನಕ್ಕೆ ಭರ್ಜರಿ ಯಶಸ್ಸು ಸಿಕ್ಕಿದೆ. ಹೊಸಬರ ವಿನೂತನ ಪ್ರಯತ್ನಕ್ಕೆ ಪ್ರೇಕ್ಷಕರು ಬಹುಪರಾಕ್ ಹೇಳುತ್ತಿದ್ದಾರೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಚಿತ್ರಕ್ಕೆ ಒಳ್ಳೆ ಲಾಭ ತಂದುಕೊಟ್ಟಿದೆ.

ರಿಷಬ್ ಶೆಟ್ಟಿ, ರಾಜ್‌. ಬಿ ಶೆಟ್ಟಿ, ರಕ್ಷಿತ್ ಶೆಟ್ಟಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡದ ಬೆಂಬಲಕ್ಕೆ ನಿಂತರು. ಒಂದೇ ಹಾಸ್ಟೆಲ್‌ ಒಳಗೆ ನಡೆಯುವ ಕಥೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಪದೇ ಪದೆ ಈ ಫನ್ ಸಿನಿಮಾ ನೋಡಲು ಆರಂಭಿಸಿದ್ದಾರೆ. ಇನ್ನು ಚಿತ್ರದಲ್ಲಿ ನಟಿಸಿರುವ ಬಹುತೇಕ ಎಲ್ಲರೂ ಹೊಸಬರು. ಒಟ್ನಲ್ಲಿ ಯೂತ್‌ ಎಂಟರ್‌ಟೈನರ್ ಸಿನಿಮಾ ಭರ್ಜರಿ ಸದ್ದು ಮಾಡ್ತಿದೆ. ನಿಧಾನವಾಗಿ ಹೊರ ರಾಜ್ಯಗಳಲ್ಲಿ ಸಿನಿಮಾ ರಿಲೀಸ್‌ಗೆ ರೆಡಿಯಾಗ್ತಿದೆ.

Hostel- Hudugaru- Bekagiddare-free-ticket

ಹಾಸ್ಟೆಲ್‌ನಲ್ಲಿ ಸಿನಿಮಾ ಗೀಳಿನ ಯುವಕನೊಬ್ಬ ಶಾರ್ಟ್ ಫಿಲ್ಮ್ ಮಾಡಬೇಕು ಎಂದುಕೊಳ್ಳುವುದು, ಲೈವ್ ಆಗಿ ನಡೆಯುವುದನ್ನೇ ಶೂಟ್ ಮಾಡಬೇಕು ಎಂದುಕೊಳ್ಳುವುದು, ವಾರ್ಡನ್ ಸತ್ತಂತೆ ನಟಿಸಲು ಆರಂಭಿಸಿದ ಮೇಲೆ ಏನೆಲ್ಲಾ ಆಗುತ್ತದೆ ಎನ್ನುವ ಕಥೆಯನ್ನು 2 ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು ಹೇಳಿರುವ ಪ್ರಯತ್ನಕ್ಕೆ ಮೆಚ್ಚುಗೆ ಸಲ್ಲಲೇಬೇಕು.

ಫ್ರೀ ಟಿಕೆಟ್ ಆಫರ್

ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ಕ ಅದ್ಭುತ ಪ್ರತಿಕ್ರಿಯೆಗೆ ಚಿತ್ರತಂಡ ಖುಷಿಯಾಗಿದೆ. ಇದೇ ಕಾರಣಕ್ಕೆ ಮತ್ತಷ್ಟು ಜನ ಸಿನಿಮಾ ನೋಡಲಿ ಎನ್ನುವ ಕಾರಣ ಫ್ರೀ ಟಿಕೆಟ್ ಆಫರ್ ಕೊಡುತ್ತಿದೆ. ಇಂದು (ಆಗಸ್ಟ್ 7) ಮಧ್ಯಾಹ್ನದಿಂದ ಗುರುವಾರ ಸಂಜೆಯವರೆಗೆ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದ 2 ಟಿಕೆಟ್ ಖರೀದಿಸಿದರೆ ಒಂದು ಟಿಕೆಟ್ ಫ್ರೀ ಕೊಡಲಾಗುತ್ತಿದೆ. "ಇಡೀ ಥಿಯೇಟರ್ ತುಂಬ್ಕೊಂಡು ಎಲ್ಲರೂ ನಗಾಡ್ಕೊಂಡು ತೇಲಾಡ್ಕೊಂಡು ಖುಷಿಖುಷಿಯಾಗಿ ಇರ್ಬೇಕು ಅಂತ ನಮ್ ಆಸೆ" ಎಂದು ಚಿತ್ರತಂಡ ಹೇಳಿದೆ.

Hostel- Hudugaru- Bekagiddare-free-ticket

ಟಿಕೆಟ್ ವಿತರಿಸಿದ ಅನುಶ್ರೀ

'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಬಿಡುಗಡೆಯಾದ ದಿನದಿಂದಲೂ ವಿಭಿನ್ನವಾಗಿ ತಂಡ ಪ್ರಚಾರ ಮಾಡುತ್ತಾ ಬರುತ್ತಿದೆ. ಭಾನುವಾರ(ಆಗಸ್ಟ್ 6)ರಂದು ವೀರೇಶ್ ಚಿತ್ರಮಂದಿರದಲ್ಲಿ ನಿರೂಪಕಿ, ನಟಿ ಅನುಶ್ರೀ ಪ್ರೇಕ್ಷಕರಿಗೆ ಟಿಕೆಟ್ ವಿತರಿಸಿದರು. ಅಭಿಮಾನಿಯಾಗಿ ಈ ಸಿನಿಮಾ ಸಕ್ಸಸ್ ಸೆಲೆಬ್ರೇಟ್ ಮಾಡುತ್ತಿರುವುದಾಗಿ ಹೇಳಿದ್ದರು.

ಶೀಘ್ರದಲ್ಲೇ ತೆಲುಗಿನಲ್ಲಿ ರಿಲೀಸ್

ಕನ್ನಡ ಸಿನಿರಸಿಕರು ಮಾತ್ರವಲ್ಲ ಪರಿಭಾಷಿಕರು ಕೂಡ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಹಾಗಾಗಿ ಚಿತ್ರವನ್ನು ಬೇರೆ ರಾಜ್ಯಗಳಲ್ಲಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಡೈಲಾಗ್‌ಗಳು ಬಹಳ ಸ್ಪೀಡ್ ಎರುವುದರಿಂದ ಬೇರೆ ಭಾಷೆಗೆ ಡಬ್ ಮಾಡುವುದು ಕಷ್ಟ ಎನ್ನಲಾಗುತ್ತಿದೆ. ಆದರೂ ತೆಲುಗಿಗೆ ಡಬ್ ಮಾಡುವ ಪ್ರಯತ್ನ ನಡೀತಿದೆ. ಶೀಘ್ರದಲ್ಲೇ ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ರಿಲೀಸ್ ಆಗಲಿದೆ.

'ಹಾಸ್ಟೆಲ್.. ಕಲೆಕ್ಷನ್ ಎಷ್ಟು?

ಮೊದಲ ವಾರವೇ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ 7 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಇದೀಗ 17 ದಿನಕ್ಕೆ 12 ಕೋಟಿ ರೂ.ವರೆಗೆ ಕಲೆಕ್ಷನ್ ಮಾಡಿರುವ ಅಂದಾಜಿದೆ. ಒಟ್ನಲ್ಲಿ ಕಡಿಮೆ ಬಜೆಟ್‌ನಲ್ಲಿ ಮೂಡಿ ಬಂದ ಸಿನಿಮಾ ಒಳ್ಳೆ ಗಳಿಕೆಯನ್ನೇ ಕಂಡಿದೆ. ಚಿತ್ರಕ್ಕೆ ಆರಂಭದಲ್ಲಿ ಪುನೀತ್‌ ರಾಜ್‌ಕುಮಾರ್ ಬೆಂಬಲ ಸಿಕ್ಕಿತ್ತು. ಬಳಿಕ ರಮ್ಯಾ ಚಿತ್ರದಲ್ಲಿ ನಟಿಸಿದ್ದರು. ಸಿನಿಮಾ ರಿಲೀಸ್ ಬಳಿಕ ಶಿವಣ್ಣ ಸೇರಿದಂತೆ ಸ್ಯಾಂಡಲ್‌ವುಡ್ ತಾರೆಯರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು.

More from Filmibeat

English summary
Hostel Hudugaru Bekagiddare Buy 2 get 1 free ticket offer. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X