For Quick Alerts
  ALLOW NOTIFICATIONS  
  For Daily Alerts

  ಹಾಟ್ ಅಂಡ್ ವೆಟ್ ಅವತಾರದಲ್ಲಿ ಕನ್ನಡ ನಟಿಯರು

  By ರವಿಕಿಶೋರ್
  |

  ಈಗ ಸಖತ್ ಹಾಟ್ ವೆದರ್ ಬೇರೆ. ಕೂಲ್ ಕೂಲ್ ಆಗಿ ಏನೇ ಕಂಡರೂ ಜನ ಮುಗಿಬೀಳುತ್ತಾರೆ. ಗರತಿ ಗೌರಮ್ಮನಂತಹ ಪಾತ್ರಗಳನ್ನು ಪ್ರೇಕ್ಷಕರು ತೆರೆಯ ಮೇಲೆ ಕಂಡು ಬಹಳ ವರ್ಷಗಳೇ ಕಳೆದು ಹೋಗಿವೆ. ಈಗ ಏನಿದ್ದರೂ ಬಿಕಿನಿ, ತುಂಡುಡುಗೆ, ಒದ್ದೆಮುದ್ದೆ ಚಿತ್ರಗಳದ್ದೇ ಮಾಯಾ ಜಾದು.

  ಇಲ್ಲಿವೇ ನೋಡಿಗೆ ಕಣ್ಣಿಗೆ ತಂಪೆರೆಯುವ ಒಂದಷ್ಟು ಕೂಲ್ ಚಿತ್ರಗಳು. ಈ ರೀತಿಯ ಪಾತ್ರಗಳಲ್ಲಿ ಅಭಿನಯಿಸುವಾಗ ಎಲ್ಲಾ ನಟಿಯರದ್ದೂ ಒಂದೇ ಡೈಲಾಗ್. ಅದೇನೆಂದರೆ ಆ ರೀತಿಯ ಹಾಟ್ ಅಂಡ್ ವೆಟ್ ಸನ್ನಿವೇಶವನ್ನು ಕಥೆ ಬಯಸುತ್ತಿತ್ತು. ಅದಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸುವುದು ತಮ್ಮ ಕರ್ತವ್ಯ ತಾನೆ ಎಂಬುದು. [ಬೆಳ್ಳಿಪರದೆ ಮೇಲಿನ ಒದ್ದೆಮುದ್ದೆ ಮಳೆ ಚಿತ್ರಗಳು]

  ಇನ್ನು ಕಥೆ ಯಾಕೆ ಆ ರೀತಿಯ ಹಾಟ್ ಸನ್ನಿವೇಶವನ್ನು ಬಯಸುತ್ತದೋ ಏನೋ ಗೊತ್ತಿಲ್ಲ. ಈ ಬಗ್ಗೆ ನಿರ್ದೇಶಕರನ್ನು ಕೇಳಿದರೆ ಅವರೂ ಏನೇನೋ ಸಮಜಾಯಿಷಿ ಕೊಡುತ್ತಾರೆ. ಆದರೆ ಈ ರೀತಿಯ ಮಸಾಲೆಗಳಿದ್ದರೆ ತಾನೆ ಚಿತ್ರ ಓಡುವುದು ಎಂಬುದು ಗಾಂಧಿಕ್ಲಾಸಿನ ಪ್ರೇಕ್ಷಕರಿಗೆ ಅರ್ಥವಾಗುವುದಿಲ್ಲವಾ? ಹೆಚ್ಚಾಗಿ ತಲೆಕೆಡಿಸಿಕೊಳ್ಳದೆ ಕೂಲ್ ಚಿತ್ರಗಳ ಮೇಲೆ ಒಮ್ಮೆ ಕಣ್ಣಾಡಿಸಿ ಬರೋಣ ಬನ್ನಿ.

  ಜೂಲಿ ಚಿತ್ರದ ಕಾಡುವ ಹಾಟ್ ಸನ್ನಿವೇಶ

  ಜೂಲಿ ಚಿತ್ರದ ಕಾಡುವ ಹಾಟ್ ಸನ್ನಿವೇಶ

  ರಮ್ಯಾ ಈಗ ಚಿತ್ರರಂಗದಿಂದ ದೂರಸರಿದಿದ್ದಾರೆ. ಈಗ ಅವರದೇನಿದ್ದರೂ ರಾಜಕೀಯದಲ್ಲಿದ್ದುಕೊಂಡು ಸಮಾಜಸೇವೆ ಮಾಡುವುದು. ಆದರೆ ಅವರ ಪಾತ್ರಗಳು ಮಾತ್ರ ಇನ್ನೂ ಪ್ರೇಕ್ಷಕರನ್ನು ಕಾಡುತ್ತಲೇ ಇವೆ. 'ಜೂಲಿ' ಚಿತ್ರದ ಹಾಟ್ ಸನ್ನಿವೇಶದಲ್ಲಿ ರಮ್ಯಾರ ಒಂದು ಮೋಹಕ ಲುಕ್.

  ನೀರಿಗಿಳಿದು ಪಡ್ಡೆಗಳ ಎದೆ ಬೆಚ್ಚಗೆ ಮಾಡಿದ ತಾರೆ

  ನೀರಿಗಿಳಿದು ಪಡ್ಡೆಗಳ ಎದೆ ಬೆಚ್ಚಗೆ ಮಾಡಿದ ತಾರೆ

  ತಮ್ಮ ಹೈಟು, ವೇಯ್ಟು, ಲುಕ್ಕು, ಕಲರ್ ನಲ್ಲಿ ಚಿತ್ರರಸಿಕರನ್ನು ಕೆಣಕುತ್ತಿರುವ ತಾರೆ ರಾಗಿಣಿ ದ್ವಿವೇದಿ. ದುನಿಯಾ ವಿಜಯ್ ಅಭಿನಯದ 'ಶಂಕರ್ ಐಪಿಎಸ್' ಚಿತ್ರದಲ್ಲಿ ತಮ್ಮ ನೀರಿಗಿಳಿದು ಪಡ್ಡೆಗಳ ಎದೆ ಬೆಚ್ಚಗೆ ಮಾಡಿದ ತಾರೆ.

  ಪ್ರಣೀತಾ ಸಹ ಯಾರಿಗೇನು ಕಮ್ಮಿ ಇಲ್ಲ

  ಪ್ರಣೀತಾ ಸಹ ಯಾರಿಗೇನು ಕಮ್ಮಿ ಇಲ್ಲ

  ಇನ್ನು ನೀರಿಗಿಳಿಯುವುದರಲ್ಲಿ ಪ್ರಣೀತಾ ಸಹ ಯಾರಿಗೇನು ಕಮ್ಮಿ ಇಲ್ಲ. ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಬೇಕಾದರೆ ನೀರಿಗೂ ಇಳಿಯುತ್ತೇನೆ ಬಿಕಿನಿನೂ ತೊಡುತ್ತೇನೆ ಎಂಬ ಹಳೆ ಡೈಲಾಗ್ ಇದ್ದೇ ಇದೆ.

  ಪ್ರಿಯಾಮಣಿ ಎಲ್ಲರಿಗೂ ಪ್ರಿಯವಾಗುತ್ತಾರೆ

  ಪ್ರಿಯಾಮಣಿ ಎಲ್ಲರಿಗೂ ಪ್ರಿಯವಾಗುತ್ತಾರೆ

  ಯಾವುದೇ ಬಾಲಿವುಡ್ ತಾರೆಗಳಿಗೆ ಕಡಿಮೆ ಇಲ್ಲದಂತೆ, ಯಾವುದೇ ದಕ್ಷಿಣ ಭಾರತದ ತಾರೆಗಳಿಗೆ ಹೆಚ್ಚಿಲ್ಲದಂತೆ ಕಾಣಿಸಿಕೊಳ್ಳುವುದರಲ್ಲಿ ಪ್ರಿಯಾಮಣಿ ಎಕ್ಸ್ ಪರ್ಟ್. ಪಾತ್ರ ಅದು ಯಾವುದೇ ಆಗಿರಲಿ ಪ್ರಿಯಾಮಣಿ ಎಲ್ಲರಿಗೂ ಪ್ರಿಯವಾಗುತ್ತಾರೆ.

  ರಸಿಕರ ಹುಬ್ಬೇರಿಸುವ ಜೆನ್ನಿಫರ್ ಕೊತ್ವಾಲ್

  ರಸಿಕರ ಹುಬ್ಬೇರಿಸುವ ಜೆನ್ನಿಫರ್ ಕೊತ್ವಾಲ್

  ಜೋಗಿ ಚಿತ್ರದ ಈ ಹಾಟ್ ಬೆಡಗಿ ಮತ್ತೆ ಕನ್ನಡದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಈಕೆಯೂ ನೀರಿಗಿಳಿದರೆ ಎಂಥಹವರೂ ಹುಬ್ಬೇರಿಸಲೇಬೇಕು.

  ರಾಮ ಶಾಮ ಭಾಮ ಚಿತ್ರದ ಸ್ಪೈಸಿ ಬೆಡಗಿ

  ರಾಮ ಶಾಮ ಭಾಮ ಚಿತ್ರದ ಸ್ಪೈಸಿ ಬೆಡಗಿ

  ಕೊಡಗಿನ ಬೆಡಗಿ ಡೈಸಿ ಬೋಪನಣ್ಣ ಎಲ್ಲರ ಕಣ್ಣು ಕುಕ್ಕಿದ್ದು ರಾಮ ಶಾಮ ಭಾಮ ಚಿತ್ರದ ಹಾಟ್ ಸನ್ನಿವೇಶದಲ್ಲಿ. ಅದ್ಯಾಕೋ ಏನೋ ಡೈಸಿ ಮತ್ತೆ ಸ್ಪೈಸಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ.

  ಚಮ್ಕಾಯ್ಸಿ ಚಿಂದಿ ಉಡಾಯಿಸುವ ನಿಧಿ ಸುಬ್ಬಯ್ಯ

  ಚಮ್ಕಾಯ್ಸಿ ಚಿಂದಿ ಉಡಾಯಿಸುವ ನಿಧಿ ಸುಬ್ಬಯ್ಯ

  ಬಾಲಿವುಡ್ ಗೆ ಹಾರಿದ ಮತ್ತೊಬ್ಬ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಚಮ್ಕಾಯ್ಸಿ ಚಿಂದಿ ಉಡಾಯ್ಸುವುದರಲ್ಲಿ ತಮ್ಮದೇ ಛಾಪು ಮೂಡಿಸಿದವರು. ಅವರ ಹಾಟ್ ಅವತಾರ ನೋಡಿ.

  ವೀಣಾ ಮಲಿಕ್ ಪಂಚರಂಗಿ ಚಿತ್ರ

  ವೀಣಾ ಮಲಿಕ್ ಪಂಚರಂಗಿ ಚಿತ್ರ

  ಪಾಕಿಸ್ತಾನಿ ತಾರೆ ವೀಣಾ ಮಲಿಕ್ ಅಭಿನಯಿಸಿದ ಒಂದೇ ಒಂದು ಕನ್ನಡದ ಚಿತ್ರ 'ಸಿಲ್ಕ್ ಸಖತ್ ಹಾಟ್'. ಚಿತ್ರ ನಿರೀಕ್ಷಿಸಿದಷ್ಟು ಯಶಸ್ವಿಯಾಗಲಿಲ್ಲ, ಆದರೆ ತಮ್ಮ ಪಂಚರಂಗಿ ಚಿತ್ರಗಳ ಮೂಲಕ ಪಡ್ಡೆಗಳ ಎದೆಗೆ ಕೊಳ್ಳಿ ಇಟ್ಟರು.

  ರೂಪಿಕಾ ನವರಂಗಿ ಚಿತ್ರ

  ರೂಪಿಕಾ ನವರಂಗಿ ಚಿತ್ರ

  ವೀಣಾ ಮಲಿಕ್ ಅವರ ಪಂಚರಂಗಿ ಚಿತ್ರಗಳನ್ನು ನೋಡಿದಿರಿ. ಈಗ ನೋಡಿ ರೂಪಿಕಾ ಅವರ 'ನವರಂಗಿ' ಚಿತ್ರಗಳು. ನವರಂಗಿ ಚಿತ್ರದಲ್ಲಿ ಅವರ ಈಜುಡುಗೆ ದೃಶ್ಯಗಳು ಒಂದು ವರ್ಗದ ಪ್ರೇಕ್ಷಕರ ಮೈಚಳಿ ಬಿಡಿಸಿದವು.

  ಬೆಂಕಿ ಬಿರುಗಾಳಿ ಬೆಡಗಿ ರಿಷಿಕಾ ಸಿಂಗ್

  ಬೆಂಕಿ ಬಿರುಗಾಳಿ ಬೆಡಗಿ ರಿಷಿಕಾ ಸಿಂಗ್

  ಸ್ಯಾಂಡಲ್ ವುಡ್ ನಲ್ಲಿ 'ಬೆಂಕಿ ಬಿರುಗಾಳಿ' ಎಬ್ಬಿಸಿದ ತಾರೆ ರಿಷಿಕಾ ಸಿಂಗ್. ಬೆಂಕಿ ಬಿರುಗಾಳಿ ಚಿತ್ರದ ಹಾಟ್ ಸನ್ನಿವೇಶಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದವು.

  ಹಳೆ ಪಾತ್ರೆ ಹಳೆ ಕಬ್ಬಿಣ ಅಲ್ಲ ಐಂದ್ರಿತಾ ರೇ

  ಹಳೆ ಪಾತ್ರೆ ಹಳೆ ಕಬ್ಬಿಣ ಅಲ್ಲ ಐಂದ್ರಿತಾ ರೇ

  ಇನ್ನು ಚಿಗರೆ ಕಂಗಳ ಚೆಲುವೆ ಐಂದ್ರಿತಾ ರೇ ಅವರ 'ಜಂಗ್ಲಿ' ಚಿತ್ರದ ಜಂಗಲ್ ಚಿತ್ರಗಳನ್ನು ಮರೆಯಲು ಸಾಧ್ಯವೇ? ದುನಿಯಾ ವಿಜಯ್ ಜೊತೆ ಹಳೆ ಪಾತ್ರೆ ಹಳೆ ಕಬ್ಬಿಣ ಹಾಡು ಯಾರೂ ಮರೆತಿರಲಿಕ್ಕೂ ಸಾಧ್ಯವಿಲ್ಲ.

  English summary
  Be it from Sandalwood Queen Ramya to Aindrita Ray, many other actresses in Kannada cinema have proved that they are not less than any Bollywood's hot diva by sporting spicy outfits on screen.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X