'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಯಾಕೆ ನೋಡ್ಬೇಕು.? ಇಲ್ಲಿದೆ ಕಾರಣ
ನಟ ಅನಂತ್ ನಾಗ್ ಹಾಗೂ ರಾಧಿಕಾ ಚೇತನ್ ಅಭಿನಯದ ವಿಶಿಷ್ಟ ಕಥಾ ಹಂದರ ಹೊಂದಿರುವ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಸಿನಿಮಾ ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಟ್ರೈಲರ್ ಮತ್ತು ಹಾಡುಗಳ ಮೂಲಕ ಹೊಸ ರೀತಿಯ ಭರವಸೆ ಮೂಡಿಸಿದೆ.
ಶ್ರೀ ಕನಕದಾಸರ ರಚನೆಯ ಹಾಡಿನ ಸಾಲನ್ನು ಶೀರ್ಷಿಕೆ ಆಗಿ ಇಟ್ಟುಕೊಂಡಿರುವ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಕನ್ನಡ ಚಿತ್ರವನ್ನ ಕಲರ್ಸ್ ಆಫ್ ಆನೇಕಲ್ ಸುದರ್ಶನ್,ಜಿ, ರಾಮಮೂರ್ತಿ ಎಚ್ ಆರ್ ಹಾಗೂ ಅಕ್ಮೆ ಮೂವೀಸ್ ಹರೀಶ್ ಶೆರೀಗರ್ ನಿರ್ಮಾಣ ಮಾಡಿದ್ದಾರೆ.
ಅಷ್ಟಕ್ಕೂ, ಈ ಚಿತ್ರವನ್ನ ಯಾಕೆ ನೋಡ್ಬೇಕು, ಏನಿದೆ ಈ ಚಿತ್ರದಲ್ಲಿ ಅಂತಹ ವಿಶೇಷತೆಗಳು ಎಂದು ಯೋಚನೆ ಮಾಡುವ ಸಿನಿ ಅಭಿಮಾನಿಗಳು ಈ ಅಂಶಗಳನ್ನ ಗಮನಿಸಬೇಕು.

ಅನಂತ್ ನಾಗ್ ಸಿನಿಮಾ
'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಎಂದು ವಿಶೇಷವಾಗಿ ಶೀರ್ಷಿಕೆ ಇಟ್ಟುಕೊಂಡಿರುವ ಈ ಸಿನಿಮಾದಲ್ಲಿ ಅನಂತ್ ನಾಗ್ ಮುಖ್ಯ ಪಾತ್ರವೆಂಬುದು ಪ್ಲಸ್ ಪಾಯಿಂಟ್. 'ಗೋಧಿಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ನಂತರ ಮತ್ತೊಂದು ವಿಶೇಷವಾದ ಕಾನ್ಸೆಪ್ಟ್ ಮೂಲಕ ನಿಮ್ಮ ಮುಂದೆ ಬರ್ತಿದ್ದಾರೆ. ಹೀಗಾಗಿ, ಈ ಚಿತ್ರ ನಿಮ್ಮ ರಂಜಿಸುವಲ್ಲಿ ಯಾವುದೇ ಅನುಮಾನ ಬೇಡ.

ಟ್ರೈಲರ್ ಹುಟ್ಟುಹಾಕಿರುವ ಸಸ್ಪೆನ್ಸ್
'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಹೆಸರು ಕೇಳಿದಾಕ್ಷಣ, ಇದ್ಯಾವುದೋ ಆರ್ಟ್ ಸಿನಿಮಾ ಅಂದುಕೊಂಡಿದ್ದರೇ ತಪ್ಪು. ಇದು ಕಮರ್ಷಿಯಲ್ ಸಿನಿಮಾನೇ. ಎರಡು ಜನರೇಷನ್ ಕಥೆಯನ್ನ ಹೊಂದಿದ್ದು, ಅನಂತ್ ನಾಗ್ ಮತ್ತು ರಾಧಿಕಾ ಚೇತನ್ ಬಹಳ ಅದ್ಭುತವಾಗಿ ಪಾತ್ರ ನಿಭಾಯಿಸಿದ್ದಾರೆ. ಇದನ್ನ ಟ್ರೈಲರ್ ಸಾಬೀತು ಮಾಡಿದೆ.

ನಿರ್ದೇಶಕರ ಸಿನಿಮಾ
ಅಂದ್ಹಾಗೆ, ಈ ಚಿತ್ರವನ್ನ ನಿರ್ದೇಶನ ಮಾಡಿರುವುದು ಕಬ್ಬಡ್ಡಿ', 'ಸಂತೆಯಲ್ಲಿ ನಿಂತ ಕಬೀರ' ಖ್ಯಾತಿಯ ನರೇಂದ್ರ ಬಾಬು. ನಿರ್ದೇಶನದ ಜೊತೆ ಕಥೆ, ಚಿತ್ರಕಥೆ, ಸಂಭಾಷಣೆ, ಗೀತ ಸಾಹಿತ್ಯ ರಚಿಸಿದ್ದಾರೆ. ಹೀಗಾಗಿ, ಇವರ ಸಿನಿಮಾ ಅಂದ್ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗುತ್ತೆ.

ಟೆಕ್ನಿಕಲಿ ಸ್ಟ್ರಾಂಗ್ ಆಗಿದೆ
ಇನ್ನುಳಿದಂತೆ ಈ ಚಿತ್ರಕ್ಕೆ ಪಿ ಕೆ ಎಚ್ ದಾಸ್ ಛಾಯಾಗ್ರಹಣ, ಹಿಂದೂಸ್ತಾನಿ ಶಾಸ್ಟ್ರೀಯ ಸಂಗೀತ ಹಿನ್ನಲೆ ಇರುವ ರಾಮಚಂದ್ರ ಹಡಪದ ಸಂಗೀತ ಒದಗಿಸಿದ್ದಾರೆ. ಈ ಎಲ್ಲ ಅಂಶಗಳನ್ನ ಗಮನಿಸಿದ್ರೆ, ಈ ಸಿನಿಮಾವನ್ನ ನೋಡಲೇಬೇಕು ಎನ್ನಿಸುವುದ್ರಲ್ಲಿ ಯಾವುದೇ ಸಂಶಯವಿಲ್ಲ.


Click it and Unblock the Notifications











