For Quick Alerts
  ALLOW NOTIFICATIONS  
  For Daily Alerts

  'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಟೈಟಲ್ ಕೊಟ್ಟಿದ್ದು ಅವರೇ.!

  By Bharath Kumar
  |

  ಇಂದ್ರಬಾಬು ನಿರ್ದೇಶನ ಮಾಡಿರುವ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಸಿನಿಮಾ ಮುಂದಿನ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಕ್ಕೆ ಬರ್ತಿದೆ. ಈಗಾಗಲೇ ಟ್ರೈಲರ್ ಮೂಲಕ ದೊಡ್ಡ ಮಟ್ಟದ ನಿರೀಕ್ಷೆ ಮತ್ತು ಕುತೂಹಲ ಮೂಡಿಸಿರುವ ಸಿನಿಮಾ ವಿಶೇಷವಾಗಿ ರಂಜಸಲಿದೆ ಎಂಬ ವಿಶ್ವಾಸ ಚಿತ್ರತಂಡದ್ದು.

  ಹಿರಿಯ ನಟ ಅನಂತ್ ನಾಗ್ ಮತ್ತು ಯುವ ನಟಿ ರಾಧಿಕ ಚೇತನ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಕತೆ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿರುವ ಸಿನಿಮಾ ಚಿತ್ರಕಥೆಯಲ್ಲಿ ಬಹಳ ರೋಚಕತೆಯಿಂದ ಮಾಡಿದೆ. ಅದಕ್ಕೆ ಸಾಕ್ಷಿ ಚಿತ್ರದ ಟ್ರೈಲರ್.

  ದುಬೈಯಲ್ಲಿ ಬಿಡುಗಡೆಗೊಂಡ ದುಬೈಯಲ್ಲಿ ಬಿಡುಗಡೆಗೊಂಡ "ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಚಿತ್ರದ ಟ್ರೇಲರ್

  ಇದು ಎರಡು ಜನರೇಷನ್ ಕಥೆ ಹೊಂದಿದೆ. ಒಂದು ಅನಂತ್ ‌ನಾಗ್‌ ಅವರ ಕಥೆ ಸಾಗಿದರೆ, ಇನ್ನೊಂದು ರಾಧಿಕಾ ಚೇತನ್ ಜನರೇಷನ್ ಕಥೆ ತೆರೆದುಕೊಳ್ಳುತ್ತೆ. ಮುಖ್ಯವಾಗಿ ಲಿವಿಂಗ್‌ ರಿಲೇಷನ್ ‌ಶಿಪ್‌ ಕುರಿತಾದ ಹೂರಣವಿದೆ. ಈ ಎರಡೂ ಕಥೆಗಳಲ್ಲಿ ಸೂಕ್ಷ್ಮತೆಗಳಿವೆ. ಭದ್ರತೆ, ಅಭದ್ರತೆ ಕುರಿತಾದ ಅಂಶಗಳು ಚಿತ್ರದಲ್ಲಿವೆ.

  ಅಂದ್ಹಾಗೆ, ಈ ಸಿನಿಮಾಗೆ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಎಂದು ಶೀರ್ಷಿಕೆ ಕೊಟ್ಟಿದ್ದು ಸ್ವತಃ ಅನಂತ್ ನಾಗ್ ಅವರಂತೆ. ಚಿತ್ರದ ಸ್ಕ್ರಿಪ್ಟ್ ಸಿದ್ಧ ಮಾಡಿ ನಿರ್ದೇಶಕರು ಅನಂತ್ ನಾಗ್ ಅವರಿಗೆ ಓದಲು ಕೊಟ್ಟಿದ್ದರಂತೆ. ಸ್ಕ್ರಿಪ್ಟ್ ಓದಿದ ನಂತರ ಅನಂತ್ ಅವರಿಗೆ ತುಂಬಾ ಇಷ್ಟವಾಗಿ, ಈ ಚಿತ್ರಕ್ಕೆ ಈ ಟೈಟಲ್ ಇಡಿ ಎಂದು ಸಲಹೆ ನೀಡಿದ್ದರಂತೆ. ಅದರಂತೆ ಸಿನಿಮಾ ಕೂಡ ಅಷ್ಟೇ ಸೊಗಸಾಗಿ ಮೂಡಿ ಬಂದಿದೆ.

  ಈಗಾಗಲೇ 'ಕಬ್ಬಡ್ಡಿ', 'ಸಂತೆಯಲ್ಲಿ ನಿಂತ ಕಬೀರ' ಸೇರಿದಂತೆ ಹೊಸಬಗೆಯ ಸಿನಿಮಾ ಮಾಡಿರುವ ನಿರ್ದೇಶಕ ನರೇಂದ್ರಬಾಬು ಈಗ ಮತ್ತೊಂದು ಹೊಸ ಬಗೆಯ ಚಿತ್ರದೊಂದಿಗೆ ಬರ್ತಿದ್ದಾರೆ. ಇನ್ನುಳಿದಂತೆ ಸುದರ್ಶನ್‌, ರಾಮಮೂರ್ತಿ ಹಾಗೂ ದುಬೈಯ ಹೆಸರಾಂತ ಉದ್ಯಮಿ ಹರೀಶ್ ಶೇರಿಗಾರ್ ದಂಪತಿ ನಿರ್ಮಾಣ ಮಾಡಿದ್ದಾರೆ. ರಾಮಚಂದ್ರ ಅಪ್ಪಾದ್ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ.

  ಹೀಗೆ, ಚಿತ್ರದ ಶೀರ್ಷಿಕೆ, ಟ್ರೈಲರ್, ಕಲಾವಿದರಿಂದ ವಿಶೇಷವೆನಿಸಿಕೊಂಡಿರುವ ಈ ಸಿನಿಮಾ ಇದೇ ತಿಂಗಳು 25 ರಂದು ತೆರೆಕಾಣುತ್ತಿದೆ. ಕೆ.ಜಿ ರಸ್ತೆಯ ಪ್ರಮುಖ ಚಿತ್ರಮಂದಿರ ಸೇರಿದಂತೆ ಪಿವಿಆರ್, ಗೋಪಾಲನ್ ಮಾಲ್, ಐನಾಕ್ಸ್ ಗಳ ಜೊತೆಗೆ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

  English summary
  Kannada actor ananth nag and radhika chethan starrer Hottegaagi Genu Battegagi movie will release on may 25th. the movie directed by narendra babu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X