ಬಾಡಿಗೆ ಮನೆ ಖಾಲಿ ಮಾಡಿದ್ಮೇಲೂ ಯಶ್ ಮೇಲೆ ಮತ್ತೊಂದು ಆರೋಪ.!

Recommended Video

ಬಗೆಹರಿದರೂ ಮುಗಿಯುತ್ತಿಲ್ಲ ಮನೆ ವಿವಾದ | FILMIBEAT KANNADA

ರಾಕಿಂಗ್ ಸ್ಟಾರ್ ಯಶ್ ಮತ್ತು ಅವರ ಕುಟುಂಬಕ್ಕೆ ತಲೆ ನೋವಾಗಿದ್ದ ಬಾಡಿಗೆ ಮನೆಯ ವಿವಾದ ಕೊನೆಗೂ ಬಗೆಹರಿದಿದೆ. ಅದೃಷ್ಟದ ತಂದು ಕೊಟ್ಟಿದ್ದ ಮನೆಯನ್ನ ರಾಕಿ ಭಾಯ್ ಖಾಲಿ ಮಾಡಿ ಮನೆ ಮಾಲೀಕರಿಗೆ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಹಲವು ವರ್ಷಗಳಿಂದ ಸಾಕಷ್ಟು ಟೀಕೆಗಳನ್ನ ಎದುರಿಸಿದ್ದ ಯಶ್ ಇನ್ಮುಂದೆ ಆರಾಮಾಗಿ ಇರಬಹುದು ಎಂದು ನಿಟ್ಟುಸಿರು ಬಿಟ್ಟಿದ್ದರು.

ಆದರೆ ಬಾಡಿಗೆ ಮನೆ ಖಾಲಿ ಮಾಡಿದ್ರೂ ಆ ವಿವಾದದ ಮನೆಯ ನಂಟು ಯಶ್ ಅವರನ್ನ ಬಿಡುತ್ತಿಲ್ಲ. ಮತ್ತೊಂದು ವಿಚಾರಕ್ಕೆ ಯಶ್ ಅವರ ಮೇಲೆ ಮನೆ ಮಾಲೀಕರು ಆರೋಪ ಮಾಡಿದ್ದಾರೆ.

ಕೋರ್ಟ್ ಆದೇಶದಂತೆ ಮೇ ತಿಂಗಳಲ್ಲಿ ಮನೆ ಖಾಲಿ ಮಾಡಬೇಕಿತ್ತು. ನಂತರ ಹೈಕೋರ್ಟ್ ನಲ್ಲಿ ಮನವಿ ಮಾಡಿಕೊಂಡಿದ್ದ ಯಶ್ ಅವರ ತಾಯಿ, ಊರಿನಲ್ಲಿ ಮನೆ ಕಟ್ಟುತ್ತಿದ್ದು ಇನ್ನು ಸ್ವಲ್ಪ ದಿನ ಕಾಲಾವಕಾಶ ಕೇಳಿದ್ದರು. ಆದ್ರೀಗ, ಮನೆಯನ್ನ ಬಿಟ್ಟು ಕೊಟ್ಟಿದ್ದಾರೆ. ಆದರೂ ಯಶ್ ಅವರ ಮೇಲೆ ಇನ್ನೊಂದು ಆರೋಪ ಬಂದಿದೆ. ಮುಂದೆ ಓದಿ....

ಮನೆ ವಸ್ತುಗಳನ್ನ ಪುಡಿ ಮಾಡಿದ್ದಾರೆ.!

ಮನೆ ವಸ್ತುಗಳನ್ನ ಪುಡಿ ಮಾಡಿದ್ದಾರೆ.!

ಮನೆಯನ್ನ ಖಾಲಿ ಮಾಡಿ ಮಾಲೀಕರಿಗೆ ಬಿಟ್ಟುಕೊಡುವ ವೇಳೆ ಯಶ್ ಅವರು ಮನೆಯಲ್ಲಿದ್ದ ವಸ್ತುಗಳನ್ನ ಹೊಡೆದು ಹಾಕಿದ್ದಾರೆ. ವಾರ್ಡ್ ರೋಬ್ ಬಾಗಿಲು, ಕಿಚನ್ ವಸ್ತುಗಳು, ಫಾರಿನ್ ಕಮೋಡ್ ಹೀಗೆ ಎಲ್ಲವನ್ನ ನಾಶ ಮಾಡಿದ್ದಾರೆ ಎಂದು ಮನೆ ಮಾಲೀಕ ಮುನಿಪ್ರಸಾದ್ ಆರೋಪಿಸಿದ್ದಾರೆ.

ಎರಡು ತಿಂಗಳು ಬಾಡಿಗೆ ಕೊಟ್ಟಿದ್ದಾರೆ

ಎರಡು ತಿಂಗಳು ಬಾಡಿಗೆ ಕೊಟ್ಟಿದ್ದಾರೆ

ಮನೆ ಖಾಲಿ ಮಾಡುವಾಗ ತಮಗೆ ಸೇರಿದ ಎಲ್ಲ ವಸ್ತುಗಳನ್ನ ತೆಗೆದುಕೊಂಡು ಹೋಗಿರುವ ಯಶ್ ಕುಟುಂಬ, ಮನೆ ಮಾಲೀಕರ ಮನೆ ವಸ್ತುಗಳನ್ನ ಸರಿಯಾಗಿ ಬಳಸಿಕೊಂಡಿಲ್ಲ ಎಂದು ದೂರಲಾಗಿದೆ. ಎರಡು ತಿಂಗಳ ಬಾಡಿಗೆ ಹಣ 80 ಸಾವಿರ ರೂಪಾಯಿ ಕೊಟ್ಟು ಮನೆ ಕೀ ಕೊಟ್ಟು ಹೋಗಿದ್ದು, ವಾಸಿಸಲು ಯೋಗ್ಯವಾಗಿರುವಂತೆ ಬಿಟ್ಟುಕೊಟ್ಟಿಲ್ಲ ಎನ್ನಲಾಗಿದೆ.

ಕೋರ್ಟ್ ಮೊರೆ ಹೋಗಲು ನಿರ್ಧಾರ

ಕೋರ್ಟ್ ಮೊರೆ ಹೋಗಲು ನಿರ್ಧಾರ

ಮನೆಯಲ್ಲಿದ್ದ ವಸ್ತುಗಳನ್ನ ನಾಶ ಮಾಡಿ, ವಾಸಕ್ಕೆ ಯೋಗ್ಯವಲ್ಲ ಎಂಬ ಸ್ಥಿತಿ ನಿರ್ಮಿಸಿರುವ ಯಶ್ ಕುಟುಂಬದ ವಿರುದ್ಧ ಕೇಸ್ ದಾಖಲಿಸಲು ಮನೆ ಮಾಲೀಕ ಮುಂದಾಗಿದ್ದಾರೆ ಎಂದು ಮನೆ ಮಾಲೀಕರ ಪರ ವಕೀಲರು ತಿಳಿಸಿದ್ದಾರೆ.

ಮಂಡ್ಯ ಪ್ರಚಾರದ ವೇಳೆಯೂ ಸದ್ದು ಮಾಡಿತ್ತು ವಿವಾದ

ಮಂಡ್ಯ ಪ್ರಚಾರದ ವೇಳೆಯೂ ಸದ್ದು ಮಾಡಿತ್ತು ವಿವಾದ

ಮಂಡ್ಯ ಚುನಾವಣೆಯಲ್ಲಿ ಸುಮಲತಾ ಪರ ಯಶ್ ಪ್ರಚಾರ ಮಾಡಿದ್ದರು. ಈ ವೇಳೆ ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರ್ ಬಾಡಿಗೆ ಕಟ್ಟಾಲಾಗದವರು ನಮ್ಮ ಯೋಗ್ಯತೆ ಬಗ್ಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ಯಶ್ ಅಭಿಮಾನಿಗಳಿಂಗ ತೀವ್ರ ವಿರೋಧ ಕೂಡ ವ್ಯಕ್ತವಾಗಿತ್ತು.

More from Filmibeat

English summary
Rocking star Yash vacate his rented house in banashankari (kathriguppe). but now house owner muni prasad decided to file another case on yash.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X