ಸ್ವಲ್ಪದರಲ್ಲಿ ರೇಣುಕಾಸ್ವಾಮಿ ಪ್ರಕರಣದಿಂದ ನಟ ಚಿಕ್ಕಣ್ಣ ಬಚಾವ್!

By ಫಿಲ್ಮಿಬೀಟ್ ಡೆಸ್ಕ್

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ & ಗ್ಯಾಂಗ್ ಜೈಲು ಸೇರುವಂತಾಗಿದೆ. ಆಗಸ್ಟ್ 1ರವರೆಗೆ 17 ಜನ ಆರೋಪಿಗಳ ನ್ಯಾಯಾಂಗ ಬಂಧನ ಮುಂದುವೆರೆಯುತ್ತಿದೆ. ಅದೃಷ್ಟವಶಾತ್ ಹಾಸ್ಯನಟ ಚಿಕ್ಕಣ್ಣ ಈ ಪ್ರಕರಣದಿಂದ ಪಾರಾಗಿದ್ದಾರೆ ಎನ್ನಲಾಗ್ತಿದೆ. ಚಿಕ್ಕಣ್ಣ ಬದಲು ಪ್ರದೋಶ್ ಸಂಕಷ್ಟಕ್ಕೆ ಸಿಲುಕಿದರು ಎನ್ನಲಾಗ್ತಿದೆ.

ಪೊಲೀಸರು ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಮುಂದುವರೆಸಿದ್ದಾರೆ. ಈ ವೇಳೆ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳು ಹೊರ ಬೀಳುತ್ತಿದ್ದಾರೆ. ಅಂದು ನಟ ದರ್ಶನ್ ಪಟ್ಟಣಗೆರೆ ಶೆಡ್‌ಗೆ ಹೋಗುವ ಮುನ್ನ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ಹಾಸ್ಯ ನಟ ಚಿಕ್ಕಣ್ಣ, ನಟ ಯಶಸ್ ಸೂರ್ಯ, ಆರೋಪಿ ಪ್ರದೋಶ್ ಸೇರಿದಂತೆ ಕೆಲವರು ಭಾಗಿ ಆಗಿದ್ದರು.

How comedian Chikkanna escaped from Renukaswamy case

ಪಾರ್ಟಿ ನಡೆಯುತ್ತಿದ್ದ ವೇಳೆಗೆ ರೇಣುಕಾಸ್ವಾಮಿಯನ್ನು ಕರೆತಂದ ಬಗ್ಗೆ ದರ್ಶನ್‌ಗೆ ಮಾಹಿತಿ ಸಿಕ್ಕಿತ್ತು. ಹಾಗಾಗಿ ಅವರು ಪಟ್ಟಣಗೆರೆ ಶೆಡ್‌ಗೆ ಕಡೆ ಹೊರಟಿದ್ದರು. ಈ ವೇಳೆ ನಟ ಚಿಕ್ಕಣ್ಣನನ್ನು ಕೂಡ ಕರೆದರು ಎನ್ನಲಾಗುತ್ತಿದೆ. ಆದರೆ ಅವರು ಮನೆಗೆ ಹೋಗುವುದಾಗಿ ಹೇಳಿ ಹೊರಟು ಹೋಗಿದ್ದಾರೆ. ರೇಣುಕಾಸ್ವಾಮಿಗೆ ಎಚ್ಚರಿಕೆ ನೀಡಲು ದರ್ಶನ್ ಹೊರಟ್ಟಿದ್ದರು. ಹಾಗಾಗಿ ಚಿಕ್ಕಣ್ಣ ಕೂಡ ಹೋಗಿದ್ದರೆ ಪ್ರಕರಣದಲ್ಲಿ ಸಿಲುಕಿಕೊಳ್ಳಬೇಕಾಗುತ್ತಿತ್ತು ಎನ್ನಲಾಗ್ತಿದೆ.

ದರ್ಶನ್ ಜೊತೆ ಹೋಗಲು ಚಿಕ್ಕಣ್ಣ ನಿರಾಕರಿಸಿದರೂ ಪ್ರದೋಶ್, 'ನಾನು ಬರ್ತೀನಿ ಬಾಸ್' ಎಂದು ಹೋದರಂತೆ. ಪಾರ್ಟಿ ವೇಳೆ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತಂದಿರುವ ಬಗ್ಗೆ ಯಾರಿಗೂ ಗೊತ್ತಿರಲಿಲ್ಲವಂತೆ. ದರ್ಶನ್ ಬೇಡ ಎಂದರೂ ಕೇಳದೇ ಪ್ರದೋಶ್ ಜೊತೆಗೆ ಹೋಗಿದ್ದರು, ಬಳಿಕ ಪ್ರಕರಣ ಮುಚ್ಚಿ ಹಾಕಲು ಆತನನ್ನು ದರ್ಶನ್ ಬಳಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಅಂದು ಚಿಕ್ಕಣ್ಣ ಕೊಂಚ ಯಾಮಾರಿದ್ದರೂ ಈಗ ಪ್ರಕರಣದ ಆರೋಪಿಯಾಗಿ ಜೈಲು ಸೇರುವಂತಾಗುತ್ತಿತ್ತು ಎನ್ನಲಾಗ್ತಿದೆ. ಇನ್ನು ಪ್ರಕರಣದ ಸಂಬಂಧ ಚಿಕ್ಕಣ್ಣಗೆ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ನೋಟಿಸ್ ನೀಡಿ ಠಾಣೆಗೆ ಕರೆಸಿದ್ದರು. ಆ ದಿನ ಪಾರ್ಟಿಯಲ್ಲಿ ಏನಾಯ್ತು, ರೇಣುಕಾಸ್ವಾಮಿ ಬಗ್ಗೆ ಏನಾದರೂ ಚರ್ಚೆ ಆಗಿತ್ತಾ? ಎಂದು ಪೊಲೀಸರು ವಿಚಾರಿಸಿದ್ದರು.

ವಿಚಾರಣೆ ಮುಗಿಸಿದ ಬಂದು ಚಿಕ್ಕಣ್ಣ ಮಾಧ್ಯಮಗಳ ಜೊತೆ ಮಾತನಾಡಿದ್ದರು. "ದರ್ಶನ್‌ ನನ್ನನ್ನು ಊಟಕ್ಕೆ ಕರೆದಿದ್ದರು. ಹೀಗಾಗಿ ಊಟಕ್ಕೆ ಹೋಗಿದ್ದೆ. ಇದು ಬಿಟ್ಟು ಬೇರೆ ಯಾವುದರ ಬಗ್ಗೆಯೂ ನನಗೆ ಮಾಹಿತಿ ಇಲ್ಲ" ಎಂದು ಪೊಲೀಸರ ಮುಂದೆ ಹೇಳಿದ್ದಾಗಿ ತಿಳಿಸಿದ್ದರು.

ಅವತ್ತು ಊಟ ಮಾಡಿಕೊಂಡು ನಾನು ಅಲ್ಲಿಂದ ಹೊರಟೆ. ಬಳಿಕ ಅಲ್ಲಿ ಏನಾಯ್ತು ಅನ್ನೋದರ ಬಗ್ಗೆ ನನಗೆ ಮಾಹಿತಿ ಇಲ್ಲ. ರೇಣುಕಾಸ್ವಾಮಿ ಬಗ್ಗೆ ಯಾವುದೇ ವಿಚಾರದ ಬಗ್ಗೆ ನನಗೆ ಗೊತ್ತಿರಲಿಲ್ಲ. ಟಿವಿಗಳಲ್ಲಿ ಬಂದ ಮೇಲೆಯೇ ಈ ವಿಚಾರದ ಬಗ್ಗೆ ಗೊತ್ತಾಯ್ತು. ಹೀಗಾಗಿ ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದರು.

More from Filmibeat

English summary
Comedian Chikkanna Just Missed From Renukaswamy's Case?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X