ಅಂಬಿ ನಿಧನದ ಸುದ್ದಿ ದಾಸನಿಗೆ ತಿಳಿದ 'ಆ ಕ್ಷಣ'ವನ್ನ ವಿವರಿಸಿದ ನಿರ್ಮಾಪಕಿ
Recommended Video

ರೆಬೆಲ್ ಸ್ಟಾರ್ ಅಂಬರೀಶ್ ಅವರ ನಿಧನದ ಸುದ್ದಿ ಅದೇಷ್ಟೋ ಅಭಿಮಾನಿಗಳಿಗೆ ಗೊತ್ತಾಗಿದ್ದೇ ಭಾನುವಾರ ಬೆಳಿಗ್ಗೆ. ಶನಿವಾರ ರಾತ್ರಿ ಸುಮಾರು 10 ಗಂಟೆಯ ಆಸುಪಾಸಿಗೆ ಈ ಸುದ್ದಿ ಹೊರಬಿತ್ತಾದರೂ, ಭಾನುವಾರ ಬೆಳಿಗ್ಗೆ ಎದ್ದಾಗ ಅನೇಕರಿಗೆ ಶಾಕ್ ಆಗಿತ್ತು.
ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊರದೇಶದಲ್ಲಿದ್ದರು. 'ಯಜಮಾನ' ಚಿತ್ರೀಕರಣಕ್ಕಾಗಿ ಸ್ವೀಡನ್ ದೇಶಕ್ಕೆ ಹೋಗಿದ್ದರು. ನಂತರ ಅಂಬಿ ನಿಧನದ ಸುದ್ದಿ ಗೊತ್ತಾಗುತ್ತಿದ್ದಂತೆ ಟ್ವಿಟ್ಟರ್ ನಲ್ಲಿ ಬೆಂಗಳೂರಿಗೆ ವಾಪಸ್ ಬರುತ್ತಿರುವುದಾಗಿ ಹೇಳಿದ್ದರು.
ಆದ್ರೆ, ಈ ವಿಷ್ಯ ದರ್ಶನ್ ಗೆ ತಿಳಿದಾಗ ಆ ಕ್ಷಣ ಹೇಗಿತ್ತು. ಆಗ ಅವರು ಏನು ಮಾಡಿದ್ರು. ಆ ನೋವನ್ನ ಹೇಗೆ ಭರಿಸಿದರು ಎಂದು ಯಾರಿಗೂ ಗೊತ್ತಿಲ್ಲ. ಆ ಕ್ಷಣವನ್ನ ಯಜಮಾನ ಚಿತ್ರದ ನಿರ್ಮಾಪಕಿ ಶೈಲಾಜ ನಾಗ್ ವಿವರಿಸಿದ್ದಾರೆ. ದರ್ಶನ್ ಈ ಕ್ಷಣ ಹೇಗಿದ್ರು.? ಮುಂದೆ ಓದಿ.....

ಕಣ್ಣಲ್ಲಿ ನೀರು ಬಂತು
'ಅಂಬರೀಶ್ ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ನಟ ದರ್ಶನ್ ಒಂದು ಕ್ಷಣ ದಿಗ್ಭ್ರಾಂತರಾಗಿ ಸುಮ್ಮನೆ ಕುಳಿತುಬಿಟ್ಟರಂತೆ. ಕಣ್ಣಲ್ಲಿ ನೀರು ಹರಿದುಬಂದಿತ್ತು. ಮಾತಿಲ್ಲ ಏನಿಲ್ಲ...ಅವರನ್ನ ಸಮಾಧಾನಪಡಿಸುವುದು ಹೇಗೆಂದು ಗೊತ್ತಾಗಲಿಲ್ಲ'' ಎಂದು ಯಜಮಾನ ಚಿತ್ರದ ನಿರ್ಮಾಪಕಿ ಶೈಲಾಜ್ ನಾಗ್ ವಿವರಿಸಿದ್ದಾರೆ.

ಈಗಲೇ ಹೊರಡಬೇಕು ಎಂದು ಸಿದ್ಧರಾದರು
''ಸುಮಾರು ಹೊತ್ತು ಸುಮ್ಮನೆ ಕೂತಿದ್ದ ದರ್ಶನ್ ನಂತರ ತಾವಾಗಿಯೇ ಎದ್ದು ಬಂದು, ನಾನು ಈಗಲೇ ಹೊರಡಬೇಕು ಎಂದರು. ನೀವೊಬ್ಬರೇ ಅಲ್ಲ, ನಾವೆಲ್ಲಾ ಹೋಗೋಣ ಅಂತ ಅವರನ್ನ ಸಮಾಧಾನ ಪಡಿಸಿದೆವು''

ಟಿಕೆಟ್ ಸಿಕ್ಕಿದ್ದು ಒಂದೇ
ನಂತರ ತುಂಬಾ ಕಷ್ಟಪಟ್ಟು ಟಿಕೆಟ್ ಬುಕ್ ಮಾಡಿದೆವು. ಆದ್ರೆ, ಎಷ್ಟೇ ಕಷ್ಟಪಟ್ಟರೂ ನಮಗೆ ಸಿಕ್ಕಿದ್ದು ಮಾತ್ರ ಒಂದೇ ಟಿಕೆಟ್. ದರ್ಶನ್ ಇದ್ದ ಪರಿಸ್ಥಿತಿಯಲ್ಲಿ ಒಬ್ಬರನ್ನೇ ಕಳುಹಿಸುವುದು ಹೇಗೆ ಎಂಬ ಚಿಂತೆ ನಮಗೆ. ಬಟ್, ಬೇರೆ ದಾರಿ ಇರಲಿಲ್ಲ. ಹಾಗಾಗಿ, ದರ್ಶನ್ ಅವರನ್ನ ಕಳುಹಿಸಿ ನಾವು ಸ್ವೀಡನ್ ನಲ್ಲೇ ಉಳಿದುಕೊಂಡೆವು'' ಎಂದು ನಿರ್ಮಾಪಕಿ ಹೇಳಿದ್ದಾರೆ.

ದುಬೈನಲ್ಲಿ ತುಂಬಾ ಸಮಯ ಕಾದ ದಾಸ
ಸ್ವೀಡನ್ ನಿಂದ ದುಬೈಗೆ ಬಂದ ದರ್ಶನ್, ದುಬೈನಲ್ಲಿ ಕನೆಕ್ಟಿಂಗ್ ಫ್ಲೈಟ್ ಗಾಗಿ ಸುಮಾರು 4 ಗಂಟೆ ಕಾದಿದ್ದರಂತೆ. ನಂತರ ಬೆಂಗಳೂರು ಫ್ಲೈಟ್ ಹತ್ತಿದ ದಾಸ ಬೆಳಿಗ್ಗೆ ಸೋಮವಾರ 10 ಗಂಟೆ ವೇಳೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

ಅಂತಿಮ ಕ್ಷಣದವರೆಗೂ ಅಂಬಿ ಜೊತೆಯಲ್ಲಿದ್ದ ಯಜಮಾನ
ಬೆಂಗಳೂರಿಗೆ ಬರುತ್ತಿದ್ದಂತೆ ಕಂಠೀರವ ಸ್ಟೇಡಿಯಂ ಕಡೆ ಆಗಮಿಸಿದ ದರ್ಶನ್, ಮಂಡ್ಯದಿಂದ ಬೆಂಗಳೂರಿಗೆ ಅಂಬಿ ಪಾರ್ಥಿವ ಶರೀರ ಬರುವವರೆಗೂ ಕಾದರು. ಅಂಬಿ ಪಾರ್ಥಿವ ಶರೀರ ಬರುತ್ತಿದ್ದ ಅಂಬುಲೆನ್ಸ್ ಬಳಿ ಹೆಗಲು ಕೊಟ್ಟ ದಾಸ, ಅಂತ್ಯಕ್ರಿಯೆ ಮುಗಿಯವರೆಗೂ ಅಂಬಿ ಪಾರ್ಥಿವ ಶರೀರದ ಬಳಿಯೇ ಇದ್ದರು.


Click it and Unblock the Notifications











