twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಚಿತ್ರರಂಗದ ಪ್ರೊಡಕ್ಷನ್ ಹೌಸ್ ಗಳಲ್ಲಿ ಏನಾಗ್ತಾವೆ ಗೊತ್ತಾ?

    By Harshitha
    |

    ಕನ್ನಡ ಚಿತ್ರರಂಗದ ಖ್ಯಾತ ಪ್ರೊಡಕ್ಷನ್ ಹೌಸ್ ಗಳಿಂದ ಕೆಲವು ಸಿನಿಮಾಗಳು ಅನೌನ್ಸ್ ಆಗ್ತವೆ. ಅನೌನ್ಸ್ ಆಗ್ತಿದ್ದಂತೆ ಬೇಜಾನ್ ಸೌಂಡ್ ಮಾಡ್ತವೆ. ಅದ್ದೂರಿಯಾಗಿ ಫೋಟೋಶೂಟ್ ಕೂಡ ನಡೀತಾವೆ. ಎಲ್ಲವೂ ಓಕೆ ಆದರೂ, ಕೆಲವು ದಿನಗಳ ನಂತರ ಸಿನಿಮಾ ಇದ್ದಕ್ಕಿದ್ದಂತೆ ನಿಂತ್ಹೋಗ್ತವೆ.

    ಇಂತಹ ಪರಿಸ್ಥಿತಿಗೆ ಕಾರಣವೇನು, ಪರಭಾಷೆ ಚಿತ್ರರಂಗಗಳಲ್ಲಿ ಹೀಗ್ಯಾಕೆ ಅಗಲ್ಲ ಅನ್ನೋದನ್ನ ಕನ್ನಡ ನಿರ್ದೇಶಕ, ಯೋಗರಾಜ್ ಭಟ್ ಶಿಷ್ಯ ವೀರೇಂದ್ರ ವಿವರಿಸಿದ್ದಾರೆ. ಅವರದ್ದೇ ಮಾತುಗಳಲ್ಲಿ ಕನ್ನಡ ಹಾಗು ಬಾಲಿವುಡ್, ಹಾಲಿವುಡ್ ಪ್ರೊಡಕ್ಷನ್ ಹೌಸ್ ಗಳಲ್ಲಿ ಏನೇನಾಗ್ತವೆ ಅಂತ ನೀವೇ ಓದಿ.....

    How does Kannada Film Industry's Production Houses work? Director Veerendra explains

    '' ಕನ್ನಡ ಸಿನಿಮಾರಂಗದ ದೊಡ್ಡ ಪ್ರೊಡಕ್ಷನ್ ಹೌಸುಗಳಲ್ಲಿ - ಒಬ್ಬ ಹೊಸ ನಿರ್ದೇಶಕ ಒಂದು ಸೂಪರ್ ಹಿಟ್ ಸಿನಿಮಾ ಕೊಡ್ತಾನೆ. ಅಲ್ಲೊಬ್ಬ ಸ್ಟಾರ್ ನಟ ಇರ್ತಾನೆ. ಅವರ ಕಾಂಬಿನೇಷನ್ ನಲ್ಲಿ ಇನ್ನೊಂದು ಸಿನಿಮಾ ಅನೌನ್ಸ್ ಆಗತ್ತೆ. ಅಥವ ಒಬ್ಬ established ಡೈರೆಕ್ಟರ್ ಮತ್ತು ಸ್ಟಾರ್ ಕಾಂಬಿನೇಷನ್ ನಲ್ಲಿ ಸಿನಿಮಾ ಅನೌನ್ಸ್ ಆಗತ್ತೆ. ಅದಕ್ಕೆ ಗ್ರ್ಯಾಂಡಾಗಿ ಮುಹೂರ್ತವೂ ಆಗತ್ತೆ. ಒಂದು ಮಾಸ್ ಟೈಟಲ್ ಇಟ್ಟು ಲಕ್ಷಾಂತರ ರೂಪಾಯಿ ಮುಹೂರ್ತಕ್ಕೆ ಖರ್ಚು ಆಗತ್ತೆ. ಅಸಲು ಕಥೆ ಇರುವುದಿಲ್ಲ.''

    ''ಮುಹೂರ್ತದ ನಂತರ ಒಂದು ಕಥೆಯನ್ನ ರೆಡಿ ಮಾಡಿದ್ಮೇಲೆ ಸ್ಟಾರ್ ನಟ ಅದನ್ನ ಒಪ್ಪುವುದಿಲ್ಲ. ಎಷ್ಟೋ ಬಾರಿ ಸ್ಟಾರ್ ನಟ ಪೂರ್ತಿ ವಿವರವಾಗಿ ಕಥೆಯನ್ನು ಕೇಳಿರುವುದೇ ಇಲ್ಲ. ಅವರ ಮ್ಯಾನೇಜರ್ರುಗಳು ಅಥವ ಅವರು ಕಥೆ ಕೇಳಲೆಂದು ಅವರ ಕುಟುಂಬದಲ್ಲೆ ಯಾರಾದರೂ ಒಬ್ಬರನ್ನು ನೇಮಿಸಿಕೊಂಡಿರುತ್ತಾರೆ. ಕಥೆ ಅಲ್ಲಿಂದಲೇ ಒಪ್ಪಿಗೆ ಪಡೆದುಕೊಳ್ಳುವುದೋ ಅಥವ ಬೌನ್ಸ್ ಆಗಿ ವಾಪಸ್ ಬಂದಿರುವುದೋ ಆಗಿರುತ್ತದೆ.''

    ''ಹೇಗೋ ಬೌನ್ಸ್ ಆಗಿ ಬಂದ ನಿರ್ದೇಶಕ ಮತ್ತೊಂದು ಕಥೆ ಹುಟ್ಟುಹಾಕಲು ಅವನ ತಂಡದ ಜೊತೆ ತಲೆ ಕೆರೆದುಕೊಂಡು ಕೂತ್ಕೋತಾನೆ. ಹಾಗೂ ಹೀಗೂ ಒಂದು ಕಥೆ ರೆಡಿ ಮಾಡಿ ಒಪ್ಪಿಸಿ ಅದಕ್ಕೊಂದು ಬಡ್ಜೆಟ್ ಫಿಕ್ಸ್ ಮಾಡಿ ಶೂಟಿಂಗ್ ಮಾಡ್ತಾರೆ. ಆ ಬಡ್ಜೆಟ್ ಕಡಿಮೆಯಾದರೂ ಅದರಲ್ಲೇ ಮಾಡಬೇಕು ಅಥವ ಅದಕ್ಕೆ ಸ್ಟಾರ್ ಇರೋದ್ರಿಂದ ಕೆಲವೊಮ್ಮೆ ಅವಶ್ಯಕತೆಗಿಂತ ಹೆಚ್ಚು ಖರ್ಚು ಮಾಡುತ್ತಾರೆ. ಇಟ್ಟಿರೋ ಟೈಟಲ್ ಗೆ ಸೂಕ್ತವಾಗಿ ಒಂದಷ್ಟು ಡೈಲಾಗ್ಸು ಮತ್ತು ಒಂದು ಟೈಟಲ್ ಸಾಂಗ್ ಮಾಡಿ ಜಸ್ಟಿಫಿಕೇಷನ್ ಕೊಟ್ಟುಬಿಡ್ತಾರೆ.'' [ಡಬ್ಬಿಂಗ್ ಬಂದ್ರೆ ಏನಾಗ್ಬಹುದು? ಸಣ್ಣ ಲೆಕ್ಕಾಚಾರ..]

    ''ಬಾಲಿವುಡ್ - ಹಾಲಿವುಡ್ ದೊಡ್ಡ ಪ್ರೊಡಕ್ಷನ್ ಹೌಸುಗಳಲ್ಲಿ - ಡೈರೆಕ್ಟರ್-ರೈಟರ್ ಸೇರಿ ಒಂದು ಬೌಂಡ್ ಸ್ಕ್ರಿಪ್ಟ್ ಸಿದ್ಧಪಡಿಸ್ತಾರೆ. ಅದಕ್ಕೆ ಸೂಕ್ತ ಟೈಟಲ್ ಇಡ್ತಾರೆ. ಅದನ್ನ ಪ್ರೊಡಕ್ಷನ್ ಹೌಸ್ ಗೆ ಕೊಡ್ತಾರೆ. ಅಲ್ಲೊಂದಷ್ಟು ಜನ ಸ್ಕ್ರಿಪ್ಟ್ ತಜ್ಞರಿರ್ತಾರೆ. ಅವರು ಆ ಸ್ಕ್ರಿಪ್ಟ್ ಓದಿ ಅದರ ಕ್ವಾಲಿಟಿ ಟೆಸ್ಟ್ ಮಾಡ್ತಾರೆ. ಆ ನಂತರ ಅದು ಒಪ್ಪಿಗೆಯಾದರೆ ಅದಕ್ಕೆ ಅವಶ್ಯಕತೆ ಇರೋ ಅಷ್ಟು ಬಡ್ಜೆಟ್ ಫಿಕ್ಸ್ ಮಾಡ್ತಾರೆ. ಆ ನಂತರ ಆ ಸ್ಕ್ರಿಪ್ಟ್ ಗೆ ಹೊಂದುವಂತ ಪಾತ್ರವರ್ಗವನ್ನು, ತಂತ್ರಜ್ಞರನ್ನು ಫಿಕ್ಸ್ ಮಾಡ್ತಾರೆ. ಆ ನಂತರ ಸಿನಿಮಾ ಅನೌನ್ಸ್ ಆಗತ್ತೆ ಮತ್ತು ಶೂಟಿಂಗಿಗೆ ಹೋಗತ್ತೆ. ''

    ''ಪ್ರೊಡಕ್ಷನ್ ಹೌಸುಗಳು ಬರಹಗಾರರನ್ನು ಬಳಸಿಕೊಂಡು ಒಂದು ಸ್ಕ್ರಿಪ್ಟ್ ಸಿದ್ಧಪಡಿಸ್ತಾರೆ. ಸ್ಕ್ರಿಪ್ಟ್ ತಜ್ಞರ ಸಲಹೆ ಮೇರೆಗೆ ಅದನ್ನು authentic ಆಗುವವರೆಗೆ ಕೆಲಸ ಮಾಡ್ತಾರೆ. ಅದನ್ನು ಎಕ್ಸಿಕ್ಯೂಟ್ ಮಾಡಬಲ್ಲ ನಿರ್ದೇಶಕನನ್ನು ಹುಡುಕಿ ಆತನ ಸಲಹೆಗಳನ್ನು ಪಡೆದು ಸ್ಕ್ರಿಪ್ಟ್ ಫೈನಲ್ ಮಾಡ್ತಾರೆ. ನಂತರ ಮೇಲೆ ಹೇಳಿದಂತೆ ಕೆಲಸಗಳು ನಡೆಯುತ್ತವೆ.'' [ರಾಮ್ ಗೋಪಾಲ್ ವರ್ಮಾ ಬಗ್ಗೆ ಎಂಥಾ ಕಾಮೆಂಟು.!]

    ''ಪ್ರೊಡಕ್ಷನ್ ಹೌಸುಗಳು ಇಂಥಾ ಸ್ಟಾರ್ ಗೆ ಅಥವ ಹೊಸಬರಿಗೆ ಸಿನಿಮಾ ಮಾಡಬೇಕು ಅಂತ ಫಿಕ್ಸ್ ಆಗ್ತಾರೆ. ಆ ಸಿನಿಮಾ ಮಾಡೋಕೆ ಒಬ್ಬ ನಿರ್ದೇಶಕ ಮತ್ತು ಬರಹಗಾರರನ್ನು ಆಯ್ಕೆ ಮಾಡಿಕೊಳ್ತಾರೆ. ಬೌಂಡ್ ಸ್ಕ್ರಿಪ್ಟ್ ಸಿದ್ಧವಾದ ನಂತರ ಮೇಲೆ ಹೇಳಿದ ರೀತಿಯಲ್ಲೇ ಕೆಲಸಗಳು ಆಗ್ತವೆ. ಹಾಲಿವುಡ್ ನಲ್ಲಿ ದೊಡ್ಡ ಪ್ರೊಡಕ್ಷನ್ ಹೌಸುಗಳಷ್ಟೇ ಅಲ್ಲ, ಸಣ್ಣ ಮತ್ತು ಹೊಸ ಪ್ರೊಡಕ್ಷನ್ ಹೌಸುಗಳೂ ದೊಡ್ಡ ಪ್ರೊಡಕ್ಷನ್ ಹೌಸುಗಳ ಸಹಭಾಗಿತ್ವದಲ್ಲಿ ಈ ಕೆಲಸಗಳನ್ನು ಚಾಚೂ ತಪ್ಪದೆ ಮಾಡುತ್ತಾರೆ.''

    ''ಇದು ಬಾಲಿವುಡ್, ಹಾಲಿವುಡ್ ಅಲ್ಲದೇ ತಮಿಳು, ತೆಲುಗು ಮತ್ತು ಮಲೆಯಾಳಂ ನ ಕೆಲ ದೊಡ್ಡ ಪ್ರೊಡಕ್ಷನ್ ಹೌಸ್ ಗಳಲ್ಲೂ ಆಗುವಂತಹ ವಿದ್ಯಮಾನಗಳು.'' - ವೀರೇಂದ್ರ, ನಿರ್ದೇಶಕ

    English summary
    Why does few movies gets shelved? How does Kannada Film Industry's Production Houses work? Director Veerendra explains in his own words. Take a look at the article.
    Sunday, October 18, 2015, 15:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X