twitter
    For Quick Alerts
    ALLOW NOTIFICATIONS  
    For Daily Alerts

    'GST' ಅಂಗೀಕಾರ ಸಿನಿಮಾ ರಂಗಕ್ಕೆ ಹೇಗೆ ವರದಾನ.?

    By Suneetha
    |

    ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳಲ್ಲಿ, ಅತೀ ಕಡಿಮೆ ಟಿಕೆಟ್ ದರ ಇಟ್ಟರೆ ಸಾಮಾನ್ಯವಾಗಿ ಎಲ್ಲರೂ ಕುಟುಂಬ ಸಮೇತ (ಕುಟುಂಬ ಸಮೇತ ನೋಡುವ ಸಿನಿಮಾ ಆಗಿದ್ದರೆ ಮಾತ್ರ) ಹೋಗಿ ವೀಕೆಂಡ್ ನಲ್ಲಿ ಸಿನಿಮಾ ನೋಡಿಕೊಂಡು ಬರುತ್ತಾರೆ. ಅದೇ ಟಿಕೆಟ್ ಗೆ ತಲೆಗಿಂತ ಹೆಚ್ಚು ರೇಟ್ ಇದ್ದರೆ ಯಾರು ಹೋಗುತ್ತಾರೆ ಹೇಳಿ.

    ಇದೀಗ ರಾಜ್ಯಸಭೆ ಅಂಗೀಕಾರ ಪಡೆದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ (ಜಿಎಸ್ ಟಿ-GST) ಯಿಂದ ಮಲ್ಟಿಪ್ಲೆಕ್ಸ್ ನಲ್ಲಿ ಪ್ರೇಮಿಗಳಿಗೆ ಹಾಗೂ ಫ್ಯಾಮಿಲಿ ಸಮೇತ ಸಿನಿಮಾ ವೀಕ್ಷಣೆ ಮಾಡುವ ವೀಕ್ಷಕರಿಗೆ ವರದಾನವಾದಂತಾಗಿದೆ.[ಜಿಎಸ್ಟಿ ಎಂದರೇನು? ಇದರಿಂದ ಯಾರಿಗೆ ಪ್ರಯೋಜನ?]

    ಜಿಎಸ್ ಟಿ ಜಾರಿಯಿಂದ ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ವೀಕ್ಷಣೆ ಮತ್ತು ಅಲ್ಲಿನ ತಿಂಡಿ-ತಿನಿಸುಗಳು ಭಾರಿ ಅಗ್ಗವಾಗಲಿವೆ.[ಜಿಎಸ್ಟಿ ಪರಿಣಾಮ, ಯಾವುದು ಏರಿಕೆ? ಯಾವುದು ಇಳಿಕೆ?]

    ಒಂದು ದೇಶದ ತೆರಿಗೆ ಅನ್ನುವ ನೀತಿ ಸಾರುವ ಸರಕು ಮತ್ತು ಸೇವಾ ತೆರಿಗೆ (GST) ವಿಧೇಯಕಕ್ಕೆ ರಾಜ್ಯಸಭೆ ಕೊನೆಗೂ ಅಂಗೀಕಾರ ನೀಡಿದ್ದು, ಇದು ನಮ್ಮ ದೇಶದ ಚಲನಚಿತ್ರ ರಂಗಕ್ಕೆ ವರವಾಗಿ ಪರಿಣಮಿಸಿದೆ. ಮುಂದೆ ಓದಿ......

    ಟಿಕೆಟ್ ದರ ಇಳಿಕೆ

    ಟಿಕೆಟ್ ದರ ಇಳಿಕೆ

    'ಜಿಎಸ್ ಟಿ' ಹೊಸ ಅಂಗೀಕಾರದಿಂದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಸೇರಿದಂತೆ ಎಲ್ಲಾ ಚಲನಚಿತ್ರ ಮಂದಿರಗಳಲ್ಲಿ ಟಿಕೆಟ್ ದರ ಹಾಗೂ ಮಲ್ಟಿಪ್ಲೆಕ್ಸ್ ನಲ್ಲಿ ತಿಂಡಿ-ತಿನಿಸು ಮತ್ತು ಪಾನೀಯಗಳ ದರದಲ್ಲಿ ಭಾರಿ ಇಳಿಕೆಯಾಗಿದೆ.

    ಮನರಂಜನಾ ತೆರಿಗೆ

    ಮನರಂಜನಾ ತೆರಿಗೆ

    ವಿದೇಶಗಳಲ್ಲಿ ಸಿನಿಮಾವನ್ನು ಮನರಂಜನೆಯ ಬದಲಾಗಿ ಸಾಂಸ್ಕೃತಿಕ ರಾಯಭಾರಿಯಾಗಿ ಪರಿಗಣಿಸಲಾಗುತ್ತದೆ. ಆದರೆ ನಮ್ಮಲ್ಲಿ ಸಿನಿಮಾವನ್ನು ಸೇವೆ ಎಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಸೇವಾ ತೆರಿಗೆಯ ಜೊತೆಗೆ ಹೆಚ್ಚುವರಿ ಮನರಂಜನೆ ತೆರಿಗೆಯನ್ನೂ ಸಿನಿಮಾ ಕ್ಷೇತ್ರ ಪಾವತಿ ಮಾಡಬೇಕಾಗುತ್ತದೆ.

    ಶೇ 27ರಷ್ಟು ತೆರಿಗೆ

    ಶೇ 27ರಷ್ಟು ತೆರಿಗೆ

    ಪ್ರಸಕ್ತ ದೇಶದ ಪ್ರತಿಯೊಂದು ರಾಜ್ಯದಲ್ಲೂ ಮನರಂಜನೆ ಸೇವಾ ತೆರಿಗೆ ಬೇರೆ-ಬೇರೆ ಪ್ರಮಾಣದಲ್ಲಿದೆ. ಎಲ್ಲರೂ ಸರಾಸರಿ ಶೇ.27ರಷ್ಟು ತೆರಿಗೆ ಪಾವತಿ ಮಾಡಬೇಕಾಗಿದೆ. ಆದ್ದರಿಂದ ಮಲ್ಟಿಪ್ಲೆಕ್ಸ್ ನಲ್ಲಿ ಟಿಕೆಟ್ ಬೆಲೆ ಗಗನಕ್ಕೇರಿದೆ. ಇದೀಗ ಜಿಎಸ್ ಟಿ ಜಾರಿಗೆ ಬಂದರೆ ಮನರಂಜನಾ ತೆರಿಗೆ ಅದರ ಜೊತೆಗೆ ಮಿಳಿತವಾಗಲಿದೆ.

    ಇನ್ನುಮುಂದೆ ಶೇ.18 ಮಾತ್ರ

    ಇನ್ನುಮುಂದೆ ಶೇ.18 ಮಾತ್ರ

    ಅಂತೂ ಇದೀಗ ಶೇ.18ರಷ್ಟು ಮಾತ್ರ ತೆರಿಗೆಯನ್ನು ಮಾತ್ರ ಮಲ್ಟಿಪ್ಲೆಕ್ಸ್ ಕಂಪನಿಗಳು ಪಾವತಿ ಮಾಡಬೇಕಾಗುತ್ತದೆ. ಇದರಿಂದಾಗಿ ಇನ್ನುಮುಂದೆ ಟಿಕೆಟ್ ಬೆಲೆ ಮತ್ತು ಅಲ್ಲಿ ಸಿಗುವ ಆಹಾರ ವಸ್ತುಗಳು ಮತ್ತು ಪಾನೀಯಗಳ ಬೆಲೆ ಕೂಡ ಕಡಿಮೆಯಾಗಲಿದೆ.

    ಮುಂದಿನ ಏಪ್ರಿಲ್

    ಮುಂದಿನ ಏಪ್ರಿಲ್

    GST ಜಾರಿಯಿಂದ ಇಡೀ ಚಲನಚಿತ್ರ ಉದ್ಯಮದಲ್ಲಿ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ಬಂದು ಒಟ್ಟಾರೆ ತೆರಿಗೆ ಪಾವತಿಯಲ್ಲಿ ಶೇ.2 ರಿಂದ4 ರಷ್ಟು ಕಡಿಮೆಯಾಗಲಿದೆ. ಆದ್ದರಿಂದ ಇನ್ನುಮುಂದೆ ಚಿತ್ರ ನಿರ್ಮಾಪಕರು, ಸ್ಟುಡಿಯೋ ಮಾಲೀಕರು ಹೆಚ್ಚುವರಿ ಸೇವಾ ತೆರಿಗೆ ಕಟ್ಟುವುದು ತಪ್ಪುತ್ತದೆ. ಅಂದಹಾಗೆ ಇದು ನಾಳೆಯೇ ಜಾರಿಯಾಗುವುದಿಲ್ಲ. ಇದಕ್ಕಾಗಿ ಮುಂದಿನ ವರ್ಷ ಏಪ್ರಿಲ್ ವರೆಗೂ ಕಾಯಬೇಕು.

    English summary
    How GST bill is Impact and benefit to Indian film industry. Here is the reason check it.
    Friday, August 5, 2016, 16:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X