For Quick Alerts
  ALLOW NOTIFICATIONS  
  For Daily Alerts

  ರೀಲ್ ವರ್ಸಸ್ ರಿಯಲ್: ನಿಮ್ಮ ನೆಚ್ಚಿನ ಝೀ5 ಪಾತ್ರಗಳನ್ನು ಲಾಕ್ ಡೌನ್ ಹೇಗೆ ಬದಲಾಯಿಸಿದೆ?

  |

  ನಮ್ಮ ಕನ್ನಡ ಝೀ5 ಟೆಲಿವಿಷನ್ ಕಾರ್ಯಕ್ರಮಗಳ ಮುಖ್ಯ ಕಲಾವಿದರು ಲಾಕ್ ಡೌನ್ ಅವಧಿಯಲ್ಲಿ ಹೇಗೆ ಬದಲಾಗಿದ್ದಾರೆ ಎಂಬ ಬಗ್ಗೆ ಅವರೊಂದಿಗೆ ಮಾತನಾಡಿ ನೇರವಾಗಿ ಮಾಹಿತಿ ಪಡೆದುಕೊಳ್ಳುತ್ತೇವೆ ಅಥವಾ ಅವರ ಸಾಮಾಜಿಕ ಮಾಧ್ಯಮ ಖಾತೆಗಳಿಂದ ತಿಳಿದುಕೊಳ್ಳುತ್ತೇವೆ- ಅವರು ಹೊಸ ಲುಕ್ ಪಡೆದುಕೊಂಡಿದ್ದಾರೆಯೇ, ಅವರು ಹೊಸ ಫಿಟ್ನೆಸ್ ಕ್ರಮ ಆರಂಭಿಸಿದ್ದಾರೆಯೇ ಅಥವಾ ಅವರು ಏನಾದರೂ ಹೊಸ ಕೌಶಲ ಕಲಿತಿದ್ದಾರೆಯೇ ಇತ್ಯಾದಿ ಸಂಗತಿಗಳನ್ನು ತಿಳಿಯುತ್ತೇವೆ.

  ಈ ಅಂಶಗಳನ್ನು ನಾವು ಧಾರಾವಾಹಿಯಲ್ಲಿನ ಅವರ ಪಾತ್ರಗಳಿಗೂ ಅದನ್ನು ಅಳವಡಿಸುತ್ತೇವೆ ಮತ್ತು ಈಗ ಚಿತ್ರೀಕರಿಸುವ ಮುಂದಿನ ಎಪಿಸೋಡುಗಳಲ್ಲಿ ಆ ಪಾತ್ರಗಳಲ್ಲಿ ಯಾವ ರೀತಿಯ ಬದಲಾವಣೆಗಳು ಆಗಲಿವೆ ಎಂಬ ಕುತೂಹಲವನ್ನು ಮೂಡಿಸುತ್ತೇವೆ. ನಾವು ಮಾತನಾಡುತ್ತಿರುವುದು 'ಜೊತೆ ಜೊತೆಯಲಿ', 'ಗಟ್ಟಿಮೇಳ', 'ಪಾರು' ಮತ್ತು 'ಕಮಲಿ'ಯಂತಹ ಧಾರಾವಾಹಿಗಳ ಮುಖ್ಯಪಾತ್ರಗಳ ಕುರಿತು.

  ಜೊತೆ ಜೊತೆಯಲಿ

  ಜೊತೆ ಜೊತೆಯಲಿ

  ಜೊತೆ ಜೊತೆಯಲಿ ಆರ್ಯವರ್ಧನ್ ಮತ್ತು ಅನು ಪ್ರೇಮ ಸರಿಗಮ ಏನಾಗುತ್ತದೆಂದು ಕಾತರದಿಂದ ಕಾದಿದ್ದವರಿಗೆ ಲಾಕ್ ಡೌನ್ ನಿರಾಶೆ ತಂದಿತ್ತು. ಮೊದಲೇ ಇಬ್ಬರ ಪ್ರೇಮದ ತಾಳಮೇಳ ಕೂಡುತ್ತಿಲ್ಲ ಎನ್ನುವಾಗಲೇ ಲಾಕ್‌ಡೌನ್‌ನಲ್ಲಿ ಇಬ್ಬರ ಕಥೆ ಏನಾಯ್ತೋ ಎಂದು ವೀಕ್ಷಕರು ಬೇಸರಗೊಂಡಿದ್ದರು. ಆದರೆ ಲಾಕ್ ಡೌನ್ ಅವಧಿ ಮುಗಿದ ಮೊದಲ ದಿನವೇ ಹೊಸ ಆಸೆಯೊಂದು ಮೊಳೆತಿದೆ. ಆರ್ಯವರ್ಧನ್ ಕಣ್ಣಿನ ಹೊಳಪು ಹೊಸ ನಿರೀಕ್ಷೆ ಮೂಡಿಸಿತ್ತು. ಖುಷಿಯ ಸಂಗತಿ ಸಿಗಲಿದೆ ಎಂದು ಅನು ಕೂಡ ನಿರೀಕ್ಷಿಸಿದ್ದಳು. ಆದರೆ ಅನು ಇದ್ದಕ್ಕಿದ್ದಂತೆ ತಲೆ ಸುತ್ತಿಬಿದ್ದದ್ದು ಆರ್ಯವರ್ಧನ್‌ಗೆ ಚಿಂತೆ ಮೂಡಿಸಿದೆ. ಲಾಕ್ ಡೌನ್ ಅವರಿಬ್ಬರಿಗೂ ಕಲಿಸಿದ್ದೇನು? ಅದು ಏನೆಲ್ಲ ಬದಲಾವಣೆ ತರಲಿದೆ?

  ಗಟ್ಟಿಮೇಳ

  ಗಟ್ಟಿಮೇಳ

  ಲಾಕ್ ಡೌನ್‌ಗೂ ಮುನ್ನ ವೇದಾಂತ್ ಬರ್ಥಡೇ ಸೆಲೆಬ್ರೇಷನ್ ಶುರುವಾಗಿತ್ತು. ಅಲ್ಲಿಯೇ ಅವರನ್ನು ಲಾಕ್ ಡೌನ್ ಮಾಡುವ ಮೂಲಕ ಕಥೆಗೆ ತಿರುವು ನೀಡಲಾಗಿದೆ. ವೇದಾಂತ್‌ಗೆ ವಿಡಿಯೋ ಕಾಲ್ ಮೂಲಕ ಆದ್ಯ ಮತ್ತು ವಿಕ್ರಾಂತ್ ಶುಭಾಶಯ ಕೋರಿದ್ದರು. ವೇದಾಂತ್ ಮನೆಗೆ ಮರಳದೆ ಇರುವುದರಿಂದ ಮನೆಯಲ್ಲಿ ಸುಹಾಸಿನಿ ಮತ್ತು ಸಾಹಿತ್ಯರಲ್ಲಿ ಕೋಪ ತರಿಸಿತ್ತು. ಇತ್ತ ಅಮೂಲ್ಯಗೆ ಹತ್ತಿರವಾಗುವ ಸಂದರ್ಭ ಬಂದಾಗಲೆಲ್ಲಾ ವೇದಾಂತ್ ತಳಮಳ ಹೆಚ್ಚುತ್ತದೆ. ಮುಂದೇನಾಗುತ್ತದೆ ವೀಕ್ಷಿಸಿ ಗಟ್ಟಿಮೇಳ.

  ಪಾರು

  ಪಾರು

  ಎಲ್ಲರೂ ಊರಿನಿಂದ ಮನೆಗೆ ವಾಪಸ್ ಹೊರಡಲು ಅಖಿಲಾ ಸೂಚಿಸುತ್ತಾರೆ. ಇದು ಆದಿತ್ಯ ಮತ್ತು ಪಾರ್ವತಿ ಇಬ್ಬರಿಗೂ ಬಹಳ ಬೇಸರ ಮೂಡಿಸಿದೆ. ಜಾನು ಮತ್ತು ಪ್ರೀತಂ ಮದುವೆ ಆಗಿರುವುದು ಕುರಿತು ತಿಳಿದು ಅನುಷ್ಕಾ ಆಘಾತಕ್ಕೆ ಒಳಗಾಗಿದ್ದಾಳೆ. ಇತ್ತ ಜಾನುಳನ್ನು ಸಮಾಧಾನಪಡಿಸುವ ಕಷ್ಟ ಪ್ರೀತಂಗೆ. ಲಾಕ್ ಡೌನ್ ನಂತರ ಪಾರು ಕಥೆ ಎಲ್ಲಿಗೆ ಹೋಗುತ್ತದೆ? ಪಾತ್ರಗಳು ಹೇಗೆಲ್ಲ ಬದಲಾಗಿವೆ?

  ಕಮಲಿ

  ಕಮಲಿ

  ಕಮಲಿ ಮತ್ತು ರಿಷಿ ವಿಡಿಯೋ ಕಾಲ್ ಮಾತುಕತೆ ಮುಂದುವರಿದಿದೆ. ರಿಷಿ ಬಗ್ಗೆ ಮುಗ್ಧ ಕಮಲಿ ತೋರಿಸುವ ಕಾಳಜಿ ಮನಮುಟ್ಟುತ್ತದೆ. ಕಮಲಿಗೆ ಸತ್ಯ ಹೇಳಲಾಗದೆ ರಿಷಿ ಚಡಪಡಿಸುತ್ತಿದ್ದಾರೆ. ಅತ್ತ ಅಮ್ಮನಿಗೆ ಆಘಾತವಾಗುತ್ತದೆ ಎಂಬ ಭಯದಲ್ಲಿ ಆಕೆಯಿಂದಲೂ ವಾಸ್ತವ ಮುಚ್ಚಿಡಬೇಕಾದ ಸ್ಥಿತಿಯಲ್ಲಿ ರಿಷಿ ಮತ್ತು ಅಪ್ಪ ಒದ್ದಾಡುತ್ತಿದ್ದಾರೆ. ಎಂಗೇಜ್ಮೆಂಟ್ ಸತ್ಯ ಕಮಲಿಗೆ ಗೊತ್ತಾಗುತ್ತದೆಯೇ? ಅಮ್ಮನಿಗೆ ರಿಷಿ ಹೇಗೆ ಸತ್ಯ ಹೇಳುತ್ತಾರೆ?

  ಬ್ರಹ್ಮಗಂಟು

  ಬ್ರಹ್ಮಗಂಟು

  ಗೀತಾ ವಿರುದ್ಧ ಜಲಜಾ, ಮಂಗಳಾಳನ್ನು ರೊಚ್ಚಿಗೆಬ್ಬಿಸುತ್ತಾಳೆ. ಸಿಟ್ಟುಕೊಂಡ ಮಂಗಳಾ, ಗೀತಾ ಮನೆಗೆ ಬಂದು ಗಲಾಟೆ ಮಾಡುತ್ತಾಳೆ. ಬಳಿಕ ಮಂಗಳಾ ನಾಪತ್ತೆಯಾಗುತ್ತಾಳೆ. ಗೀತಾ-ಸೀನಣ್ಣ ನಡುವೆ ಮಾತುಕತೆ ನಡೆದಿದೆ? ನಿನಗೆ ಮದುವೆ ಮಾಡಿಸಿದ್ದೇ ನಾನು. ಇಲ್ಲದಿದ್ದರೆ ನಿನ್ನ ಜಾಗದಲ್ಲಿ ಲಕ್ಕಿ ಹೆಂಡತಿಯಾಗಿ ಯಾರು ಇರುತ್ತಿದ್ದರು ಗೊತ್ತಾ? ಕೃತಜ್ಞತೆ ಇಲ್ಲದೆ ನನ್ನ ಸಂಸಾರಕ್ಕೆ ಕಲ್ಲು ಹಾಕಿದೆ ನೀನು ಎಂದು ಗೀತಾ ವಿರುದ್ಧ ಮಂಗಳಾ ವಾಗ್ದಾಳಿ ನಡೆಸಿದ್ದಾಳೆ. ಗೀತಾಳ ಸಮಾಧಾನದ ಮಾತನ್ನೆಲ್ಲ ನಂಬುವ ಸ್ಥಿತಿಯಲ್ಲಿ ಮಂಗಳಾ ಇಲ್ಲ. ಮುಂದೇನಾಗುತ್ತದೆ ವೀಕ್ಷಿಸಿ ಬ್ರಹ್ಮಗಂಟು.

  ಯಾರೇ ನೀ ಮೋಹಿನಿ

  ಯಾರೇ ನೀ ಮೋಹಿನಿ

  ಯಾರೇ ನೀ ಮೋಹಿನಿಯ ಕಥೆ ಮತ್ತಷ್ಟು ಕುತೂಹಲ ಕೆರಳಿಸಿದೆ. ಮುತ್ತು ಮಾವ ಮತ್ತು ಬೆಳ್ಳಿ ಮದುವೆಯಾಗಿದ್ದರೆ ಆ ದೇವಸ್ಥಾನದಲ್ಲಿಯೇ ಆಗಿರಬೇಕು ಎಂಬ ಅನುಮಾನ ಮಾಯಾ ಮತ್ತು ಶರ್ಮಿಳಾ ಮಧ್ಯೆ ಮೂಡಿದೆ. ಇದು ಐಶುಗೆ ಗೊತ್ತಾಗಿದೆ. ಪೂಜಾರಪ್ಪನ ಬಳಿ ಹೋಗಿ ಸತ್ಯ ತಿಳಿಯಬೇಕು ಎಂದು ಮಾಯಾ ಮತ್ತು ಶರ್ಮಿಳಾ ತೀರ್ಮಾನಿಸಿ ದೇವಸ್ಥಾನಕ್ಕೆ ಹೋಗಲು ಹೊರಡುತ್ತಾರೆ. ಪೂಜಾರಪ್ಪನ ಮನವೊಲಿಸಿ ಆತನಿಂದ ಸುಳ್ಳು ಹೇಳಿಸಲು ಐಶು ಹಾಗೂ ಷಣ್ಮುಖಣ್ಣ ಪ್ರಯತ್ನಿಸಿದರೂ ಅದು ಫಲಕೊಡಲಿಲ್ಲ. ಮುಂದೇನಾಗುತ್ತದೆ? ಲಾಕ್ ಡೌನ್ ಬಳಿಕ ಮುತ್ತು ಮತ್ತು ಬೆಳ್ಳಿ ಮದುವೆ ಕಥೆ ಬಯಲಾಗುತ್ತದಾ? ಅವರನ್ನು ಮನೆಯಿಂದ ಹೊರ ಹಾಕುತ್ತಾರಾ?

  English summary
  ZEE5 to show how the protagonists of Kannada TV shows have changed during the lockdown.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X