Kabzaa: ಬಿಡುಗಡೆಗೂ ಮುನ್ನವೇ ಆರ್. ಚಂದ್ರು ₹100 ಕೋಟಿ ಬ್ಯುಸಿನೆಸ್ ಮಾಡಿದ್ದೇಗೆ? ಎಲ್ಲಿಂದ ಬಂತು ಕಾಂಚಾಣ?
ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಬಿಡುಗಡೆಗೂ ಮುನ್ನವೇ ಈ ಟಾಕ್ ಇತ್ತು. ನಿರ್ದೇಶಕ,ನಿರ್ಮಾಪಕ ಆರ್ ಚಂದ್ರು ಸೇಫ್ ಸಿಕ್ಕಾಪಟ್ಟೆ ಸೇಫ್ ಆಗಿದ್ದಾರಂತೆ. ಅದಕ್ಕೆ ಸಿನಿಮಾ ಪ್ರಚಾರ ಮಾಡುತ್ತಿಲ್ಲವಂತೆ ಅನ್ನೋ ಮಾತುಗಳು ಹರಿದಾಡಿದ್ದವು. ಅದು ನಿಜ ಅನ್ನೋದನ್ನು ಸ್ವತ: ಆರ್.ಚಂ
ಉಪೇಂದ್ರ, ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ ಸ್ಯಾಂಡಲ್‌ವುಡ್‌ನ ಮೂವರು ದಿಗ್ಗಜರು ನಟಿಸಿದ ಸಿನಿಮಾ 'ಕಬ್ಜ'. ಈ ಸಿನಿಮಾ ಈಗಾಗಲೇ ಥಿಯೇಟರ್‌ಗೆ ಐದು ಭಾಷೆಗಳಲ್ಲಿ ಲಗ್ಗೆ ಇಟ್ಟಿದೆ. ನಿರ್ದೇಶಕ ಕಮ್ ನಿರ್ಮಾಪಕ ಆರ್ ಚಂದ್ರುನೇ ಹೇಳಿಕೊಂಡಂತೆ ಸಿನಿಮಾ ಎರಡೇ ದಿನಕ್ಕೆ 100 ಕೋಟಿ ರೂ. ಬ್ಯುಸಿನೆಸ್ ಮಾಡಿದೆ.
ಇದೇ ಖುಷಿಯಲ್ಲಿ ಇಡೀ ಚಿತ್ರತಂಡ ಸಕ್ಸಸ್ ಮೀಟ್ ಕೂಡ ಮಾಡಿದೆ. ಉಪೇಂದ್ರ, ಆರ್ ಚಂದ್ರು ಸೇರಿದಂತೆ ಇಡೀ ತಂಡ ಈ ಖುಷಿಯಲ್ಲಿ ಮಿಂದೆದ್ದಿದೆ. ಇದೇ ವೇಳೆ ಆರ್. ಚಂದ್ರು ಸಿನಿಮಾ ರಿಲೀಸ್‌ಗೂ ಮುನ್ನವೇ ಲಾಭದಲ್ಲಿ ಇದ್ದೆ ಎಂದು ಹೇಳಿಕೆ ಕೊಟ್ಟಿದ್ದಾರೆ.

ಆರ್ ಚಂದ್ರು ಈ ಹೇಳೀಕೆ ಕೊಡುತ್ತಿದ್ದಂತೆ 'ಕಬ್ಜ' ಪ್ರೀ-ರಿಲೀಸ್ ಬ್ಯುಸಿನೆಸ್ ಬಗ್ಗೆ ಎಲ್ಲೆಡೆ ಟಾಕ್ ಶುರುವಾಗಿದೆ. ನಿರ್ಮಾಪಕ ಅದೇನು ಸ್ಟ್ರಾಟಜಿ ಮಾಡಿದ್ರು? ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್‌ನಿಂದ್ಲೇ ಲಾಭ ಮಾಡಿದ್ದು ಹೇಗೆ? ಪ್ರೀ-ರಿಲೀಸ್ ಬ್ಯುಸಿನೆಸ್ ಎಷ್ಟು? ಈ ಎಲ್ಲಾ ಪ್ರಶ್ನೆಗಳಿಗೆ ಸಿನಿಮಾ ಮಂದಿ ಲೆಕ್ಕಾಚಾರ ಕೊಟ್ಟಿದ್ದಾರೆ.
'ಕಬ್ಜ' ಪ್ರೀ-ರಿಲೀಸ್ ಬ್ಯುಸಿನೆಸ್ ಎಷ್ಟು?
ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಬಿಡುಗಡೆಗೂ ಮುನ್ನವೇ ಈ ಟಾಕ್ ಇತ್ತು. ನಿರ್ದೇಶಕ,ನಿರ್ಮಾಪಕ ಆರ್ ಚಂದ್ರು ಸೇಫ್ ಸಿಕ್ಕಾಪಟ್ಟೆ ಸೇಫ್ ಆಗಿದ್ದಾರಂತೆ. ಅದಕ್ಕೆ ಸಿನಿಮಾ ಪ್ರಚಾರ ಮಾಡುತ್ತಿಲ್ಲವಂತೆ ಅನ್ನೋ ಮಾತುಗಳು ಹರಿದಾಡಿದ್ದವು. ಅದು ನಿಜ ಅನ್ನೋದನ್ನು ಸ್ವತ: ಆರ್.ಚಂದ್ರುನೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಪ್ರೀ-ರಿಲೀಸ್ ಬ್ಯುಸಿನೆಸ್ ಎಷ್ಟಾಗಿದೆ ಅನ್ನೋ ಲೆಕ್ಕಾಚಾರ ಹಾಕಲಾಗುತ್ತಿದೆ.

ಗಾಂಧಿನಗರದ ಮೂಲಗಳ ಪ್ರಕಾರ, 'ಕಬ್ಜ' ಸಿನಿಮಾ ಬರೋಬ್ಬರಿ 100 ಕೋಟಿ ರೂ. ಆಸುಪಾಸಿನಲ್ಲಿ ಬ್ಯುಸಿನೆಸ್ ಮಾಡಿದೆ. ಕೇವಲ ಸ್ಯಾಟಲೈಟ್, ಓಟಿಟಿ ಹಕ್ಕುಗಳಿಂದಲೇ 100 ಕೋಟಿ ರೂ. ಬ್ಯುಸಿನೆಸ್ ಆಗಿದ್ದು ಹೇಗೆ? ಈ ಪ್ರಶ್ನೆಗೆ ಸಿನಿಮಾ ಮಂದಿ ಲೆಕ್ಕಾಚಾರ ಬೇರೆನೇ ಇದೆ.
ಎಲ್ಲೆಲ್ಲಿಂದ ಬಂತು ₹100 ಕೋಟಿ?
ನಿರ್ದೇಶಕ ಆರ್. ಚಂದ್ರು ಪ್ರೀ-ರಿಲೀಸ್ ಬ್ಯುಸಿನೆಸ್ 100 ಕೋಟಿ ರೂ. ಆಗಿದೆ ಎನ್ನುತ್ತಿವೆ ಮೂಲಗಳು. ದಕ್ಷಿಣ ಭಾರತದ ನಾಲ್ಕು ಭಾಷೆಗಳ ಓಟಿಟಿ ರೈಟ್ಸ್ ಅಮೆಜಾನ್ ಪ್ರೈಂಗೆ ಮಾರಾಟ ಆಗಿದೆ. ಕಲರ್ಸ್ ಕನ್ನಡಕ್ಕೆ ಸ್ಯಾಟಲೈಟ್ ರೈಟ್ಸ್ ಹೋಗಿದೆ. ಹಾಗೇ ಎಲ್ಲಾ ಭಾಷೆಯ ಸ್ಯಾಟಲೈಟ್ ರೈಟ್ಸ್, ಉತ್ತರ ಭಾರತದ ಸ್ಯಾಟಲೈಟ್ ಹಾಗೂ ಓಟಿಟಿ ಹಕ್ಕುಗಳು ಸೇಲ್ ಆಗಿತ್ತು. ಅಲ್ಲದೆ ಏಳು ಅಂತರಾಷ್ಟ್ರೀಯ ಭಾಷೆಗಳ ಹಕ್ಕುಗಳು ಕೂಡ ಸೇಲ್ ಆಗಿತ್ತು ಎಂದು ಮೂಲಗಳು ಹೇಳುತ್ತಿವೆ
'ಕಬ್ಜ' ಸಿನಿಮಾದ ಹಕ್ಕುಗಳು ಒರಿಯಾ ಹಾಗೂ ಬಂಗಾಲಿ ಭಾಷೆಗಳಿಗೂ ಸೇಲ್ ಆಗಿದೆಯಂತೆ. ನಿರ್ಮಾಪಕ ಆರ್.ಚಂದ್ರು ಬಿಡುಗಡೆಗೂ ಮುನ್ನ 100 ಕೋಟಿ ರೂ. ಬ್ಯುಸಿನೆಸ್ ಹೇಗೆ ಮಾಡಿದ್ರು? ಅನ್ನೋ ಟೈಟಲ್ಸ್ ಹೀಗಿದೆ.
'ಕಬ್ಜ' ಪ್ರೀ-ರಿಲೀಸ್ ಬ್ಯುಸಿನೆಸ್ (ಮೂಲಗಳ ಪ್ರಕಾರ)
ಅಮೆಜಾನ್ ಪ್ರೈಂ ವಿಡಿಯೋ ₹25 ಕೋಟಿ (ದಕ್ಷಿಣದ 4 ಭಾಷೆಗಳು)
ಕಲರ್ಸ್ ಕನ್ನಡ (ಸ್ಯಾಟಲೈಟ್) ₹11 ಕೋಟಿ (ಕನ್ನಡ ಮಾತ್ರ)
ದಕ್ಷಿಣ 3 ಭಾಷೆಯ ರೈಟ್ಸ್ ₹10 ಕೋಟಿ (ಸ್ಯಾಟಲೈಟ್)
ಉತ್ತರ ಭಾರತದ ಬ್ಯುಸಿನೆಸ್ ₹40 ಕೋಟಿ (ಸ್ಯಾಟಲೈಟ್ + ಓಟಿಟಿ)
ವಿದೇಶದ ಬ್ಯುಸಿನೆಸ್ ₹15 ಕೋಟಿ (7 ಅಂತರಾಷ್ಟ್ರೀಯ ಭಾಷೆ)
ಥಿಯೇಟ್ರಿಕಲ್ ಬ್ಯುಸಿನೆಸ್ ಹೇಗಿದೆ?
'ಕಬ್ಜ' ಸಿನಿಮಾಗೆ ಬಿಡುಗಡೆ ಬಳಿಕ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕನ್ನಡದಲ್ಲಿ ಚಿತ್ರಮಂದಿರಗಳಲ್ಲಿ ಅದ್ಬುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ನಿರ್ದೇಶಕರೇ ಹೇಳಿದ್ದಾರೆ. ಅಲ್ಲದೇ 'ಕಬ್ಜ' ತಂಡದಿಂದಲೇ 2 ದಿನಕ್ಕೆ 100 ಕೋಟಿ ರೂ. ಅನೌನ್ಸ್ ಆಗಿದೆ.
ಅದೇ ಹಿಂದಿ ಬೆಲ್ಟ್‌ನಲ್ಲಿ 'ಕಬ್ಜ' ಬಗೆ ನೆಗೆಟಿವ್ ಕಮೆಂಟ್‌ಗಳು ಕೇಳಿ ಬರುತ್ತಿವೆ. ಆದರೆ, ಚಿತ್ರತಂಡ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಇದು ಯಾರದ್ದೂ ಪಿತೂರಿ, ಸುಮ್ಮನೆ ನೆಗೆಟಿವ್ ಪಬ್ಲಿಸಿಟಿ ಮಾಡಿಸುತ್ತಾರೆ ಅನ್ನೋ ಆರೋಪ ಚಿತ್ರತಂಡದ್ದು. ಒಟ್ನಲ್ಲಿ 'ಕಬ್ಜ' ಪ್ರೀ-ರಿಲೀಸ್ ಬ್ಯುಸಿನೆಸ್ ಬಗ್ಗೆ ಆರ್ ಚಂದ್ರುನೇ ಅಧಿಕೃತವಾದ ಮಾಹಿತಿಯನ್ನು ನೀಡಬೇಕಿದೆ. ಒಂದ್ಮೇಲೆ ಮೂಲಗಳು ನೀಡಿರುವ ಲೆಕ್ಕ ಪಕ್ಕಾ ಆಗಿದ್ದರೆ, ಚಂದ್ರುಗೆ ಜಾಕ್‌ಪಾಟ್ ಹೊಡೆದಿರೋದಂತೆ.


Click it and Unblock the Notifications











