For Quick Alerts
  ALLOW NOTIFICATIONS  
  For Daily Alerts

  'ದಿಯಾ' ನಟಿ ಈಗೇನು ಮಾಡುತ್ತಿದ್ದಾರೆ? ಕೈಯಲ್ಲಿರುವ ಸಿನಿಮಾಗಳೆಷ್ಟು?

  |

  ಕಳೆದ ವರ್ಷ ಕನ್ನಡ ಸಿನಿಪ್ರೇಮಿಗಳಿಗೆ ಬಹುವಾಗಿ ಹಿಡಿಸಿದ ಸಿನಿಮಾಗಳಲ್ಲಿ ಒಂದು 'ದಿಯಾ'. ಅಶೋಕ್ ನಿರ್ದೇಶನದ ಈ ಸಿನಿಮಾ ಚಿತ್ರಮಂದಿರದಲ್ಲಿ ದೊಡ್ಡ ಯಶಸ್ಸುಗಳಿಸದೇ ಇದ್ದರು ಒಟಿಟಿಯಲ್ಲಿ ಬಹುದೊಡ್ಡ ಹಿಟ್ ಆಯಿತು.

  'ದಿಯಾ' ಸಿನಿಮಾದಲ್ಲಿ ನಟಿಸಿದ್ದ ನಾಯಕಿ ಖುಷಿ ರವಿ ಮತ್ತು ನಾಯಕ ಪೃಥ್ವಿ ಅಂಬರ್ ಅಂತೂ ದೊಡ್ಡದಾಗಿ ಗಾಂಧಿನಗರದ ಗಮನ ಸೆಳೆದರು. ಪೃಥ್ವಿ ಅಂಬರ್ ಈಗಾಗಲೇ ಶಿವರಾಜ್ ಕುಮಾರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಜೊತೆಗೆ ಇನ್ನೊಂದಿಷ್ಟು ಸಿನಿಮಾಗಳ ಅವಕಾಶವನ್ನೂ ಪಡೆದುಕೊಂಡಿದ್ದಾರೆ.

  ಪೃಥ್ವಿ ಅಂಬರ್ ಮಾತ್ರವೇ ಅಲ್ಲದೆ ನಾಯಕಿ ಖುಷಿ ಸಹ ಹಲವಾರು ಅವಕಾಶಗಳನ್ನು ಪಡೆದಿದ್ದಾರೆ. ಲಾಕ್‌ಡೌನ್‌ ಮುಗಿಯುತ್ತಿದ್ದಂತೆ ಒಮ್ಮೆಲೆ ಸಾಲು-ಸಾಲು ಸಿನಿಮಾಗಳು ಸೆಟ್ಟೇರಲಿವೆ. ಮತ್ತೊಮ್ಮೆ ತಮ್ಮ ನಟನಾ ಪ್ರತಿಭೆಯನ್ನು ತೋರಲು ಸಜ್ಜಾಗಿ ಕಾಯುತ್ತಿದ್ದಾರೆ ಖುಷಿ. ಹಾಗಿದ್ದರೆ ಖುಷಿ ಕೈಯಲ್ಲಿರುವ ಸಿನಿಮಾಗಳು ಯಾವುವು?

  ಎರಡು ಥ್ರಿಲ್ಲರ್ ಕತೆಗಳಲ್ಲಿ ನಟನೆ

  ಎರಡು ಥ್ರಿಲ್ಲರ್ ಕತೆಗಳಲ್ಲಿ ನಟನೆ

  'ನಕ್ಷೆ' ಮತ್ತು ಹಾರರ್ ಕತೆಯುಳ್ಳ 'ಸ್ಪೂಕಿ ಕಾಲೇಜ್' ಸಿನಿಮಾಗಳಲ್ಲಿ ಖುಷಿ ನಟಿಸುತ್ತಿದ್ದಾರೆ. ಈ ಎರಡೂ ಸಿನಿಮಾಗಳ ಚಿತ್ರೀಕರಣ ಲಾಕ್‌ಡೌನ್ ಕಾರಣಕ್ಕೆ ಸ್ಥಗಿತಗೊಂಡಿದೆ. ಥ್ರಿಲ್ಲರ್ ಕತೆಯಾಗಿರುವ 'ನಕ್ಷೆ'ಯಲ್ಲಿ ಖುಷಿ ಪತ್ರಕರ್ತೆಯ ಮಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು 'ಸ್ಪೂಕಿ ಕಾಲೇಜ್‌'ನಲ್ಲಿ ಕಾಲೇಜು ಯುವತಿ ಪಾತ್ರ. ಈ ಸಿನಿಮಾದಲ್ಲಿ ವಿವೇಕ್ ಸಿಂಹ ನಾಯಕ.

  ಚೇತನ್ ಅಹಿಂಸ ಜೊತೆಯಲ್ಲಿ ದ್ವಿಭಾಷಾ ಸಿನಿಮಾ

  ಚೇತನ್ ಅಹಿಂಸ ಜೊತೆಯಲ್ಲಿ ದ್ವಿಭಾಷಾ ಸಿನಿಮಾ

  ನಟ ಚೇತನ್ ಅಹಿಂಸ ನಾಯಕ ಪಾತ್ರದಲ್ಲಿ ನಟಿಸುತ್ತಿರುವ 'ಮಾರ್ಗ' ಸಿನಿಮಾದಲ್ಲಿ ಖುಷಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ನಾಯಕಿಯದ್ದು ಆಶ್ರಮದಲ್ಲಿ ಬೆಳೆದ ಸಂಪ್ರದಾಯಸ್ಥ ಪಾತ್ರ. ಈ ಸಿನಿಮಾವು ಎರಡು ಭಾಷೆಗಳಲ್ಲಿ ಒಟ್ಟಿಗೆ ನಿರ್ಮಾಣವಾಗುತ್ತಿದ್ದು ಸಿನಿಮಾದಲ್ಲಿ ಮತ್ತೊಬ್ಬ ನಾಯಕಿಯೂ ಇದ್ದಾರೆ.

  ಮತ್ತೆ ಒಂದಾಗುತ್ತಿರುವ 'ದಿಯಾ' ತಂಡ

  ಮತ್ತೆ ಒಂದಾಗುತ್ತಿರುವ 'ದಿಯಾ' ತಂಡ

  ಇದನ್ನು ಹೊರತುಪಡಿಸಿದರೆ 'ದಿಯಾ' ಸಿನಿಮಾದಲ್ಲಿದ್ದ ಮೂವರು ಮತ್ತೆ ಸಿನಿಮಾ ಒಂದರಲ್ಲಿ ಒಂದಾಗುತ್ತಿದ್ದಾರೆ. ಪೃಥ್ವಿ ಅಂಬರ್, ಖುಷಿ, ದೀಕ್ಷಿತ್ ಶೆಟ್ಟಿ ಒಟ್ಟಿಗೆ ನಟಿಸಲಿರುವ ಸಿನಿಮಾದ ಬಗ್ಗೆ ಮಾತುಕತೆ ಪೂರ್ಣವಾಗಿದ್ದು ಲಾಕ್‌ಡೌನ್ ಮುಗಿಯುತ್ತಿದ್ದಂತೆ ಚಿತ್ರೀಕರಣ ಆರಂಭವಾಗಲಿದೆ. ಚಿತ್ರದ ಕತೆ ಬರೆದಿರುವುದು ಪೃಥ್ವಿ ಅಂಬರ್. ಇವನ್ನೆಲ್ಲ ಬಿಟ್ಟು ಇನ್ನೂ ಎರಡು ಸಿನಿಮಾಗಳಲ್ಲಿ ಖುಷಿ ನಟಿಸಲಿದ್ದಾರೆ. ಅವಿನ್ನೂ ಮಾತುಕತೆ ಹಂತದಲ್ಲಿವೆ.

  ಪ್ಲೀಸ್ ನಿಮ್ಮ ಕಾಲಿಗೆ ಬೀಳ್ತೀನಿ ಬಿಡಿ ಅಂತ Sonu Sood ಬಳಿ ಕಣ್ಣೀರಿಟ್ಟ ಯುವತಿ | Filmibeat Kannada
  ಕಿರುಚಿತ್ರದಲ್ಲಿ ನಟಿಸುತ್ತಿದ್ದಾರೆ ಖುಷಿ

  ಕಿರುಚಿತ್ರದಲ್ಲಿ ನಟಿಸುತ್ತಿದ್ದಾರೆ ಖುಷಿ

  ಫೀಚರ್ ಫಿಲಂ ಮಾತ್ರವೇ ಅಲ್ಲದೆ ಕಿರುಚಿತ್ರದಲ್ಲಿಯೂ ನಟಿಸುತ್ತಿದ್ದಾರೆ ಖುಷಿ. 'ಎವೆರಿಥಿಂಗ್ ಪಾಸಿಬಲ್' ಹೆಸರಿನ ಕಿರುಚಿತ್ರ ಇದಾಗಿದ್ದು ಕಿರುಚಿತ್ರದಲ್ಲಿ ಕ್ವೀನ್ ಎಲಿಜಬೆತ್ ಪಾತ್ರದಲ್ಲಿ ಖುಷಿ ನಟಿಸಲಿದ್ದಾರೆ. ಟೈಮ್ ಟ್ರಾವೆಲ್ ಮಾದರಿಯ ಕತೆಯನ್ನು ಕಿರುಚಿತ್ರ ಹೊಂದಿದ್ದು ಈ ಕಿರುಚಿತ್ರದ ಬಗ್ಗೆ ಖುಷಿಗೆ ಬಹಳ ನಿರೀಕ್ಷೆಗಳಿವೆ. ಈ ಕಿರುಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತು ಪಡೆಯುತ್ತದೆ ಎಂದಿದ್ದಾರೆ ಖುಷಿ.

  English summary
  Dia movie fame actress Kushee Ravi is now one of the busy actress in Kannada. She has five movies in her hand and a short movie also.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X