twitter
    For Quick Alerts
    ALLOW NOTIFICATIONS  
    For Daily Alerts

    ಪ್ರಚಾರ ಇಲ್ಲ, ಭಾಷಣನೂ ಮಾಡ್ಲಿಲ್ಲ, ವೆಂಕಟ್ ಗೆ ಸಿಕ್ಕ ಮತವೆಷ್ಟು.?

    By Bharath Kumar
    |

    ಮದುವೆ ಆಗಿದ್ದೀನಿ ಅಂತ ಹೇಳಿ ಎಲ್ಲರಿಗೂ ಕಾಗೆ ಹಾರಿಸಿದ್ದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್, ಬೆಂಗಳೂರಿನ ರಾಜರಾಜಶ್ವರಿ ನಗರ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಎಲ್ಲರಿಗೂ ಗೊತ್ತೆ ಇದೆ.

    ಅರೇ ಈ ಹುಚ್ಚನಿಗೆ ಯಾರ್ ವೋಟ್ ಹಾಕ್ತಾರೆ ಹೋಗ್ರಿ ಅಂತ ಅನೇಕರು ಮಾತಾನಾಡಿಕೊಂಡಿದ್ದರು. ಅಚ್ಚರಿಯೆಂಬಂತೆ ವೆಂಕಟ್ ಅವರಿಗೆ ಮತಗಳು ಬಂದಿವೆ. 28ನೇ ತಾರೀಖು ನಡೆದಿದ್ದ ರಾಜರಾಜೇಶ್ವರಿ ನಗರ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ನಾಯ್ಡು ಜಯಗಳಿಸಿದ್ದಾರೆ.

    'ಇದು ಮುನಿರತ್ನ ಗೆಲುವಲ್ಲ, ಸಿದ್ದರಾಮಯ್ಯ ಸರ್ಕಾರದ ಗೆಲುವು'

    ಆದ್ರೆ, ಸ್ವತಂತ್ರ ಅಭ್ಯರ್ಥಿ ಹುಚ್ಚ ವೆಂಕಟ್ ಹೀನಾಯ ಸೋಲು ಕಂಡಿದ್ದಾರೆ. ಸೋಲು ಕಂಡಿದ್ದರು, ತನ್ನ ಪರವಾಗಿ ವೋಟ್ ಹಾಕುವ ಜನರಿದ್ದಾರೆ ಎಂದು ಖುಷಿ ಪಡಬಹುದಾಗಿದೆ.

    How many votes get Huccha Venkat in Rajarajeshwari Nagar

    ''ನಾನು ಮನೆ-ಮನೆಗೆ ಬಂದು ಮತ ಕೇಳುವುದಿಲ್ಲ. ಯಾರು ದುಡ್ಡಿಗೆ ವೋಟು ಮಾರಿಕೊಳ್ಳವರೋ ಅವರು ನನ್ನ ಎಕ್ಕಡ ಸಮಾನ' ಎಂದು ಹೇಳಿದ್ದ ವೆಂಕಟ್ ಎಲ್ಲಿಯೂ ಪ್ರಚಾರ ಮಾಡಿಲ್ಲ. ಹೀಗಿದ್ದರೂ, 764 ಮತಗಳು ಬಂದಿರುವುದು ನಿಜಕ್ಕೂ ಅಚ್ಚರಿ ಉಂಟು ಮಾಡಿದೆ.

    ಆರ್‌ಆರ್‌ ನಗರದಲ್ಲಿ ಕಾಂಗ್ರೆಸ್‌ ಮುನ್ನಡೆಗೆ ಎಚ್‌ಡಿಕೆ ಹರ್ಷ

    ಹೌದು, ಮತ ಎಣಿಕೆ ಮುಕ್ತಾಯಗೊಂಡಿದ್ದ ವೇಳೆ ವೆಂಕಟ್ ಅವರ ಖಾತೆಗೆ ಸುಮಾರು 764 ಮತಗಳು ಬಂದಿದ್ದವು. ಇದು ಜನಸಾಮಾನ್ಯರಿಗೆ ಅಚ್ಚರಿ ಉಂಟು ಮಾಡಿದೆ.

    ಮೇ 12ರಂದು ನಡೆಯಬೇಕಿದ್ದ ಚುನಾವಣೆಯನ್ನು ವಿವಿಧ ಕಾರಣಗಳಿಂದ ಮುಂದೂಡಲಾಗಿತ್ತು. ಹೀಗಾಗಿ, ಮೇ 28ರಂದು ಚುನಾವಣೆ ನಡೆದಿದ್ದು, ಇಂದು ಮತ ಎಣಿಕೆ ನಡೆದಿದೆ.

    English summary
    Rajarajeshwari Nagar assembly constituency independent candidate Huccha Venkat get 604 votes in the 15th round of election counting.
    Thursday, May 31, 2018, 13:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X