'ಮ್ಯಾಕ್ಸ್' ನೋಡಲು ಪ್ರಸನ್ನ ಚಿತ್ರಮಂದಿರದಲ್ಲಿ ನೂಕುನುಗ್ಗಲು, ಮೈಸೂರಿನಲ್ಲಿಯೂ ಸುದೀಪ್ ಅಬ್ಬರ...!

ಕನ್ನಡ ಚಿತ್ರರಂಗಕ್ಕೆ ಡಿಸೆಂಬರ್ ತುಂಬಾನೇ ಲಕ್ಕಿ. ಮೊದಲಿಂದ ಈ ಮಾತು ಸಾಬೀತಾಗ್ತಾನೇ ಬಂದಿದೆ. ಮುಂಗಾರು ಮಳೆಯಿಂದ ಕಿರಿಕ್ ಪಾರ್ಟಿವರೆಗೆ ಕೆಜಿಎಫ್‌ ಚಿತ್ರದಿಂದ ಕಾಟೇರವರೆಗೆ ಡಿಸೆಂಬರ್‌ನಲ್ಲಿ ತೆರೆಗೆ ಬಂದ ಅನೇಕ ಚಿತ್ರಗಳು ಗೆದ್ದಿವೆ. ಅದರಲ್ಲಿಯೂ ಡಿಸೆಂಬರ್‌ನ ಕೊನೆಯ ವಾರ ಕನ್ನಡ ಚಿತ್ರರಂಗದ ಪಾಲಿಗೆ ಲಕ್ಕಿ ವೀಕ್ ಎನ್ನುವ ಮಾತು ಗಾಂಧಿನಗರದಲ್ಲಿದೆ.

ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಈ ವಾರ ತೆರೆಗೆ ಬಂದ ಮ್ಯಾಕ್ಸ್ ಕನ್ನಡಿಗರಿಗೆ ಮ್ಯಾಕ್ಸಿಮಮ್ ಮನರಂಜನೆಯನ್ನು ನೀಡುತ್ತಿದೆ. ಬಾಕ್ಸಾಫೀಸ್‌ನಲ್ಲಿ ಮ್ಯಾಕ್ಸಿಮಮ್ ಸದ್ದು ಮಾಡುತ್ತಿದೆ. ಒಂದು ಲೆಕ್ಕಾಚಾರದ ಪ್ರಕಾರ 930 ಸ್ಕ್ರೀನ್‌ಗಳಲ್ಲಿ ತೆರೆಗೆ ಬಂದ ಮ್ಯಾಕ್ಸ್ ಮೊದಲ ದಿನ ಹತ್ ಹತ್ರ 09 ಕೋಟಿ ಹಣವನ್ನು ದೋಚಿದೆ. ಆ ಪೈಕಿ ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿಯೇ ಮೊದಲ ದಿನವೇ ಹನ್ನೆರಡು ಲಕ್ಷವನ್ನು ದೋಚಿದೆ ಮ್ಯಾಕ್ಸ್ .

how-much-did-max-collect-at-prasannatheatre-and-what-is-the-films-collection-in-mysuru-deets-inside

ಹೌದು, ಬೆಂಗಳೂರಿನ ಪುರಾತನ ಚಿತ್ರಮಂದಿರಗಳಲ್ಲಿ ಒಂದಾಗಿರುವ ಪ್ರಸನ್ನ ಚಿತ್ರಮಂದಿರದಲ್ಲಿ ನಿನ್ನೆ ಒಂದೇ ದಿನ ಮ್ಯಾಕ್ಸ್ ಚಿತ್ರ 12 ಲಕ್ಷವನ್ನು ಗಳಿಸಿದೆ ಎನ್ನುವ ಸುದ್ದಿ ಸದ್ಯ ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಇನ್ನು, ದಿನಕ್ಕೆ ಐದು ಬಾರಿ ಚಿತ್ರ ಇಲ್ಲಿ ಪ್ರದರ್ಶನ ಕಾಣುತ್ತಿದ್ದು, ನಿನ್ನೆಯ ಐದು ಪ್ರದರ್ಶನಗಳು ಹೌಸ್‌ಫುಲ್ ಪ್ರದರ್ಶನವನ್ನು ಕಂಡಿವೆ. ಇವತ್ತು ಕೂಡ ಪ್ರಸನ್ನ ಚಿತ್ರಮಂದಿರದಲ್ಲಿ ಬೆಳ್ಳಿಗ್ಗೆಯ 10-30 ಮತ್ತು ಮಧ್ಯಾಹ್ನದ 01-30ರ ಶೋಗಳು ಹೌಸ್ ಫುಲ್ ಆಗಿವೆ. 07-30ರ ಶೋದ ಟಿಕೆಟ್‌ಗಳು ಕೂಡ ಬಿಕರಿಯಾಗಿವೆ. ಈ ಕಾರಣಕ್ಕೆ ನಿನ್ನೆಯಂತೆ ಇಂದು ಕೂಡ ಪ್ರಸನ್ನ ಚಿತ್ರಮಂದಿರದಲ್ಲಿ ಹತ್ತು ಲಕ್ಷಕ್ಕೂ ಅಧಿಕ ಗಳಿಕೆಯಾಗುವ ನಿರೀಕ್ಷೆ ಇದೆ.

ಇನ್ನು ಕೇವಲ ಬೆಂಗಳೂರಿನ ಪ್ರಸನ್ನ ಮಾತ್ರವಲ್ಲ ಮೈಸೂರಿನಲ್ಲಿ ಕೂಡ ಮ್ಯಾಕ್ಸ್ ಚಿತ್ರಕ್ಕೆ ಮ್ಯಾಕ್ಸಿಮಮ್ ಕನ್ನಡಿಗರು ಮನ ಸೋತಿದ್ದಾರೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಮೈಸೂರಿನ ಸಂಗಮ್ ಚಿತ್ರಮಂದಿರವೊಂದರಲ್ಲಿಯೇ ಮ್ಯಾಕ್ಸ್ ನಿನ್ನೆ ಹತ್ತು ಲಕ್ಷವನ್ನು ಗಳಿಸಿದೆ. ನಿನ್ನೆಯ ಆರಕ್ಕೆ ಆರು ಪ್ರದರ್ಶನಗಳು ಹೌಸ್‌ ಫುಲ್ ಪ್ರದರ್ಶನವನ್ನು ಕಂಡಿವೆ.

ಸಂಗಮ್ ಮಾತ್ರವಲ್ಲ ಮೈಸೂರಿನ ರಾಜ್‌ಕಮಲ್ ಚಿತ್ರಮಂದಿರದಲ್ಲಿ ಕೂಡ ನಿನ್ನೆ ನೂಕು ನುಗ್ಗಲಿನ ವಾತಾವರಣ ಕಂಡು ಬಂದಿದೆ. ನಾಲ್ಕು ಪ್ರದರ್ಶನಗಳು ಹೌಸ್ ಫುಲ್ ಆಗಿವೆ. ಇನ್ನು ನಿನ್ನೆ ವ್ಯಕ್ತವಾದ ಸಾರ್ವತ್ರಿಕ ಅಭಿಪ್ರಾಯದಿಂದ ಮ್ಯಾಕ್ಸ್ ಚಿತ್ರದ ಬೇಡಿಕೆ ಹೆಚ್ಚಾಗಿದೆ. ಗಾಂಧಿನಗರದ ವಿತರಕರ ವಲಯದಲ್ಲಿ ಕೇಳಿ ಬರುತ್ತಿರುವ ಮಾತುಗಳ ಪ್ರಕಾರ ಮ್ಯಾಕ್ಸ್ ಪ್ರದರ್ಶನದ ಸಂಖ್ಯೆಯಲ್ಲಿ ನಾಳೆಯಿಂದ ಏರಿಕೆಯಾಗಲಿದೆ. ಹತ್ತು ಸ್ಕ್ರೀನ್‌ಗಳು ಮ್ಯಾಕ್ಸ್ ಲಿಸ್ಟ್‌ಗೆ ಸೇರ್ಪಡೆಯಾಗಲಿವೆ.

ಒಟ್ನಲ್ಲಿ ಮ್ಯಾಕ್ಸ್ ಚಿತ್ರಕ್ಕೆ ಕರುನಾಡಿನೆಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಪ್ರೇಕ್ಷಕರ ಜೊತೆ ಜೊತೆಯಲ್ಲಿ ವಿಮರ್ಷಕರ ಹೃದಯವನ್ನು ಕೂಡ ಚಿತ್ರ ಗೆದ್ದಿದೆ. ಇನ್ನು, ಅಭಿಮಾನಿಗಳು ಸುದೀಪ್ ಅವರ ಈ ಮಾಸ್ ಅವತಾರವನ್ನು ಕಂಡು ರಣಕೇಕೆ ಹಾಕುತ್ತಿದ್ದಾರೆ. ಚಿತ್ರಮಂದಿರದಲ್ಲಿ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಇನ್ನು ಕೇವಲ ಮ್ಯಾಕ್ಸ್ ಚಿತ್ರವನ್ನು ನೋಡಲು ಸಕುಟುಂಬ ಸಮೇತ ಅನೇಕರು ಚಿತ್ರಮಂದಿರಕ್ಕೆ ಬರುತ್ತಿರುವುದು ವಿಶೇಷ. ಸದ್ಯ ಮ್ಯಾಕ್ಸ್ ಚಿತ್ರದ ಈ ನಾಗಾಲೋಟ ನಿಲ್ಲುವ ಲಕ್ಷಣ ಕಂಡು ಬರುತ್ತಿಲ್ಲ. ಇನ್ನು ಶನಿವಾರ ಮತ್ತು ಭಾನುವಾರ ಚಿತ್ರದ ಗಳಿಕೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ. ಚಿತ್ರದ ಪ್ರದರ್ಶನದ ಸಂಖ್ಯೆಯಲ್ಲಿ ಕೂಡ ಇನ್ನು ಏರಿಕೆಯಾಗುವ ಸಾಧ್ಯತೆ ಇದೆ. ಒಟ್ಟಾರೆ ಈಗ ಮ್ಯಾಕ್ಸ್ ಚಿತ್ರ ಎಷ್ಟು ಹಣವನ್ನು ಬಾಕ್ಸಾಫೀಸ್‌ನಲ್ಲಿ ಗಳಿಸುತ್ತೆ ಎನ್ನುವ ಕುತೂಹಲ ಗಾಂಧಿನಗರದಲ್ಲಿ ಮನೆ ಮಾಡಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X