»   » ಆರ್ ದಿ ಕಿಂಗ್ ನಿರ್ದೇಶನಕ್ಕೆ ಪ್ರೇಮ್ ಸಂಭಾವನೆಯೆಷ್ಟು?

ಆರ್ ದಿ ಕಿಂಗ್ ನಿರ್ದೇಶನಕ್ಕೆ ಪ್ರೇಮ್ ಸಂಭಾವನೆಯೆಷ್ಟು?

Posted By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ವುಡ್ನಲ್ಲಿ ಸ್ಟಾರ್ವ್ಯಾಲ್ಯೂ ಇರೋ ನಿರ್ದೇಶಕರಲ್ಲಿ ಜೋಗಿ ಪ್ರೇಮ್ ಕೂಡ ಒಬ್ಬರು. ಪ್ರೇಮ್ ನಿರ್ದೇಶನ ಬಿಟ್ಟು ಹಲವು ವರ್ಷಗಳಾಗಿತ್ತು. ಈ ಸಮಯದಲ್ಲಿ ನಟಿಸೋಕೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬರ್ತಾ ಇದ್ದಿದ್ದರಿಂದ ನಟನೆಯಲ್ಲಿ ಬ್ಯುಸಿಯಾಗಿಬಿಟ್ಟರು.

ಪ್ರೇಮ್ ಮತ್ಯಾವಾಗ ಡೈರೆಕ್ಟ್ ಮಾಡ್ತಾರೆ ಅಂತ ಸಿನಿಪ್ರೇಮಿಗಳು ಕಾಯ್ತಿದ್ರು. ಚಿತ್ರಪ್ರೇಮಿಗಳಲ್ಲಿ ಪ್ರೇಮ್ ಡೈರೆಕ್ಷನ್ ಬಗ್ಗೆ ಕ್ರೇಜ್ ಇರೋ ಹಾಗೇ ಪ್ರೇಮ್ ಡೈರೆಕ್ಷನ್ ಮಾಡ್ತಾರೆ ಅಂದ್ರೆ ನಿರ್ಮಾಪಕರು ಕೋಟಿ ಕೋಟಿ ಸುರಿಯೋಕೆ ಈಗಲೂ ರೆಡಿ. ನಟನೆಗಿಂತ ಅವರ ನಿರ್ದೇಶನದ ಮೇಲೆ ಹೆಚ್ಚಿನ ವಿಶ್ವಾಸವಿದೆ ನಿರ್ಮಾಪಕರಿಗೆ, ಅಭಿಮಾನಿಗಳಿಗೂ.

How much director Prem is getting for R The King

ಅಂತೂ ಜೋಗಯ್ಯ ನಂತ್ರ, ಅಂದ್ರೆ ಐದು ವರ್ಷದ ನಂತ್ರ ಪ್ರೇಮ್ ನಿರ್ದೇಶನಕ್ಕೆ ಸೈ ಅಂದಿದ್ದು ಅಣ್ಣಾವ್ರ ಕುಟುಂಬದ ಕುಡಿ ವಿನಯ್ ರಾಜ್ಕುಮಾರ್ಗೆ ಇದು ವಜ್ರೇಶ್ವರಿ ಕಂಬೈನ್ಸ್ನ ಸಿನಿಮಾ. ಪ್ರೇಮ್ ನಿರ್ದೇಶನ ಇದೆ ಅಂದಮೇಲೆ ರಾಘಣ್ಣ ಕೂಡ ಚಿತ್ರಕ್ಕೆ ಕೋಟಿ ಕೋಟಿ ಸುರಿಯೋಕೆ ರೆಡಿಯಾಗಿದ್ದಾರೆ. [ಬಾಲಿವುಡ್ಡಿಗೆ ಹಾರಲಿದ್ದಾರಾ ಅಣ್ಣಾವ್ರ ಮೊಮ್ಮಗ ವಿನಯ್?]

ಚಿತ್ರದಲ್ಲಿ ವಿನಯ್ ರಾಜ್ಕುಮಾರ್ ಔಟ್ ಅಂಡ್ ಔಟ್ ಮಾಸ್ ಲುಕ್ನಲ್ಲಿ ಕಾಣಿಸಿಕೊಳ್ತಿದ್ದಾರೆ. ಹಾಗಾಗೀನೇ ಮುಂಬೈನಲ್ಲಿ ಡಾನ್ಸ್, ಫೈಟ್ಸ್ನ ವಿಶೇಷ ಟ್ರೈನಿಂಗ್ ಪಡೀತಿದ್ದಾರೆ ವಿನಯ್ರಾಜ್ಕುಮಾರ್. ಮೂರು ತಿಂಗಳ ಟ್ರೈನಿಂಗ್ ಅಂದ್ರೆ ನೀವೇ ಯೋಚನೇ ಮಾಡಿ ವಿನಯ್ರನ್ನ ಹೇಗೆ ಬದಲಾಯಿಸ್ತಾದ್ದಾರೆ ಪ್ರೇಮ್. [ಪ್ರೇಮ್ 'ಭಂ ಭಂ ಭೋಲೇನಾಥ್' ಡ್ರಾಪ್ ಆಯಿತಾ?]

How much director Prem is getting for R The King

ಇಷ್ಟೆಲ್ಲಾ ಮಾಡ್ತಿರೋ ಪ್ರೇಮ್ ಚಿತ್ರಕ್ಕೆ ಪಡೀತಿತೋ ಹಣ ಎರಡೂವರೆ ಕೋಟಿಯಂತೆ! ಈಗಾಗ್ಲೇ ನಿರ್ದೇಶನದ ಅರ್ಧದಷ್ಟು ಹಣ ಸದಾಶಿವನಗರದ ಮನೆಯಿಂದ ಚಂದ್ರಾ ಲೇಔಟ್ ಪ್ರೇಮ್ ಮನೆಗೆ ತಲುಪಿದೆ ಅಂತಿದೆ ಮೂಲಗಳು. ಅಂದಹಾಗೆ ಚಿತ್ರದ ಶೂಟಂಗ್ ಆಗಸ್ಟ್ನಲ್ಲಿ ಶುರುವಾಗ್ತಿದೆ. [ದಿನವೊಂದಕ್ಕೆ ಅತಿ ಹೆಚ್ಚು ಗಳಿಸುವ ಕನ್ನಡ ನಟರಿವರು]
English summary
How much director Prem is getting for Kannada movie R The King, produced by Raghavendra Rajkumar and Vinay Rajkumar in the lead? Kannada movie fans and producers even now have more confidence in Prem's direction than his acting. Hope Prem gives another hit for Vijay.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada