ಸಪ್ತ ಸಾಗರದಾಚೆ ಎಲ್ಲೋ ಚೆಲುವೆಯರಿಗೆ ಕನ್ನಡ ಸಿನಿಮಾ ಇಂಡಸ್ಟ್ರಿ ಬಗ್ಗೆ ಎಷ್ಟು ಗೊತ್ತು? ರಾಪಿಡ್ ಫೈರ್!
ಸ್ಯಾಂಡಲ್‌ವುಡ್‌ನಲ್ಲಿ ಸದ್ಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ್ದೇ ಸದ್ದು. ಮೊದಲ ಭಾಗ ಬಿಡುಗಡೆಯಾದ ಮೇಲೆ "ಸಪ್ತ ಸಾಗರದಾಚೆ ಎಲ್ಲೋ (ಸೈಡ್ ಬಿ)" ಮೇಲೆ ನಿರೀಕ್ಷೆ ಕೂಡ ಹೆಚ್ಚಾಗಿದೆ. ಹೇಮಂತ್ ಎಂ. ರಾವ್ ನಿರ್ದೇಶನದ ಈ ಸಿನಿಮಾದಲ್ಲಿ ಇಬ್ಬರು ಮುದ್ದಾದ ನಾಯಕಿಯರಿದ್ದಾರೆ.
ಕನ್ನಡದ ಮುದ್ದಾದ ನಟಿಮಣಿಯರಾದ ರುಕ್ಮಿಣಿ ವಸಂತ್ ಮತ್ತು ಚೈತ್ರ ಜೆ.ಆಚಾರ್, ರಕ್ಷಿತ್ ಶೆಟ್ಟಿಗೆ ನಾಯಕಿಯರಾಗಿದ್ದಾರೆ. ಮೊದಲ ಭಾಗದಲ್ಲಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದರು. ಸೈಡ್ ಬಿನಲ್ಲಿ ಚೈತ್ರ ಜೆ.ಆಚಾರ್ ಕೂಡ ಇದ್ದು, ಟ್ರೈಲರ್‌ನಲ್ಲಿ ಗಮನ ಸೆಳೆದಿದ್ದಾರೆ. ಹಾಗಾದರೇ ಈ ನಾಯಕಿಯರಿಗೆ ಕನ್ನಡ ಸಿನಿ ರಂಗದ ಬಗ್ಗೆ ಎಷ್ಟು ಗೊತ್ತು...? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಸಹಜವಾಗಿಯೇ ಇರುತ್ತದೆ, ಅದಕ್ಕೆ ಈ ರಾಪಿಡ್ ಫೈರ್ ಉತ್ತರ ನೀಡಲಿದೆ.

ಸಪ್ತ ಸಾಗರ ದಾಟುವ ರುಕ್ಮಿಣಿ ವಸಂತ್ ಮತ್ತು ಚೈತ್ರ ಜೆ.ಆಚಾರ್ ಜೊತೆ ರಾಪಿಡ್ ಫೈರ್
ಕಡಕ್ ಸಿನಿಮಾ ಯುಟ್ಯೂಬ್ ಚಾನೆಲ್ ನಡೆಸಿರುವ ಸಂದರ್ಶನದಲ್ಲಿ ಇಬ್ಬರು ನಾಯಕಿಯರ ಜೊತೆಗೆ ಆಂಕರ್ ರಾಪಿಡ್ ಫೈರ್ ನಡೆಸಿದ್ದಾರೆ. ಇದರಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಇವುಗಳಿಗೆ ನಟಿಯರು ಉತ್ತರ ನೀಡಿದ್ದಾರೆ. ಆ ಪ್ರಶ್ನೆಗಳೇನು, ಅದಕ್ಕೆ ಇವರು ಕೊಟ್ಟ ಉತ್ತರವೇನು ಎಂಬುದನ್ನು ಇಲ್ಲಿ ನೋಡೋಣ.
ಆಂಕರ್: ಕನ್ನಡದ ಈ ಸಿನಿಮಾ 550 ರಿ ರಿಲೀಸ್ ಆಗಿದೆ. ಯಾವುದು?
ಇಬ್ಬರು ನಟಿಯರು ಈ ಪ್ರಶ್ನೆ ಗೆಸ್ ಮಾಡಿ ನಾಗರಹಾವುನಾ ಎಂದು ಕೇಳುತ್ತಾರೆ. ಅದಕ್ಕೆ ಶಿವಣ್ಣನ ಸಿನಿಮಾ ಎಂದು ಕ್ಲೂ ಕೊಟ್ಟ ಮೇಲೆ 'ಓಂ' ಸಿನಿಮಾದ ಹೆಸರು ಹೇಳಿದ್ದಾರೆ. ಜೊತೆಗೆ ಅಷ್ಟೊಂದು ಸಲಿ ರಿ ರಿಲೀಸ್ ಆಗಿರುವುದಕ್ಕೆ ಅಶ್ಚರ್ಯ ಕೂಡ ವ್ಯಕ್ತಪಡಿಸಿದ್ದಾರೆ.
ಆಂಕರ್: ಮಲ್ಟಿಫ್ಲೆಕ್ಸ್‌ನಲ್ಲಿ 365 ದಿನ ಕಂಪ್ಲಿಟ್ ಮಾಡಿದ ಕನ್ನಡದ ಸಿನಿಮಾ
ಇದಕ್ಕೆ ತಕ್ಷಣ ರುಕ್ಮಿಣಿ ವಸಂತ್ ಪಟ್ ಎಂದು ಮುಂಗಾರು ಮಳೆ ಎಂದು ಹೇಳಿದ್ದಾರೆ.

ಆಂಕರ್: 375 ಸಿನಿಮಾಗಳಿಗೆ ಮ್ಯೂಸಿಕ್ ನೀಡಿದ, ಮೂರುವರೆ ಸಾವಿರ ಹಾಡುಗಳಿಗೆ ಲಿರಿಕ್ಸ್ ಬರೆದಿರುವ ಫೇಮಸ್ ಮ್ಯೂಸಿಕ್ ಡೈರೆಕ್ಟರ್?
ಈ ಪ್ರಶ್ನೆಗೆ ಪಟ್ ಎಂದು ನಟಿ ಚೈತ್ರಾ ಜೆ ಆಚಾರ್ 'ಹಂಸಲೇಖ' ಸರ್ ಎಂದು ಉತ್ತರಿಸಿದ್ದಾರೆ.
ಆಂಕರ್: ರಾಜ್ ಬಿ ಶೆಟ್ಟಿ ಬರವಣಿಗೆಯ ಒಂದು ಸಿನಿಮಾಕ್ಕೆ ನ್ಯಾಷನಲ್ ಅವಾರ್ಡ್ ಬಂದಿದೆ ಯಾವುದು?
ರುಕ್ಮಿಣಿ ವಸಂತ್ ಒಂದು ಮೊಟ್ಟೆಯ ಕಥೆನಾ ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ಚೈತ್ರಾ ಆಚಾರ್ ಅವರಿಗೆ ಉತ್ತರ ಗೊತ್ತಿದ್ದು, ಹೆಸರು ನೆನಪಿಗೆ ಬರುವುದಿಲ್ಲ. ಮಕ್ಕಳ ಚಿತ್ರ ಎಂದು ನೆನಪಿಸಿಕೊಳ್ಳುತ್ತಾ ಕೊನೆಗೆ 'ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಾಸರಗೋಡು' ಸಿನಿಮಾ ಹೆಸರು ಹೇಳುತ್ತಾರೆ. ಆದರೆ, ರಾಜ್ ಬಿ ಶೆಟ್ಟಿ ಬರವಣಿಗೆ ಕೂಡ ಮಾಡುತ್ತಾರೆ ಎಂದು ರುಕ್ಮಿಣಿ ವಸಂತ್ ಆಶ್ಚರ್ಯ ವ್ಯಕ್ತಪಡಿಸುತ್ತಾರೆ.
ಆಂಕರ್: ರಕ್ಷಿತ್ ಶೆಟ್ಟಿ ಅವರ ಮೊದಲ ಸಿನಿಮಾ ಯಾವುದು?
ಪ್ರಶ್ನೆಗೆ ತಟ್ಟಣೆ ಉತ್ತರಿಸುವ ರುಕ್ಮಿಣಿ ವಸಂತ್ ' ನಮ್ ಏರಿಯಾದಲ್ಲಿ ಒಂದಿನಾ' ಎಂದು ಹೇಳುತ್ತಾರೆ. ಜೊತೆಗೆ ಎಲ್ಲರೂ ತುಘಲಕ್ ಎಂದು ಅಂದುಕೊಂಡಿದ್ದಾರೆ ಎಂಬುದನ್ನು ಹೇಳುತ್ತಾರೆ.
ಆಂಕರ್: ಇವರು 300 ಸಿನಿಮಾ, 200 ಜಾನಪದ ಮತ್ತು ಭಕ್ತಿಗೀತೆಗಳನ್ನು ಹಾಡಿದ್ದಾರೆ. ಹಾಡಿಗೆ ರಾಷ್ಟ್ರಪ್ರಶಸ್ತಿ ಪಡೆದ ಏಕೈಕ ನಟ ಯಾರು?
ಈ ಪ್ರಶ್ನೆಗೆ ಕೊಂಚವೂ ತಡವರಿಸದೇ ಚೈತ್ರಾ ಜೆ ಆಚಾರ್ ತಕ್ಷಣ 'ಡಾ. ರಾಜ್‌ಕುಮಾರ್' ಎಂದು ಖುಷಿಯಿಂದ ಹೇಳುತ್ತಾರೆ. ಬಳಿಕ ರುಕ್ಮಿಣಿ ಅವರಿಗೆ ರಾಜ್ ಕುಮಾರ್ ಅವರು ಅಷ್ಟು ಅದ್ಭುತ ನಟರಾಗಿದ್ದರು ಅವರಿಗೆ ಗಾಯನಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಿದ್ದನ್ನು ಹೇಳುತ್ತಾರೆ.
ಆಂಕರ್: ದೇವರ ಮಗ, ಮಿಸ್ಟರ್ ಹರಿಶ್ಚಂದ್ರ, ಭೂತಯ್ಯನ ಮಕ್ಕಳು ಸಿನಿಮಾದಲ್ಲಿ ಚಿಕ್ಕ ರೋಲ್ ಮಾಡಿರುವ, ಈಗ ಕನ್ನಡದ ಟಾಪ್ ಹಿರೋ ಆಗಿರುವವರು ಯಾರು?
ಇದಕ್ಕೆ ರುಕ್ಮಿಣಿ ವಸಂತ್ ಉತ್ತರ ನೀಡಿದ್ದು, ಡಿಬಾಸ್ ಎನ್ನುತ್ತಾರೆ.
ಆಂಕರ್: ಹ್ಯಾಟ್ರಿಕ್ ಫಿಲಂಫೈರ್ ತೆಗೆದುಕೊಂಡಿರುವ ಕನ್ನಡದ ನಟ?
ಈ ಪ್ರಶ್ನೆಗ ಇಬ್ಬರು ಕೊಂಚ ಗೊಂದಲಕ್ಕೆ ಒಳಗಾಗಿದ್ದಾರೆ. ಬಳಿಕ ಆಂಕರ್ ಕ್ಲೂ ಕೊಟ್ಟಿದ್ದು, ನಟ ಸುದೀಪ್ ಹೆಸರನ್ನು ಹೇಳಿದ್ದಾರೆ.
ಅಂಕರ್: ಪ್ರೀತಿ ಇಲ್ಲದ ಮೇಲೆ, ನಂದಗೋಲುಕದ ಮೂಲಕ ಪರಿಚಯವಾಗಿ ನ್ಯಾಷನಲ್ ಸ್ಟಾರ್ ಆದವರು ಯಾರು?
ಈ ಪ್ರಶ್ನೆಗೆ ರುಕ್ಮಿಣಿ ವಸಂತ್ ಮತ್ತು ಚೈತ್ರಾ ಇಬ್ಬರು ಒಟ್ಟಿಗೆ ನಟ ಯಶ್ ಹೆಸರು ಹೇಳುತ್ತಾರೆ.
ಆಂಕರ್: ಕನ್ನಡದ ಈ ನಿರ್ದೇಶಕರು ಬಾಲಿವುಡ್‌ನ ಅಂಧಾಧುನ್ ಸಿನಿಮಾಗೆ ಸ್ಕ್ರೀನ್‌ಪ್ಲೈ ಮಾಡಿದ್ದಾರೆ?
ನಟಿಯರಿಬ್ಬರು ಖುಷಿಯಿಂದ 'ಸಪ್ತ ಸಾಗರದಾಚೆ ಎಲ್ಲೋ' ನಿರ್ದೇಶಕ ಹೇಮಂತ್ ಎಂ. ರಾವ್ ಹೇಸರನ್ನು ಹೇಳುತ್ತಾರೆ.


Click it and Unblock the Notifications











