'ಸಾಹೋ' ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಖರ್ಚು ಮಾಡಿದ್ದು ಎಷ್ಟು ಕೋಟಿ?
Recommended Video
ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ಸಾಹೋ ಸಿನಿಮಾ ಸುಮಾರು 350 ಕೋಟಿ ಬಜೆಟ್ ನಲ್ಲಿ ತಯಾರಾಗಿದೆ ಎಂದು ಸ್ವತಃ ಪ್ರಭಾಸ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಫೈಟ್ ಸೀನ್ ಒಂದಕ್ಕೆ 80 ಕೋಟಿ ಖರ್ಚು ಮಾಡಲಾಗಿದೆಯಂತೆ.
ಈ ಮಧ್ಯೆ ಸಾಹೋ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮವನ್ನ ಹೈದ್ರಾಬಾದ್ ನ ರಾಮೋಜಿ ಫಿಲಂ ಸಿಟಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಆಗಸ್ಟ್ 18 ರಂದು ನಡೆದ ಈ ಸಮಾರಂಭಕ್ಕೆ ಬರೋಬ್ಬರಿ 2.5 ಕೋಟಿ ಖರ್ಚು ಮಾಡಲಾಗಿದೆಯಂತೆ.
ಪ್ರಭಾಸ್, ಶ್ರದ್ಧಾ ಕಪೂರ್, ಅರುಣ್ ವಿಜಯ್, ರಾಜಮೌಳಿ, ವಿವಿ ವಿನಾಯಕ್, ಅಲ್ಲು ಅರವಿಂದ್, ಕೃಷ್ಣಂರಾಜು ಸೇರಿದಂತೆ ತೆಲುಗು ಸಿನಿಮಾ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಸುಜಿತ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದು. ಈಗಾಗಲೇ ಟೀಸರ್, ಟ್ರೈಲರ್ ಹಾಗೂ ಹಾಡುಗಳು ಮೂಲಕ ಹಾಲಿವುಡ್ ರೇಂಜ್ ನಲ್ಲಿ ಈ ಸಿನಿಮಾ ಇದೆ ಎಂಬ ಕಲ್ಪನೆ ಮೂಡಿದೆ.
ಈ ಮೊದಲೇ ನಿರ್ಧರಿಸಿದ್ದಂತೆ ಆಗಿದ್ದರೇ ಆಗಸ್ಟ್ 15ಕ್ಕೆ ಸಾಹೋ ಸಿನಿಮಾ ಬರಬೇಕಿತ್ತು. ಆದ್ರೆ, ಹದಿನೈದು ಮುಂದಕ್ಕೆ ಹೋಗಿದ್ದು, ಆಗಸ್ಟ್ 30ರಂದು ಜಗತ್ತಿನಾದ್ಯಂತ ತೆಲುಗು ಮತ್ತು ಹಿಂದಿಯಲ್ಲಿ ಸಿನಿಮಾ ತೆರೆಕಾಣಲಿದೆ.


Click it and Unblock the Notifications











