For Quick Alerts
  ALLOW NOTIFICATIONS  
  For Daily Alerts

  ಸಿನಿಮಾಕ್ಕೆ 'ಓಂ' ಎಂದು ಹೆಸರಿಟ್ಟಿದ್ದರ ಹಿಂದಿದೆ ಸ್ವಾರಸ್ಯಕರ ಕತೆ

  |

  ಕನ್ನಡದ ಪ್ರಮುಖ ಸಿನಿಮಾಗಳಲ್ಲಿ ಒಂದಾದ 'ಓಂ' ಸಿನಿಮಾ ತೆರೆಗೆ ಬಂದು ಇಂದಿಗೆ ಇಪ್ಪತ್ತೈದು ವರ್ಷ.

  'ಓಂ' ಚಿತ್ರದ ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯಗಳು | 25 Years for OM | Shivarajkumar | Upendra

  1990 ರಲ್ಲಿ ಬಿಡುಗಡೆ ಆದ ಓಂ ಸಿನಿಮಾ ಆಗಿನ ಕಾಲಕ್ಕೆ ಎಲ್ಲಾ ರೀತಿಯಲ್ಲಿಯೂ ಭಿನ್ನ ಸಿನಿಮಾ. ಕತೆ, ಕತೆ ಹೇಳುವ ತಂತ್ರ, ಕ್ಯಾಮೆರಾ ಕೆಲಸ, ನಾಯಕನ ವ್ಯಕ್ತಿತ್ವ ಹೀಗೆ ಎಲ್ಲಾ ಬಗೆಯಲ್ಲೂ ಸಾಮಾನ್ಯ ಸಿನಿಮಾಗಳಿಗಿಂತಲೂ ಭಿನ್ನವಾಗಿತ್ತು.

  'ಓಂ' ಸಿನಿಮಾಕ್ಕೆ ಮೊದಲ ಆಯ್ಕೆ ಶಿವರಾಜ್ ಕುಮಾರ್ ಆಗಿರಲಿಲ್ಲ!'ಓಂ' ಸಿನಿಮಾಕ್ಕೆ ಮೊದಲ ಆಯ್ಕೆ ಶಿವರಾಜ್ ಕುಮಾರ್ ಆಗಿರಲಿಲ್ಲ!

  ಓಂ ಸಿನಿಮಾದ ಭಿನ್ನತೆ ಅದರ ಹೆಸರಿನಿಂದಲೇ ಪ್ರಾರಂಭವಾಗಿತ್ತು. ಈ ಸಿನಿಮಾಕ್ಕೆ ಓಂ ಎಂದು ಹೆಸರು ಇಟ್ಟಿದ್ದಕ್ಕೂ ಒಂದು ಸ್ವಾರಸ್ಯಕರ ಕತೆ ಇದೆ. ಸಿನಿಮಾಕ್ಕೆ 'ಓಂ' ಎಂದು ಹೆಸರಿಡಲು ಕಾರಣ ಡಾ.ರಾಜ್‌ಕುಮಾರ್.

  ಓಂ ಬರೆದಿದ್ದು ಶಿವರಾಜ್‌ಕುಮಾರ್ ಅವರಿಗಾಗಿ ಅಲ್ಲ

  ಓಂ ಬರೆದಿದ್ದು ಶಿವರಾಜ್‌ಕುಮಾರ್ ಅವರಿಗಾಗಿ ಅಲ್ಲ

  ಉಪೇಂದ್ರ ಅವರು ಓಂ ಕತೆ ಬರೆದಿದ್ದು ಶಿವರಾಜ್‌ ಕುಮಾರ್ ಅವರಿಗಾಗಿ ಅಲ್ಲ. ಓಂ ಸಿನಿಮಾದ ನಾಯಕನಾಗಿ ಮೊದಲು ಆಯ್ಕೆ ಆಗಿದ್ದು ಕುಮಾರ್ ಗೋವಿಂದ್. ಆದರೆ ಶೂಟಿಂಗ್ ಪ್ರಾರಂಭವಾಗುವ ಕೆಲವೇ ದಿನಗಳ ಮುಂಚೆ ಕುಮಾರ್ ಗೋವಿಂದ್-ಉಪೇಂದ್ರ ನಡುವೆ ಸಣ್ಣ ಮನಸ್ತಾಪ ಉಂಟಾಯಿತು.

  ಕತೆ ಕೇಳಿ ಓಕೆ ಎಂದ ರಾಜ್‌ಕುಮಾರ್

  ಕತೆ ಕೇಳಿ ಓಕೆ ಎಂದ ರಾಜ್‌ಕುಮಾರ್

  ಹಾಗಾಗಿ ಕತೆ ರಾಜ್‌ಕುಮಾರ್ ಅವರ ಬಳಿ ಹೋಯಿತು. ರಾಜ್‌ಕುಮಾರ್ ಅವರು ವರದಣ್ಣ ಅವರು ಕತೆ ಕೇಳಿ ಓಕೆ ಎಂದರು. ಶಿವರಾಜ್ ಕುಮಾರ್ ನಾಯಕರಾಗುವುದು, ಪ್ರೇಮ ನಾಯಕಿ ಎಂದೆಲ್ಲಾ ಫಿಕ್ಸ್ ಆಯಿತು.

  'ಓಂ' ಸಿನಿಮಾ ಸಂಭ್ರಮ: ಶಿವಣ್ಣ-ಉಪೇಂದ್ರ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಗಿಫ್ಟ್'ಓಂ' ಸಿನಿಮಾ ಸಂಭ್ರಮ: ಶಿವಣ್ಣ-ಉಪೇಂದ್ರ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಗಿಫ್ಟ್

  ಸ್ಕ್ರಿಪ್ಟ್ ಮೇಲೆ ಓಂ ಬರೆದರು ರಾಜ್‌ಕುಮಾರ್

  ಸ್ಕ್ರಿಪ್ಟ್ ಮೇಲೆ ಓಂ ಬರೆದರು ರಾಜ್‌ಕುಮಾರ್

  ಆಗ ರಾಜ್‌ಕುಮಾರ್ ಅವರು ಉಪೇಂದ್ರ ಬರೆದಿದ್ದ ಸ್ಕ್ರಿಪ್ಟ್ ಮೇಲೆ 'ಓಂ' ಎಂದು ಬರೆದರು. ಆಗ ಉಪೇಂದ್ರ ಅವರಿಗೆ ಅನ್ನಿಸಿತು, ಇದನ್ನೇ ಏಕೆ ಸಿನಿಮಾದ ಹೆಸರಾಗಿ ಇಡಬಾರದೆಂದು. ಉಪೇಂದ್ರ ಐಡಿಯಾವನ್ನು ರಾಜ್‌ಕುಮಾರ್, ವರದಣ್ಣ, ಪಾರ್ವತಮ್ಮ ರಾಜ್‌ಕುಮಾರ್ ಸಹ ಒಪ್ಪಿದರು.

  ರಾಜ್‌ಕುಮಾರ್ ಬರೆದ ರೀತಿಯನ್ನೇ ಬಳಸಿಕೊಂಡರು

  ರಾಜ್‌ಕುಮಾರ್ ಬರೆದ ರೀತಿಯನ್ನೇ ಬಳಸಿಕೊಂಡರು

  ರಾಜ್‌ ಕುಮಾರ್ ಅವರು ಹೇಗೆ 'ಓಂ' ಬರೆದಿದ್ದರೋ ಅದೇ ರೀತಿಯಲ್ಲಿ, ಅದೇ ಫಾಂಟ್‌ನಲ್ಲಿಯೇ ಸಿನಿಮಾದ ಹೆಸರು ಮುದ್ರಿತವಾಗಿದೆ ಎನ್ನಲಾಗುತ್ತದೆ. ಈ ಸಿನಿಮಾದ ಹೆಸರು ಜನರನ್ನು ಸಿನಿಮಾದತ್ತ ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

  English summary
  How Upendra selected Om name to his movie. Dr Rajkumar is the reason to name that film as Om.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X