ಈ ಮೂವರನ್ನ ಬಿಟ್ಟು ಉಳಿದವರಿಗೆಲ್ಲಾ Faceappನಲ್ಲಿ ವಯಸ್ಸಾಗಿದೆ.!

ಫೇಸ್ ಬುಕ್, ಟ್ವಿಟ್ಟರ್ ಈಗ ಯಾವುದೇ ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ರು ಜನಗಳಿಗೆಲ್ಲಾ ವಯಸ್ಸಾಗೋಗಿದೆ. ಅದರಲ್ಲೂ ಸಿನಿಮಾ ನಟ, ನಟಿಯರಿಗೆ ವಯಸ್ಸಾಗಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಇದರಿಂದ ಸಹಜವಾಗಿ ಜನರಿಗೆ ಒಳ್ಳೆಯ ಮನರಂಜನೆ ಸಿಗ್ತಿದೆ.

ಪ್ರಸ್ತುತ ಫೋಟೋವನ್ನ ಫೇಸ್ ಆಪ್ ಬಳಸಿಕೊಂಡು ವಯಸ್ಸಾಗಿರುವಂತೆ ನೋಡುವ ವಿಧಾನ ಈಗ ಟ್ರೆಂಡ್ ಆಗಿದೆ. ಕನ್ನಡದ ಖ್ಯಾತ ನಟರಾದ ಸುದೀಪ್, ದರ್ಶನ್, ಯಶ್, ಪುನೀತ್, ನಟಿಯರಾದ ರಚಿತಾ ರಾಮ್, ಪ್ರಿಯಾಮಣಿ, ಶಾನ್ವಿ ಶ್ರೀವಾಸ್ತವ್ ಹೀಗೆ ಅನೇಕರ ಫೋಟೋಗಳು ಫೇಸ್ ಆಪ್ ಬಳಸಿ ಎಡಿಟ್ ಮಾಡಲಾಗಿದೆ.

ವಿಶೇಷ ಏನಪ್ಪಾ ಅಂದ್ರೆ ಫೇಸ್ ಆಪ್ ನಲ್ಲಿ ಕೆಲವು ಸ್ಟಾರ್ ಗಳಿಗೆ ವಯಸ್ಸೇ ಆಗ್ತಿಲ್ಲ ಎಂಬುದು ಈಗ ಚರ್ಚೆಯಾಗ್ತಿದೆ. ಅಂದ್ಹಾಗೆ, ಇದು ಫೇಸ್ ಆಪ್ ಪರಿಣಾಮವಲ್ಲ, ಬದಲಾಗಿ ಈ ಸ್ಟಾರ್ ಗಳೇ ಆ ಮಟ್ಟಿಗೆ ತಮ್ಮ ಸೌಂದರ್ಯ ಕಾಪಾಡಿಕೊಂಡಿದ್ದಾರೆ. ಹಾಗಾಗಿ, ಫೇಸ್ ಆಪ್ ನಲ್ಲಿ ಅವರಿಗೆ ವಯಸ್ಸಾಗಿಲ್ಲ ಎಂದು ಸೋಶಿಯಲ್ ಮಿಡಿಯಾದಲ್ಲಿ ಟ್ರೋಲ್ ಆಗ್ತಿದೆ. ಅಷ್ಟಕ್ಕೂ, ಫೇಸ್ ಆಪ್ ನಲ್ಲಿ ವಯಸ್ಸೇ ಆಗದೆ ಇರುವ ಆ ಸ್ಟಾರ್ ಗಳು ಯಾರು?

ಮನಮೋಹಕ ಶಿವಣ್ಣ

ಮನಮೋಹಕ ಶಿವಣ್ಣ

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರಿಗೆ 57 ವರ್ಷ ವಯಸ್ಸು ಆಗಿದ್ದರೂ ಈಗಲೂ ಚಿರಯುವಕನಂತೆ ಕಾಣಿಸಿಕೊಳ್ಳುತ್ತಾರೆ. ಯಂಗ್ ಸ್ಟಾರ್ ಗಳು ನಾಚುವಂತೆ ಡ್ಯಾನ್ಸ್, ಫೈಟ್ ಮಾಡ್ತಾರೆ. ಈ ವಯಸ್ಸಿನಲ್ಲಿ ಶಿವಣ್ಣ ಎನರ್ಜಿ ನೋಡಿ ಇಡೀ ಚಿತ್ರರಂಗವೇ ಅಚ್ಚರಿಯಿಂದ ನೋಡುತ್ತೆ. ಇಂತಹ ಶಿವಣ್ಣ ಅವರ ಫೋಟೋವನ್ನ ಫೇಸ್ ಆಪ್ ನಲ್ಲಿ ಬಳಸಿದರೇ ವಯಸ್ಸಾಗಿರುವ ಫೋಟೋ ಬರುವುದಿಲ್ಲ ಎಂದು ಫ್ಯಾನ್ಸ್ ಟ್ರೋಲ್ ಮಾಡ್ತಿದ್ದಾರೆ.

ಸುಮನ್ ರಂಗನಾಥ್

ಸುಮನ್ ರಂಗನಾಥ್

ಶಿವರಾಜ್ ಕುಮಾರ್ ಅವರಂತೆ ವಯಸ್ಸಿನ ವಿಚಾರದಲ್ಲಿ ಭಾರಿ ಗಮನ ಸೆಳೆದಿರುವ ನಟಿ ಸುಮನ್ ರಂಗನಾಥ್. 40 ವರ್ಷ ದಾಟಿದರೂ 20ರ ಹುಡುಗಿಯಂತೆ ಸುಮನ್ ತಮ್ಮ ಸೌಂದರ್ಯವನ್ನ ಕಾಪಾಡಿಕೊಂಡಿದ್ದಾರೆ. ಹೀಗಾಗಿ, ಫೇಸ್ ಆಪ್ ನಲ್ಲಿ ಇವರು ಫೋಟೋ ಕೂಡ ವಯಸ್ಸಾಗಿರುವಂತೆ ಕಾಣುವುದಿಲ್ಲ ಎಂಬ ಅಭಿಪ್ರಾಯ ಇದೆ.

ಮತ್ತೊಬ್ಬ ಸೆಂಚುರಿಸ್ಟಾರ್

ಮತ್ತೊಬ್ಬ ಸೆಂಚುರಿಸ್ಟಾರ್

ಶಿವಣ್ಣ ಅವರ ಸಮಕಾಲಿನ ನಟ ರಮೇಶ್ ಅರವಿಂದ್ ಅವರ ಫೋಟೋ ಕೂಡ ಫೇಸ್ ಆಪ್ ನಲ್ಲಿ ವಯಸ್ಸಾಗಿರುವ ಫೋಟೋ ಕೊಡುತ್ತಿಲ್ಲ ಎಂದು ಅಭಿಮಾನಿಗಳು ಟ್ರೋಲ್ ಮಾಡ್ತಿದ್ದಾರೆ. 54 ವರ್ಷದ ರಮೇಶ್ ಅರವಿಂದ್ ಈಗಲೂ ಯುವಕರಂತೆ ಅದೇ ಕಾಂತಿ ಉಳಿಸಿಕೊಂಡಿದ್ದಾರೆ ಎಂಬ ಅಭಿಪ್ರಾಯ ಜನರದ್ದು.

ಇದು ಅಭಿಮಾನಿಗಳ ನಿರೀಕ್ಷೆ ಅಷ್ಟೇ

ಇದು ಅಭಿಮಾನಿಗಳ ನಿರೀಕ್ಷೆ ಅಷ್ಟೇ

ಅಂದ್ಹಾಗೆ, ಫೇಸ್ ಆಪ್ ನಲ್ಲಿ ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಸುಮನ್ ರಂಗನಾಥ್ ಅವರಿಗೆ ವಯಸ್ಸಾಗಿರುವಂತೆ ಫಲಿತಾಂಶ ಬರಲ್ವಾ ಎಂದು ಕೇಳಬೇಡಿ, ಬರುತ್ತೆ. ಬಟ್, ಈ ಮೂವರ ವಯಸ್ಸಿನ ಬಗ್ಗೆ ಹೀಗೂ ಆಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಇನ್ನುಳಿದಂತೆ ದರ್ಶನ್, ಸುದೀಪ್, ಯಶ್, ಪುನೀತ್, ರಚಿತಾ ರಾಮ್, ಶಾನ್ವಿ, ಪ್ರಿಯಾಮಣಿ ಫೋಟೋಗಳು ವೈರಲ್ ಆಗಿದೆ.

More from Filmibeat

English summary
Face app is trending in social media. almost kannada stars faces are reflecting as a old men look. but, shivanna and ramesh aravind faces are not change.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X