Don't Miss!
- Sports
IND vs NZ 2nd T20: ಕಿವೀಸ್ ವಿರುದ್ಧ ಹೋರಾಡಿ ಗೆದ್ದ ಭಾರತ; ಸರಣಿ ಸಮಬಲ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕರ್ನಾಟಕದಲ್ಲಿ 'ಕಾಂತಾರ' ರಾಕಿ ಭಾಯ್ಯ 'ಕೆಜಿಎಫ್ 2' ಸಿನಿಮಾವನ್ನು ಹಿಂದಿಕ್ಕಿದ್ದು ಹೇಗೆ?
ಕನ್ನಡ ಚಿತ್ರರಂಗದ ಎರಡು ಮೆಗಾ ಬ್ಲಾಕ್ ಬಸ್ಟರ್ ಸಿನಿಮಾ 'ಕಾಂತಾರ' ಹಾಗೂ 'ಕೆಜಿಎಫ್ 2'. ಎರಡೂ ಪ್ಯಾನ್ ಇಂಡಿಯಾ ಸಿನಿಮಾಗಳು ವಿಶ್ವದಾದ್ಯಂತ ಮೆಚ್ಚುಗೆ ಗಳಿಸಿದೆ. ವಿಶೇಷ ಅಂದರೆ, ಈ ಎರಡೂ ಸಿನಿಮಾಗಳನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದೆ.
ಕರ್ನಾಟಕದ ಬಾಕ್ಸಾಫೀಸ್ನಲ್ಲಿ 'ಕೆಜಿಎಫ್ 2' ಮಾಡಿದ ದಾಖಲೆಯನ್ನು ಸದ್ಯಕ್ಕೆ ಯಾರಿಂದಲೂ ಹಿಂದಿಕ್ಕಲು ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ರಿಷಬ್ ಶೆಟ್ಟಿಯ 'ಕಾಂತಾರ' ಒಂದು ವರ್ಷದೊಳಗೆ ಕರ್ನಾಟಕದಲ್ಲಿ ಆ ದಾಖಲೆಯನ್ನು ಮುರಿದು ಹಾಕಿತ್ತು.
ಹಣ
ಮಾಡಿದ
ಮೇಲೆ
ದೈವಾರಾಧನೆ
ಮರೆತ
'ಕಾಂತಾರ'
ತಂಡ:
ದೈವಾರಾಧಕರ
ಆಕ್ರೋಶ
16 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಿನಿಮಾ 200 ಕೋಟಿ ರೂ. ಬಜೆಟ್ನ ಸಿನಿಮಾವನ್ನು ಹಿಂದಿಕ್ಕಿದ್ದು ಹೇಗೆ? ಅದ್ಹೇಗೆ ಅಷ್ಟು ದೊಡ್ಡ ಗಳಿಕೆ ಕಂಡ ಸಿನಿಮಾವನ್ನು 'ಕಾಂತಾರ' ಸೈಡ್ ಹೊಡೆದು ಮುಂದೆ ಬಂದಿದ್ದೇಗೆ? ಅನ್ನೋದಕ್ಕೆ ಹೊಸ ಲೆಕ್ಕಾಚಾರ ಶುರುವಾಗಿದೆ.

₹16 ಕೋಟಿ 'ಕಾಂತಾರ' ₹400 ಕೋಟಿ ಕಲೆಕ್ಷನ್
ಸೆಪ್ಟೆಂಬರ್ 30ರಂದು ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಕಾಂಬಿನೇಷನ್ ಸಿನಿಮಾ 'ಕಾಂತಾರ' ರಿಲೀಸ್ ಆಗಿತ್ತು. ಮೊದಲ ವಾರ ದಸರಾ ಹಬ್ಬಕ್ಕೆ ಸಿಕ್ಕ ರಜೆಗಳು ಈ ಸಿನಿಮಾಗೆ ಲಾಭ ಮಾಡಿಕೊಟ್ಟಿತ್ತು. ಆದರೆ, ₹16 ಕೋಟಿ ಬಜೆಟ್ ಸಿನಿಮಾ ₹400 ಕೋಟಿ ಕಲೆಕ್ಷನ್ ಮಾಡುತ್ತೆ ಎಂದು ಯಾರೂ ಎಣಿಸಿರಲಿಲ್ಲ. ಈ ವೇಳೆ ಸಿಕ್ಕ ಮೌತ್ ಪಬ್ಲಿಸಿಟಿ 'ಕಾಂತಾರ' ಸಿನಿಮಾಗೆ ದೇಶಾದ್ಯಂತ ಸದ್ದು ಮಾಡುವಂತೆ ಮಾಡಿತ್ತು. 'ಕೆಜಿಎಫ್ 2' ವಿಶ್ವದಾದ್ಯಂತ ₹1250 ಕೋಟಿ ಕಲೆಕ್ಷನ್ ಮಾಡಿತ್ತು. ಅದೇ 'ಕಾಂತಾರ' ಕಲೆಕ್ಷನ್ ಬರೀ ₹400 ಕೋಟಿ. ಹೀಗಿದ್ದರೂ, ಕರ್ನಾಟಕದಲ್ಲಿ 'ಕಾಂತಾರ' ಸಿನಿಮಾ 'ಕೆಜಿಎಫ್ 2'ವನ್ನು ಹಿಂದಿಕ್ಕಿದ್ದೇಗೆ? ಅನ್ನೋದನ್ನು ಟ್ರೇಡ್ ಎಕ್ಸ್ಪರ್ಟ್ ವಿವರಿಸಿದ್ದಾರೆ.

'ಕೆಜಿಎಫ್ 2'- 'ಕಾಂತಾರ' ಕಲೆಕ್ಷನ್ ಎಷ್ಟು?
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರೋ 'ಕಾಂತಾರ' ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಲಿಸ್ಟ್ ಸೇರಿದೆ. ಇದೂವರೆಗೂ 'ಕಾಂತಾರ' ಕರ್ನಾಟಕದಲ್ಲಿ ಸುಮಾರು ₹172 ಕೋಟಿ ಕಲೆಕ್ಷನ್ ಮಾಡಿದೆ. ಅದೇ ರಾಕಿ ಭಾಯ್ ಯಶ್ ಸಿನಿಮಾ 'ಕೆಜಿಎಫ್ 2' ₹161.50 ಕೋಟಿ ಗಳಿಕೆ ಕಂಡಿದೆ. ಹೆಚ್ಚು ಕಡಿಮೆ ಎರಡೂ ಸಿನಿಮಾಗಳಿಗೂ ಸುಮಾರು 10 ಕೋಟಿಯಷ್ಟು ಅಂತರವಿದೆ. ಇಷ್ಟು ದೊಡ್ಡ ಅಂತರ ಕರ್ನಾಟಕದಲ್ಲಿ ಬಂದಿದ್ದೇಗೆ? ಅನ್ನೋ ಲೆಕ್ಕ ಇಲ್ಲಿದೆ.

'ಕೆಜಿಎಫ್ 2'ಗಿಂತ 'ಕಾಂತಾರ' ಟಿಕೆಟ್ಗಳ ಮಾರಾಟ ಹೆಚ್ಚು
ಹೌದು, ರಾಕಿ ಭಾಯ್ಯ 'ಕೆಜಿಎಫ್ 2' ಸಿನಿಮಾಗಿಂತ 'ಕಾಂತಾರ' ಸಿನಿಮಾ ಟಿಕೆಟ್ಗಳು ಹೆಚ್ಚು ಸೇಲ್ ಆಗಿವೆ. ರಿಷಬ್ ಶೆಟ್ಟಿಯ ಸಿನಿಮಾ 'ಕಾಂತಾರ' ಸುಮಾರು 1 ಕೋಟಿಗೂ ಅಧಿಕ ಟಿಕೆಟ್ಗಳು ಮಾರಾಟ ಆಗಿದ್ದವು. ಅದೇ 'ಕೆಜಿಎಫ್ 2' 72 ಲಕ್ಷ ಟಿಕೆಟ್ ಸೇಲ್ ಆಗಿತ್ತು. ಈ ವಿಷಯವನ್ನು ಹೊಂಬಾಳೆ ಸಂಸ್ಥೆಯೇ ಅಧಿಕೃತವಾಗಿ ಹೇಳಿತ್ತು. 'ಕೆಜಿಎಫ್ 2' ಹಾಗೂ 'ಕಾಂತಾರ' ನಡುವೆ ಸುಮಾರು 23 ಲಕ್ಷ ಟಿಕೆಟ್ಗಳ ಅಂತರವಿತ್ತು. ಇದೇ ಪ್ರಮುಖ ಕಾರಣ ಎಂದು ಹೇಳುತ್ತಿದ್ದಾರೆ.

ದೈವ, ಸಂಘರ್ಷ, ಸೆಂಟಿಮೆಂಟ್ ಹೈಲೈಟ್
'ಕೆಜಿಎಫ್ 2' ಸಿನಿಮಾ ಅದ್ಧೂರಿ ಸ್ಟಾರ್ ಕಾಸ್ಟ್, ಸೂಪರ್ಸ್ಟಾರ್ಗಳ ಮಹಾ ಸಂಗಮ ಆಗಿತ್ತು. ದೃಶ್ಯಗಳು, ಹಾಡು, ಆಕ್ಟಿಂಗ್, ಡೈಲಾಗ್ ಎಲ್ಲವೂ ಅದ್ಭುತವಾಗಿಯೇ ಇತ್ತು. ಆದರೆ, 'ಕಾಂತಾರ' ಕರಾವಳಿ ಭಾಗದ ದೈವದ ಕಥೆಯನ್ನು ತೆರೆಮೇಲೆ ತಂದಿದ್ದರು. ಇದು ಕರ್ನಾಟಕದ ಹಲವು ಭಾಗಗಳಿಗೆ ಹೊಸತೆನಿಸಿತ್ತು. ಅಲ್ಲದೆ ದೈವ, ಭೂತರಾಧನೆ ಬಗ್ಗೆ ಕೇಳಿದ್ದ ಜನರಿಗೆ ಸಿನಿಮಾ ನೋಡುವ ಅವಕಾಶ ಸಿಕ್ಕಿತ್ತು. ಹೀಗಾಗಿ ಕುಟುಂಬ ಸಮೇತ ಸಿನಿಮಾ ನೋಡಿದ್ದರು. ಇದು 'ಕಾಂತಾರ' ಸಿನಿಮಾ ದೊಡ್ಡ ಲಾಭ ತಂದು ಕೊಟ್ಟಿತ್ತು.