For Quick Alerts
  ALLOW NOTIFICATIONS  
  For Daily Alerts

  ರಕ್ಷಿತ್ ಹೆಸರನ್ನು ಮೊಬೈಲ್‌ನಲ್ಲಿ ಏನೆಂದು ಸೇವ್‌ ಮಾಡಿಕೊಂಡಿದ್ದಾರೆ ರಿಷಬ್ ಶೆಟ್ಟಿ?

  |

  ಚಿತ್ರಮಂದಿರದ ಒಳಗೆ, ಹೊರಗೆ ರಿಷಬ್ ಶೆಟ್ಟಿಯದ್ದೇ ಹವಾ. 'ಕಾಂತಾರ' ಸಿನಿಮಾ ಮೂಲಕ ಹೊಸ ಅಬ್ಬರ ಎಬ್ಬಿಸಿದ್ದಾರೆ ರಿಷಬ್ ಶೆಟ್ಟಿ.

  ಕನ್ನಡ ಚಿತ್ರರಂಗದಲ್ಲಿ ಶೆಟ್ರ ಗ್ಯಾಂಗ್ ಅಬ್ಬರ ಜೋರಾಗಿಯೇ ಇದೆ. ಒಗ್ಗಟ್ಟಿನಿಂದ ಇರುವ ಜೊತೆಗೆ ಪರಸ್ಪರರಿಗೆ ಹೆಗಲಾಗುತ್ತಾ, ಒಬ್ಬರ ಯಶಸ್ಸನ್ನು ಮತ್ತೊಬ್ಬರು ಸಂಭ್ರಮಿಸುತ್ತಾ ಒಟ್ಟಾರೆ ಕನ್ನಡ ಚಿತ್ರರಂಗಕ್ಕೆ ಕೆಲವು ಒಳ್ಳೆಯ ಸಿನಿಮಾಗಳನ್ನು ಒಂದರಮೇಲೊಂದು ನೀಡುತ್ತಿದೆ ಈ ಶೆಟ್ರ ಬಳಗ.

  ಈಗ ಪ್ರಚಲಿತದಲ್ಲಿರುವ ಶೆಟ್ರ ಗ್ಯಾಂಗ್‌ನಲ್ಲಿ ಕನ್ನಡ ಚಿತ್ರರಂಗಕ್ಕೆ ತುಸು ಹಳೆಯ ತಲೆ ಎಂದರೆ ಅದು ರಿಷಬ್ ಶೆಟ್ರದ್ದೆ. ಹಲವು ಉದ್ಯೋಗಗಳನ್ನು ಮಾಡಿ ಸಿನಿಮಾ ನಟನಾಗುವ ಆಸೆಯಿಂದ ಚಿತ್ರರಂಗಕ್ಕೆ ಬಂದ ರಿಷಬ್‌ಗೆ ಆ ನಂತರ ರಕ್ಷಿತ್ ಶೆಟ್ಟಿ ಜೊತೆಯಾದರು. ಇಬ್ಬರು ಒಟ್ಟಿಗೆ ಹಲವು ವರ್ಷ ಶ್ರಮಿಸಿದ ಬಳಿಕ ಈಗ ಪ್ರತಿಭೆಗೆ ತಕ್ಕ ಸ್ಥಾನ ಸಂಪಾದಿಸಿಕೊಂಡಿದ್ದಾರೆ. ಜೊತೆಗೆ ಇನ್ನಷ್ಟು ಪ್ರತಿಭಾವಂತರಿಗೆ ಅವಕಾಶವನ್ನೂ ನೀಡುತ್ತಿದ್ದಾರೆ.

  ಇದೀಗ ಕನ್ನಡ ಚಿತ್ರರಂಗದಲ್ಲಿ RRR ಹವಾ ಜೋರಾಗಿದೆ. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ. ಇವರ ಜೊತೆಗೆ ಪ್ರಮೋದ್ ಶೆಟ್ಟಿಯೂ ಇದ್ದಾರೆ. ನಾಲ್ವರು ಒಳ್ಳೆಯ ಗೆಳೆಯರೇ. ರಿಷಬ್ ಶೆಟ್ಟಿ, ತಮ್ಮ ಗೆಳೆಯರ ಹೆಸರನ್ನು ತಾವು ಯಾವ ಹೆಸರಿನಿಂದ ಮೊಬೈಲ್‌ನಲ್ಲಿ ಸೇವ್ ಮಾಡಿಕೊಂಡಿರುವುದಾಗಿ ಸಂದರ್ಶನವೊಂದರಲ್ಲಿ ಹೇಳಿದ್ದರು. ಗೆಳೆಯರ ಹಾಗೂ ಸ್ವತಃ ರಿಷಬ್ ಪತ್ನಿ ಪ್ರಗತಿಯ ಹೆಸರನ್ನು ಏನೆಂದು ಸೇವ್ ಮಾಡಿಕೊಂಡಿದ್ದಾರೆ ಎಂದ ಸಹ ಹೇಳಿದ್ದಾರೆ.

  ರಿಷಬ್ ಶೆಟ್ಟಿಯವರು ಸಾಮಾನ್ಯವಾಗಿ ತಮ್ಮ ಗೆಳೆಯರ, ಆಪ್ತರ ಹೆಸರುಗಳನ್ನು ಅವರ ನಿಕ್‌ನೇಮ್‌ನಿಂದ ಸೇವ್‌ ಮಾಡಿಟ್ಟುಕೊಂಡಿರುತ್ತಾರಂತೆ. ಗೆಳೆಯ ರಕ್ಷಿತ್ ಶೆಟ್ಟಿಯ ಹೆಸರನ್ನು ಚಿಂಟು ಎಂದು ಸೇವ್ ಮಾಡಿಕೊಂಡಿದ್ದಾರಂತೆ. ಆತ್ಮೀಯ ಗೆಳೆಯ ಪ್ರಮೋದ್ ಶೆಟ್ಟಿಯವರ ಹೆಸರನ್ನು ಪಮ್ ಎಂದು ಸೇವ್ ಮಾಡಿಕೊಂಡಿದ್ದಾರಂತೆ ರಿಷಬ್ ಶೆಟ್ಟಿ. ಪತ್ನಿ ಪ್ರಗತಿಯ ಹೆಸರನ್ನು ಬಾಬು ಎಂದು ಸೇವ್ ಮಾಡಿಕೊಂಡಿದ್ದಾರೆ.

  English summary
  How Rishab Shetty saved Rakshit Shetty's mobile number on his phone. He usually saves peoples nick name on his phone.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X