For Quick Alerts
  ALLOW NOTIFICATIONS  
  For Daily Alerts

  ರಾಕಿಂಗ್ ಸ್ಟಾರ್ ಯಶ್ ಮಗನ ಮೊದಲ ವರ್ಷದ ಹುಟ್ಟುಹಬ್ಬದ ಪ್ಲಾನ್ ಏನು?

  |

  ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಎರಡನೇ ಮಗನ ಮೊದಲ ವರ್ಷದ ಹುಟ್ಟುಹಬ್ಬದ ತಯಾರಿಯಲ್ಲಿದ್ದಾರೆ. ಹೌದು, ಯಶ್ ಎರಡನೇ ಮಗು ಯಥರ್ವ್ ಹುಟ್ಟಿ ಒಂದು ವರ್ಷವಾಗುತ್ತಿದೆ. ಮಗನ ಹುಟ್ಟುಹಬ್ಬಕ್ಕೆ ಒಂದೇ ದಿನ ಬಾಕಿ ಇದೆ. ಈಗಾಗಲೇ ರಾಕಿಂಗ್ ದಂಪತಿ ಮೊದಲ ವರ್ಷದ ಹುಟ್ಟುಹಬ್ಬದ ಪ್ಲಾನ್ ಮಾಡಿದೆ.

  ಹೌದು, ಯಥರ್ವ್ ಯಶ್ ಅಕ್ಟೋಬರ್ 30 2019ರಲ್ಲಿ ಜನಿಸಿದ್ದಾರೆ. ಅಂದರೆ ನಾಳೆಯೇ ತಥರ್ವ್ ಹುಟ್ಟುಹಬ್ಬ. ಅಂದ್ಹಾಗೆ ಈ ಬಾರಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಲು ಸಾಧ್ಯವಿಲ್ಲ. ಕೊರೊನಾ ಕಾರಣ ಜಾಸ್ತಿ ಜನರನ್ನು ಸೇರಿಸುವ ಹಾಗಿಲ್ಲ. ನಿರ್ಬಂಧಗಳ ಮಿತಿಯಲ್ಲೇ ಯಶ್ ಮತ್ತು ರಾಧಿಕಾ ಮಗನ ಹುಟ್ಟುಹಬ್ಬ ಆಚರಿಸಬೇಕಿದೆ. ಮೂಲಗಳ ಪ್ರಕಾರ, ಯಥರ್ವ್ ಹುಟ್ಟುಹಬ್ಬಕ್ಕೆ ಯಶ್ ಮತ್ತು ರಾಧಿಕಾ ಪಂಡಿತ್ ಕಳೆದ ಕೆಲವು ದಿನಗಳಿಂದ ತಯಾರಿ ಮಾಡುತ್ತಿದ್ದಾರಂತೆ. ಮುಂದೆ ಓದಿ..

  ವಿಡಿಯೋ: ಅಪ್ಪನಿಗೆ ಹೀಗಾ ಮಾಡೋದು ಯಶ್ ಪುತ್ರಿ ಐರಾವಿಡಿಯೋ: ಅಪ್ಪನಿಗೆ ಹೀಗಾ ಮಾಡೋದು ಯಶ್ ಪುತ್ರಿ ಐರಾ

  ಆಪ್ತರಿಗೆ ಮಾತ್ರ ಆಹ್ವಾನ

  ಆಪ್ತರಿಗೆ ಮಾತ್ರ ಆಹ್ವಾನ

  ಸಾಮಾಜಿಕ ಅಂತರ, ಹೆಚ್ಚು ಜನರನ್ನು ಸೇರದಂತೆ ಎಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ಮಗನ ಹುಟ್ಟುಹಬ್ಬದ ತಯಾರಿ ಮಾಡಿದ್ದಾರಂತೆ. ಕೇವಲ ಹತ್ತಿರದವರಿಗೆ ಮಾತ್ರ ಮಗನ ಹುಟ್ಟುಹಬ್ಬಕ್ಕೆ ಆಹ್ವಾನ ಮಾಡಿದ್ದಾರಂತೆ. ಚಿತ್ರರಂಗದವರು, ಸ್ನೇಹಿತರು ಮತ್ತು ಕುಟುಂಬದವರು ಸೇರಿದಂತೆ ತೀರಾ ಆಪ್ತರು ಮಾತ್ರ ಭಾಗಿಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  ಮನೆಯಲ್ಲೇ ಹುಟ್ಟುಹಬ್ಬ ಆಚರಣೆ

  ಮನೆಯಲ್ಲೇ ಹುಟ್ಟುಹಬ್ಬ ಆಚರಣೆ

  ಮನೆಯಲ್ಲೇ ಹುಟ್ಟುಹಬ್ಬ ಆಚರಿಸಲು ಯೋಚಿಸಿದ್ದಾರಂತೆ. ಬಟ್ಟೆ, ಗಿಫ್ಟ್, ಊಟದ ವ್ಯವಸ್ಥೆ ಪ್ರತಿಯೊಂದನ್ನು ಖುದ್ದು ಯಶ್ ಅವರೇ ಮುಂದೆ ನಿಂತು ಸಿದ್ಧತೆ ಮಾಡಿಕೊಂಡಿದ್ದಾರೆ.

  ಮಗಳ ಹುಟ್ಟುಹಬ್ಬ ಆದ್ದೂರಿಯಾಗಿ ಆಚರಿಸಿದ್ದರು

  ಮಗಳ ಹುಟ್ಟುಹಬ್ಬ ಆದ್ದೂರಿಯಾಗಿ ಆಚರಿಸಿದ್ದರು

  ಅಂದ್ಹಾಗೆ ಕಳೆದ ವರ್ಷ ಮಗಳು ಐರಾ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದರು. ಇಡೀ ಚಿತ್ರರಂಗವನ್ನು ಕರೆದು ಸಂಭ್ರಮಿಸಿದ್ದರು. ಆದರೆ ಮಗನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಲು ಕೊರೊನಾ ವೈರಸ್ ಅಡ್ಡಿ ಪಡಿಸುತ್ತಿದೆ.

  ವಿಡಿಯೋ ವೈರಲ್: ಐರಾ ಭಜನೆ ಮಾಡುತ್ತಿರುವ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್ವಿಡಿಯೋ ವೈರಲ್: ಐರಾ ಭಜನೆ ಮಾಡುತ್ತಿರುವ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್

  K Kalyan ಜೀವನದಲ್ಲಿ ಕಲಹ ಎಬ್ಬಿಸಿದ್ದ Ganga Kulkarni ಆತ್ಮಹತ್ಯೆ | Filmibeat Kannada
  ಇತ್ತೀಚಿಗಷ್ಟೆ ನಾಮಕರಣ ಮಾಡಿದ್ದರು

  ಇತ್ತೀಚಿಗಷ್ಟೆ ನಾಮಕರಣ ಮಾಡಿದ್ದರು

  ಇತ್ತೀಚಿಗಷ್ಟೆ ಯಶ್ ಮತ್ತು ರಾಧಿಕಾ ಮಗನ ನಾಮಕರಣವನ್ನು ಸರಳವಾಗಿ ಶಾಸ್ತ್ರೋಕ್ತವಾಗಿ ಮಾಡಿದ್ದರು. ತೀರ ಆಪ್ತರನ್ನು ಮಾತ್ರ ಆಹ್ವಾನಿಸಿದ್ದರು. ನಾಮಕರಣದ ಫೋಟೋಗಳು ಮತ್ತು ವಿಡಿಯೋವನ್ನು ರಾಕಿಂಗ್ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಯಥರ್ವ್ ಯಶ್ ನಾಮಕರಣದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

  English summary
  Rocking Star Yash And Radhika Pandit planing his son Yatharv’s 1st birthday party.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X