How To Cancel Ticket in BookMyShow: ಬುಕ್‌ ಮೈ ಶೋನಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡುವುದು ಹೇಗೆ?

ಒಂದ್ಕಾಲದಲ್ಲಿ ಜನ ಸಿನಿಮಾ ಟಿಕೆಟ್‌ಗಾಗಿ ಥಿಯೇಟರ್‌ಗಳ ಮುಂದೆ ಕ್ಯೂ ನಿಲ್ಲುತ್ತಿದ್ದರು. ಸ್ಟಾರ್‌ಗಳ ಸಿನಿಮಾ ರಿಲೀಸ್ ವೇಳೆ ಟಿಕೆಟ್‌ಗಾಗಿ ನೂಕು ನುಗ್ಗಲು, ತಳ್ಳಾಟ ನಡೆಯುತ್ತಿತ್ತು. ಆದರೆ ಈಗ ಬಹುತೇಕರು ಬುಕ್‌ ಮೈ ಶೋನಲ್ಲಿ ಟಿಕೆಟ್ ಬುಕ್ ಮಾಡಿಕೊಳ್ಳುತ್ತಿದ್ದಾರೆ. ತಮಗೆ ಬೇಕಾದ ಶೋಗೆ ಬೇಕಾದ ಸೀಟ್ ಕಾಯ್ದಿರಿಸುತ್ತಾರೆ.

ಆನ್‌ಲೈನ್‌ ಟಿಕೆಟ್ ಬುಕ್ಕಿಂಗ್ ನಿಜಕ್ಕೂ ಸಿನಿರಸಿಕರಿಗೆ ವರದಾನವಾಗಿದೆ. ಆದರೆ ಕೆಲವೊಮ್ಮೆ ಹೀಗೆ ಸಿನಿಮಾ ನೋಡಲು ಟಿಕೆಟ್ ಬುಕ್ ಮಾಡಿಕೊಂಡರೂ ಹೋಗೋಕೆ ಆಗಲ್ಲ. ಅನಿವಾರ್ಯ ಕಾರಣಗಳಿಂದ ಸಿನಿಮಾ ನೋಡಲು ಸಾಧ್ಯವಾಗದೇ ಇದ್ದಾಗ ಬುಕ್‌ ಮಾಡಿಕೊಂಡ ಟಿಕೆಟ್ ಕತೆ ಏನು? ಕೆಲವರು ಸ್ನೇಹಿತರು, ಸಂಬಂಧಿಕರಿಗೆ ಕೊಟ್ಟುಬಿಡುತ್ತಾರೆ. ಆದರೆ ಕೆಲವೊಮ್ಮೆ ಸಿನಿಮಾ ನೋಡದೇ ಹಣ ವ್ಯರ್ಥ ಮಾಡುತ್ತಾರೆ.

How To Cancel Tickets On Bookmyshow and Get Full Refund in kannada

ಬುಕ್‌ಮೈ ಶೋ ಟಿಕೆಟ್ ಬುಕ್ಕಿಂಗ್ ಬಗ್ಗೆ ಸಂಪೂರ್ಣ ಅರಿವು ಇರುವವರು ಮಾತ್ರ ಟಿಕೆಟ್ ಕ್ಯಾನ್ಸಲ್ ಮಾಡಿ ಹಣ ವಾಪಸ್ ಪಡೆಯುತ್ತಾರೆ. ಆದರೆ ಬಹುತೇಕರು ಈ ಸಾಹಸಕ್ಕೆ ಕೈ ಹಾಕುವುದೇ ಇಲ್ಲ. ಅಷ್ಟಕ್ಕೂ ಬುಕ್‌ ಮೈ ಶೋನಲ್ಲಿ ಒಮ್ಮೆ ಬುಕ್ ಮಾಡಿ ಟಿಕೆಟ್‌ ಕ್ಯಾನ್ಸಲ್ ಮಾಡೋದು ಹೇಗೆ? ಹಣ ಮರಳಿ ಪಡೆಯೋದು ಹೇಗೆ? ಆ ವಿಧಾನವನ್ನು ಹಂತಹಂತವಾಗಿ ವಿವರಿಸಿದ್ದೇವೆ ಓದಿ.

ಟಿಕೆಟ್ ಕ್ಯಾನ್ಸಲ್ ಮಾಡಲು ಪಾಲಿಸಬೇಕಾದ ನಿಯಮಗಳು

ಟಿಕೆಟ್ ಕ್ಯಾನ್ಸಲ್ ಮಾಡುವ ವಿಧಾನ ತಿಳಿಯುವ ಮುನ್ನ ಅದಕ್ಕಿರುವ ಷರತ್ತುಗಳನ್ನು ಒಮ್ಮೆ ನೋಡೊಣ. ಕೆಲ ನಿಮಯಗಳನ್ನು ಅನುಸರಿಸಿದರೆ ಮಾತ್ರ ಯಾವುದೇ ಸಮಸ್ಯೆ ಇಲ್ಲದೇ ಟಿಕೆಟ್ ಕ್ಯಾನ್ಸರ್ ಮಾಡಿ ಸಂಪೂರ್ಣವಾಗಿ ನಿಮ್ಮ ಹಣ ವಾಪಸ್ ಪಡೆಯಬಹುದು.

1. ನೀವು ಬುಕ್‌ಮೈ ಶೋನಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡಬೇಕು ಅಂದ್ರೆ ಸಿನಿಮಾ ಪ್ರದರ್ಶನಕ್ಕೆ 4 ಗಂಟೆ ಮುಂಚೆ ಮಾಡಬೇಕು. ಆಗ ಮಾತ್ರ ನಿಮ್ಮ ಹಣ ವಾಪಸ್ ಸಿಗುತ್ತದೆ.

2. ತಡವಾದರೆ ಪ್ರಯೋಜನವಿಲ್ಲ. ಸರಿಯಾದ ಸಮಯದಲ್ಲಿ ಕ್ಯಾನ್ಸಲ್ ಮಾಡಿದರೆ 70% ಹಣ ಮರಳಿ ಪಡೆಯಬಹುದು.

3. ನೀವು ನಿಮ್ಮ ಹಣ ರೀಫಂಡ್‌ಗೆ ಕ್ರೆಡಿಟ್ ಕಾರ್ಟ್, ಡೆಬಿಟ್ ಕಾರ್ಡ್ ಅಥವಾ ನೆಟ್‌ ಬ್ಯಾಂಕಿಂಗ್ ಆಯ್ಕೆ ಮಾಡಿಕೊಂಡರೆ ನಿಮ್ಮ ಖಾತೆಗೆ ಹಣ ಬರಲು 7ರಿಂದ 10 ದಿನ ಸಮಯ ಬೇಕಾಗುತ್ತದೆ.

Bookmyshow ವೆಬ್‌ಸೈಟ್‌ನಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡುವ ವಿಧಾನ

ಒಂದು ವೇಳೆ ನೀವು ಬುಕ್‌ಮೈ ಶೋ ಅಧಿಕೃತ ವೆಬ್‌ಸೈಟ್‌ ಮೂಲಕ ಟಿಕೆಟ್ ಬುಕ್ ಮಾಡಿದ್ದೀರಾ? ಆದರೆ ನೀವು ಆ ದಿನ ಆ ಶೋಗೆ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಲು ಸಾಧ್ಯವಾಗುತ್ತಿಲ್ಲವೇ? ಹಾಗದರೆ ಕ್ಯಾನ್ಸಲ್ ಮಾಡುವುದು ಹೇಗೆ? ಇಲ್ಲಿದೆ ವಿವರ.

1. Bookmyshow ವೆಬ್‌ಸೈಟ್ ಓಪನ್ ಮಾಡಿ.

2. ನಿಮ್ಮ ಈಮೇಲ್ ಐಡಿ ಮೂಲಕ ನಿಮ್ಮ ಅಕೌಂಟ್‌ಗೆ ಲಾಗಿನ್ ಆಗಿ.

3. ಬಲ ಭಾಗದಲ್ಲಿ ಇರುವ ಪ್ರೋಫೈಲ್ ಮೇಲೆ ಕ್ಲಿಕ್ ಮಾಡಿ.

4. ಟಿಕೆಟ್ ಬುಕ್ ಮಾಡಿದ ಹಿಸ್ಟರಿ(Purchase History) ಆಯ್ಕೆ ಮಾಡಿ.

5. ಟಿಕೆಟ್‌ನ ಕ್ಲಿಕ್ ಮಾಡಿ.

6. ಕೆಳಕ್ಕೆ ಸ್ಕ್ರೋಲ್ ಮಾಡುತ್ತಾ ಹೋಗಿ, ಕ್ಯಾನ್ಸಲ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

7. ಹಣ ಮರುಪಾವತಿ ಆಯ್ಕೆ ಮಾಡಿಕೊಳ್ಳಿ.

8. ಬಳಿಕ ಕನ್ಫರ್ಮ್‌(confirm) ಕ್ಲಿಕ್ ಮಾಡಿ

ವಿಶೇಷ ಸೂಚನೆ: ಕೆಲವೊಮ್ಮೆ ಈ ವೆಬ್‌ಸೈಟ್ ಓಪನ್ ಆಗುವುದಿಲ್ಲ.

Bookmyshow ಆಪ್‌ನಲ್ಲಿ ಟಿಕೆಟ್ ಕ್ಯಾನ್ಸಲ್ ಹೇಗೆ?

1. ಮೊದಲಿಗೆ ನಿಮ್ಮ ಫೋನ್‌ನಲ್ಲಿ Bookmyshow ಓಪನ್ ಮಾಡಿ.

2. ಕೆಲವೊಮ್ಮೆ ಆಪ್‌ನಿಂದ ಲಾಗ್‌ಔಟ್ ಆಗಿದ್ದರೆ ಲಾಗಿನ್ ಆಗಿ.

3. ಬಳಿಕ ಪ್ರೋಫೈಲ್ ಐಕಾನ್ ಮೇಲೆ ಕ್ಲಿಕ್ ಮಾಡಿ.

4. Your orders ಆಪ್ಷನ್ ಮೇಲೆ ಕ್ಲಿಕ್ ಮಾಡಿ.

5. ಆಗ ಸ್ಕ್ರೀನ್‌ ಮೇಲೆ ನೀವು ಬುಕ್ ಮಾಡಿದ ಟಿಕೆಟ್ ಲಿಸ್ಟ್ ಬರುತ್ತದೆ.

6. ಅದರಲ್ಲಿ ನೀವು ಸಿನಿಮಾ ನೋಡಲು ಬುಕ್ ಮಾಡಿದ ಟಿಕೆಟ್ ಆಯ್ಕೆ ಮಾಡಿಕೊಳ್ಳಿ.

7. ಕ್ಯಾನ್ಸಲ್ ಬುಕ್ಕಿಂಗ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

8. ಸ್ಕ್ರೀನ್‌ನ ಸ್ಕ್ರೋಲ್ ಮಾಡಿ ಕೆಳಗೆ ಹೋಗಿ ರೀಫಂಡ್ ಪೇಮೆಂಡ್ ಮೆಥಡ್ ಆಯ್ಕೆ ಮಾಡಿಕೊಳ್ಳಿ.

9. ಬಳಿಕ ರೀಫಂಡ್ ಬಟನ್ ಒತ್ತಿ.

Bookmyshow ಸೂಪರ್ ಕಸ್ಟಮರ್ ಟಿಕೆಟ್ ಕ್ಯಾನ್ಸಲ್ ಮಾಡುವ ವಿಧಾನ?

ಆಪ್‌ನಲ್ಲಿ ಸೂಪರ್ ಕಸ್ಟಮರ್‌ಗಳಿಗೆ ವಿಶೇಷ ಆಯ್ಕೆಗಳಿರುತ್ತವೆ. ಕೆಲವೊಮ್ಮೆ ರಿಯಾಯಿತಿ ಜೊತೆಗೆ ಸಾಕಷ್ಟು ಪ್ರಯೋಜನಗಳಿವೆ. ಆದರೆ ಏನು ಮಾಡೋದು ಸೂಪರ್ ಕಸ್ಟಮರ್ ಆದರೂ ಕೆಲವೊಮ್ಮೆ ಸಿನಿಮಾ ನೋಡಲು ಸಾಧ್ಯವಾಗದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಂತ ಸಮಯದಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡೋದು ಹೇಗೆ ನೋಡೋಣ ಬನ್ನಿ.

1. ಮೊದಲಿಗೆ Bookmyshow ಆಪ್ ಓಪನ್ ಮಾಡಿ.

2. ಬಳಿಕ ಪ್ರೋಫೈಲ್‌ಗೆ ಹೋಗಿ.

3. ನಿಮ್ಮ ಆರ್ಡರ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.

4. ಟಿಕೆಟ್ ಆಯ್ಕೆ ಮಾಡಿಕೊಳ್ಳಿ.

5. ಸೂಪರ್ ಸ್ಟಾರ್ ಕ್ಯಾನ್ಸಲೇಷನ್ ಮೇಲೆ ಕ್ಲಿಕ್ ಮಾಡಿ.

6. ಹಣ ಮರುಪಾವತಿ(Original payment method) ಆಯ್ಕೆ ಮಾಡಿ.

7. ರೀಫಂಡ್ ಆಪ್ಷನ್ ಒತ್ತಿ.

8. ಟಿಕೆಟ್ ಕ್ಯಾನ್ಸಲ್‌ ಖಚಿತಪಡಿಸಿ.

ಈ ಮೇಲಿನ ವಿಧಾನಗಳನ್ನು ಆಧರಿಸಿ ಪ್ರೇಕ್ಷಕರು ಬುಕ್‌ ಮೈಶೋದಲ್ಲಿ ಬುಕ್ ಮಾಡಿದ ಸಿನಿಮಾ ಟಿಕೆಟ್ ಕ್ಯಾನ್ಸಲ್ ಮಾಡಬಹುದು.

More from Filmibeat

English summary
How to Cancel Bookmyshow Ticket in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X