twitter
    For Quick Alerts
    ALLOW NOTIFICATIONS  
    For Daily Alerts

    ಉದ್ಯಮಿ ಉಮಾಪತಿ ಸಿನಿ ಇಂಡಸ್ಟ್ರಿಗೆ ಬಂದಿದ್ದು ಹೇಗೆ, ಹಿನ್ನೆಲೆ ಏನು?

    |

    ''ಸಿನಿಮಾ ಮಾಡಿಯೇ ಜೀವನ ಮಾಡಬೇಕು ಎನ್ನುವ ಪರಿಸ್ಥಿತಿ ನನಗಿಲ್ಲ, ನನ್ನ ತಂದೆ ನಮಗೆ ಚೆನ್ನಾಗಿಯೇ ಆಸ್ತಿ ಮಾಡಿಟ್ಟಿದ್ದಾರೆ. ನನ್ನ ಬಿಸಿನೆಸ್, ನನ್ನ ಹಿನ್ನೆಲೆ ನೋಡಿದ್ರೆ ನಿಮಗೆ ಗೊತ್ತಾಗುತ್ತೆ. ಸಿನಿಮಾ ನನ್ನ ಜೀವನ ಅಲ್ಲ, ಅದೊಂದು ಭಾಗ ಅಷ್ಟೇ'' ಎಂದು ಸುದ್ದಿಗೋಷ್ಠಿಗಳಲ್ಲಿ ಗಟ್ಟಿ ಧ್ವನಿಯಿಂದ ಹೇಳಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಹಿನ್ನೆಲೆ ಏನು ಎಂದು ತಿಳಿದುಕೊಳ್ಳುವ ಕುತೂಹಲ ಸಹಜ.

    Recommended Video

    Umapathy Biography | ಉಮಾಪತಿ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ಹೇಗೆ | Movies, Family, Net Worth, Awards

    ಪ್ರಸ್ತುತ ಕನ್ನಡ ಇಂಡಸ್ಟ್ರಿಯಲ್ಲಿರುವ ಶ್ರೀಮಂತ ನಿರ್ಮಾಪಕರ ಪಟ್ಟಿಯಲ್ಲಿ ಉಮಾಪತಿ ಶ್ರೀನಿವಾಸ್ ಸಹ ಒಬ್ಬರು. ಅದು ರಾಬರ್ಟ್ ಸಿನಿಮಾ ವಿಚಾರದಲ್ಲಿ ಸಾಬೀತಾಗಿದೆ. ಕನ್ನಡ-ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ನೂರು ಕೋಟಿ ಗಳಿಸಿದೆ ಎಂಬ ವರದಿಗಳು ಕಣ್ಣ ಮುಂದೆ ಇವೆ. ಸುದೀಪ್, ದರ್ಶನ್ ಅಂತಹ ಸ್ಟಾರ್ ನಟರ ಜೊತೆ ಮೊದಲ ಸಿನಿಮಾಗಳನ್ನು ಮಾಡ್ತಾರೆ ಅಂದ್ರೆ ಉಮಾಪತಿಯ ಆರ್ಥಿಕ ಸ್ಥಿತಿಯ ಬಗ್ಗೆ ಅನುಮಾನ ಪಡುವ ಅಗತ್ಯವಿಲ್ಲ.

    ದರ್ಶನ್ ಜೊತೆ ರಾಜಿ ಆದರೆ ಕಾನೂನು ಹೋರಾಟ ನಿಲ್ಲಲ್ಲ: ಉಮಾಪತಿದರ್ಶನ್ ಜೊತೆ ರಾಜಿ ಆದರೆ ಕಾನೂನು ಹೋರಾಟ ನಿಲ್ಲಲ್ಲ: ಉಮಾಪತಿ

    ಆದ್ರೀಗ, ಅರುಣಾ ಕುಮಾರಿಯ ಪ್ರಕರಣದಲ್ಲಿ ಉಮಾಪತಿ ಹೆಸರು ಸಿಲುಕಿಕೊಂಡಿದೆ. 25 ಕೋಟಿ ಹಾಗು ದರ್ಶನ್ ಆಸ್ತಿ ಕಬಳಿಸುವ ಯತ್ನಕ್ಕೆ ಸಂಬಂಧಿಸಿದಂತೆ ಉಮಾಪತಿಯ ಪಾಲು ಇದೆ ಎಂಬ ಆರೋಪ ಬೆನ್ನುಬಿದ್ದಿದೆ. ಅರುಣಾ ಕುಮಾರಿ ಎಂಬ ಮಹಿಳೆ ಉಮಾಪತಿ ಮೇಲೆ ನೇರ ಆರೋಪ ಮಾಡ್ತಿದ್ದಾರೆ. ಇದು ಸುಳ್ಳು ಎಂದು ಉಮಾಪತಿ ಸಾಬೀತು ಪಡಿಸುವ ಹಾದಿಯಲ್ಲಿದ್ದಾರೆ.

    ಅಷ್ಟಕ್ಕೂ, ಉಮಾಪತಿ ಶ್ರೀನಿವಾಸ್ ಗೌಡ ಯಾರು? ಅವರ ಹಿನ್ನೆಲೆ ಏನು? ಸಿನಿಮಾ ಇಂಡಸ್ಟ್ರಿಗೆ ಹೇಗೆ ಬಂದರು? ಮುಂದೆ ಓದಿ...

    ದರ್ಶನ್ ಗೆಳೆಯರು ನನ್ನ ತೇಜೋವಧೆ ಮಾಡಲು ಹೂಡಿದ ಷಡ್ಯಂತ್ರ ಇದು: ಉಮಾಪತಿದರ್ಶನ್ ಗೆಳೆಯರು ನನ್ನ ತೇಜೋವಧೆ ಮಾಡಲು ಹೂಡಿದ ಷಡ್ಯಂತ್ರ ಇದು: ಉಮಾಪತಿ

    ಮೂಲತಃ ಉದ್ಯಮಿ ಕುಟುಂಬ

    ಮೂಲತಃ ಉದ್ಯಮಿ ಕುಟುಂಬ

    ಬೆಂಗಳೂರಿನ ಬೊಮ್ಮನಹಳ್ಳಿ ವಲಯದ ವಲಯದ ನಿವಾಸಿ ಉಮಾಪತಿ. ಈಗ ಉಮಾಪತಿ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸಿಸುತ್ತಿದ್ದಾರೆ. ಉಮಾಪತಿ ಕುಟುಂಬ ಮೊದಲಿನಿಂದಲೂ ಶ್ರೀಮಂತ ಕುಟುಂಬ. ಉಮಾಪತಿ ತಂದೆ ಶ್ರೀನಿವಾಸ್, ತಾತ ಎಲ್ಲರೂ ಪ್ರಭಾವಿ ವ್ಯಕ್ತಿಗಳಾಗಿದ್ದವರೇ. ಆಗಿನ ಸಮಯಕ್ಕೆ ಉಮಾಪತಿ ತಂದೆ ಉತ್ತಮ ಆಸ್ತಿ ಮಾಡಿದ್ದರು.

    ಎಕರೆಗಟ್ಟಲೇ ಜಾಗ ಇದೆ

    ಎಕರೆಗಟ್ಟಲೇ ಜಾಗ ಇದೆ

    ಉಮಾಪತಿ ಹೆಸರಿನಲ್ಲಿ ಎಕರೆಗಟ್ಟಲೇ ಜಮೀನಿದೆ. ಒಂದೊಂದು ಜಮೀನು 70-80 ಎಕರೆ ಇದೆ. ಎಚ್‌ಎಸ್‌ಆರ್ ಲೇಔಟ್‌ನಲ್ಲಿ 30/40 ಸೈಟ್‌ಗಳಿವೆ. ಒಂದೂವರೆ ಎಕರೆ ಪ್ರದೇಶದಲ್ಲಿ ಮನೆ ಕಟ್ಟಿಕೊಳ್ಳಲಾಗಿದೆ. ತೋಟ ಮಾಡ್ತಾರೆ. ಸ್ವಂತ ಜಮೀನಿನಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡುತ್ತಿದ್ದಾರೆ. ಬಿಲ್ಡಿಂಗ್‌ಗಳಿವೆ, ಅದರಿಂದ ಬಾಡಿಗೆ ಬರ್ತಿದೆ. ಇದೆಲ್ಲವನ್ನು ಸ್ವತಃ ಉಮಾಪತಿ ಅವರೇ ಪ್ರೆಸ್‌ಮೀಟ್‌ನಲ್ಲಿ ಹೇಳಿಕೊಂಡಿದ್ದಾರೆ.

    'ಹೆಬ್ಬುಲಿ'ಯಲ್ಲಿ ಜಂಟಿ ನಿರ್ಮಾಪಕ

    'ಹೆಬ್ಬುಲಿ'ಯಲ್ಲಿ ಜಂಟಿ ನಿರ್ಮಾಪಕ

    ಬಿಸಿನೆಸ್‌ನಲ್ಲಿ ತೊಡಗಿಕೊಂಡಿದ್ದ ಉಮಾಪತಿ ಶ್ರೀನಿವಾಸ್ ಕಿಚ್ಚ ಸುದೀಪ್ ನಟನೆಯ 'ಹೆಬ್ಬುಲಿ' ಸಿನಿಮಾ ನಿರ್ಮಿಸುವುದರ ಮೂಲಕ ಸಿನಿ ಇಂಡಸ್ಟ್ರಿಗೆ ಪ್ರವೇಶವಾದರು. ನಿರ್ಮಾಪಕ ರಘುನಾಥ್ ಜೊತೆ ಸೇರಿ ಉಮಾಪತಿ ಹೆಬ್ಬುಲಿ ಜಂಟಿ ನಿರ್ಮಾಣ ಮಾಡಿದರು. ಆಗಿನ್ನು ಉಮಾಪತಿಗೆ 28 ವರ್ಷ ವಯಸ್ಸು. ಮೂಲತಃ ಬಿಸಿನೆಸ್‌ಮ್ಯಾನ್ ಆಗಿದ್ದ ಉಮಾಪತಿಗೆ ಚೊಚ್ಚಲ ಸಿನಿಮಾ ಒಳ್ಳೆಯ ಗಳಿಕೆ ತಂದು ಕೊಡ್ತು.

    ಕಾಂಗ್ರೆಸ್ ಟಿಕೆಟ್ ಮಿಸ್ ಆಯ್ತು

    ಕಾಂಗ್ರೆಸ್ ಟಿಕೆಟ್ ಮಿಸ್ ಆಯ್ತು

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉಮಾಪತಿ ಶ್ರೀನಿವಾಸ್ ಅವರು ಸ್ಪರ್ಧೆ ಮಾಡಬೇಕಿತ್ತು. ಬೊಮ್ಮನಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಬೇಕಿತ್ತು. ಪ್ರಾದೇಶಿಕ ಕಾಂಗ್ರೆಸ್ ಬೆಂಬಲಿಗರು ಉಮಾಪತಿ ಅವರಿಗೆ ಟಿಕೆಟ್ ಕೊಡಿ ಎಂದು ಆಗ್ರಹಿಸಿದ್ದರು. ಅಂತಿಮ ಕ್ಷಣದವರೆಗೂ ಉಮಾಪತಿಗೆ ಟಿಕೆಟ್ ಸಿಗಲಿದೆ ಎನ್ನುವ ನಿರೀಕ್ಷೆ ಇತ್ತು. ಕೊನೆಯಲ್ಲಿ ಉಮಾಪತಿ ಬದಲು ಸುಷ್ಮಾ ರಾಜ್‌ಗೋಪಾಲ್‌ರೆಡ್ಡಿಗೆ ಮಣೆ ಹಾಕಿದರು. ಕಾಂಗ್ರೆಸ್ ಸೋಲು ಕಂಡಿತು.

    ಸುದೀಪ್ ನಂತರ ದರ್ಶನ್ ಕೈ ಹಿಡಿದ ಉಮಾಪತಿ

    ಸುದೀಪ್ ನಂತರ ದರ್ಶನ್ ಕೈ ಹಿಡಿದ ಉಮಾಪತಿ

    'ಹೆಬ್ಬುಲಿ' ಸಿನಿಮಾದ ಬಳಿಕ ನಟ ದರ್ಶನ್ ಬಳಗ ಸೇರಿದ ಉಮಾಪತಿ ರಾಬರ್ಟ್ ಸಿನಿಮಾ ಮಾಡಲು ಕೈ ಹಾಕಿದರು. ಬಹಳ ದೊಡ್ಡ ಬಜೆಟ್‌ನಲ್ಲಿ ರಾಬರ್ಟ್ ನಿರ್ಮಿಸಿದ ಉಮಾಪತಿ, ಅದಕ್ಕೆ ತಕ್ಕಂತೆ ಮೇಕಿಂಗ್, ಪ್ರಚಾರ, ಖರ್ಚು ಮಾಡಿ ಸಿನಿಮಾ ರಿಲೀಸ್ ಮಾಡಿದರು. ಈ ಸಿನಿಮಾ ಅನೌನ್ಸ್ ಆದ್ಮೇಲೆ ಮತ್ತೊಂದು ಪ್ರಯೋಗಾತ್ಮಕ ಚಿತ್ರ ಮಾಡಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡರು.

    ರಾಷ್ಟ್ರ ಪ್ರಶಸ್ತಿ-ರಾಜ್ಯ ಪ್ರಶಸ್ತಿ ಸಿಕ್ಕಿದೆ

    ರಾಷ್ಟ್ರ ಪ್ರಶಸ್ತಿ-ರಾಜ್ಯ ಪ್ರಶಸ್ತಿ ಸಿಕ್ಕಿದೆ

    'ಹೆಬ್ಬುಲಿ' ಆದ್ಮೇಲೆ 'ಒಂದಲ್ಲಾ ಎರಡಲ್ಲಾ' ಎಂಬ ಸಿನಿಮಾಗೆ ಉಮಾಪತಿ ಬಂಡವಾಳ ಹಾಕಿದರು. ಈ ಸಿನಿಮಾ ಲಾಭದ ಉದ್ದೇಶದಿಂದ ಮಾಡಿದಂತೆ ಅನಿಸಿಲ್ಲ. ಏಕಂದ್ರೆ ಇದು ಮಕ್ಕಳ ಸಿನಿಮಾ. ಈ ಚಿತ್ರಕ್ಕೆ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ಏಕತೆ ಸಿನಿಮಾ ಎಂಬ ಪ್ರಶಸ್ತಿ ಲಭಿಸಿದೆ. ಅತ್ಯುತ್ತಮ ಮಕ್ಕಳ ಚಿತ್ರ ಎಂಬ ಪ್ರಶಸ್ತಿಯೂ ಸಿಕ್ಕಿದೆ. ಇನ್ನು 2018ರಲ್ಲಿ ಅತ್ಯುತ್ತಮ ಮೂರನೇ ಸಿನಿಮಾ ಕರ್ನಾಟಕ ರಾಜ್ಯ ಪ್ರಶಸ್ತಿಯೂ ಈ ಚಿತ್ರಕ್ಕೆ ದೊರತಿದೆ.

    ಬಾಂಬೆ ರವಿ ಅಟ್ಯಾಕ್ ಘಟನೆ

    ಬಾಂಬೆ ರವಿ ಅಟ್ಯಾಕ್ ಘಟನೆ

    ಈ ನಡುವೆ ಅಂಡರ್‌ವರ್ಲ್ಡ್‌ ರೌಡಿಗಳ ಬಾಯಲ್ಲೂ ಉಮಾಪತಿ ಶ್ರೀನಿವಾಸ್ ಹಾಗೂ ಸಹೋದರ ದೀಪಕ್ ಹೆಸರು ಕೇಳಿ ಬಂತು. ರೌಡಿ ಶೀಟರ್ ಸೈಕಲ್ ರವಿ ಜೊತೆ ಸಂಪರ್ಕದಲ್ಲಿದ್ದು, ರಾಬರ್ಟ್ ಸಿನಿಮಾ ಒಟ್ಟಿಗೆ ನಿರ್ಮಾಣ ಮಾಡ್ತಿದ್ದಾರೆ, ಕೊಲೆ ಮಾಡಿಸುತ್ತೇನೆ ಎಂದು ಬಾಂಬೆ ರವಿ ಫೋನ್‌ನಲ್ಲಿ ಬೆದರಿಕೆ ಹಾಕಿದ್ದ ಪ್ರಕರಣವೂ ಜಯನಗರ ಪೊಲೀಸ್ ಠಾಣೆಯಲ್ಲಿದೆ.

    'ಮದಗಜ' ನಡೆಯುತ್ತಿದೆ

    'ಮದಗಜ' ನಡೆಯುತ್ತಿದೆ

    'ರಾಬರ್ಟ್' ಸಿನಿಮಾ ಮಾಡುತ್ತಿರುವಾಗಲೇ ಶ್ರೀಮುರಳಿ ಜೊತೆ 'ಮದಗಜ' ಎಂಬ ಸಿನಿಮಾ ಘೋಷಣೆ ಮಾಡಿದ್ದರು ಉಮಾಪತಿ. 'ಅಯೋಗ್ಯ' ಚಿತ್ರ ನಿರ್ದೇಶಿಸಿದ್ದ ಮಹೇಶ್ ಈ ಸಿನಿಮಾ ಮಾಡುತ್ತಿದ್ದಾರೆ. ಕೊನೆಯ ಹಂತದ ಚಿತ್ರೀಕರಣ ಸಾಗ್ತಿದ್ದು, ಇನ್ನು ಬಿಡುಗಡೆಯಾಗಿಲ್ಲ.

    ದರ್ಶನ್ ಜೊತೆ ಎರಡು ಪ್ರಾಜೆಕ್ಟ್

    ದರ್ಶನ್ ಜೊತೆ ಎರಡು ಪ್ರಾಜೆಕ್ಟ್

    'ರಾಬರ್ಟ್' ಸಿನಿಮಾ ಕೈಗೆತ್ತಿಕೊಂಡ ಕ್ಷಣದಿಂದ ನಟ ದರ್ಶನ್ ಜೊತೆಯಲ್ಲಿಯೇ ಇರುವು ಉಮಾಪತಿ, ಮತ್ತೆರಡು ಚಿತ್ರಗಳಿಗೆ ಡಿ ಬಾಸ್‌ ಬಳಿಕ ಕಾಲ್‌ಶೀಟ್ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಈ ನಡುವೆ ಅರುಣಾ ಕುಮಾರಿ ಪ್ರಕರಣ ಉಮಾಪತಿ ಹೆಸರಿಗೆ ಕಳಂಕ ತಂದೊಡ್ಡಿದೆ.

    English summary
    How Umapathy Srinivasa Gowda enters to Kannada Film Industry? What is his background.
    Wednesday, July 14, 2021, 16:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X