»   » 'ಹೌರಾ ಬ್ರಿಡ್ಜ್' ನಲ್ಲಿ ಉಪ್ಪಿ ಪತ್ನಿಯ ತಿರುಗಾಟ: ಬದಲಾಗಿದೆ ಪ್ರಿಯಾಂಕಾ ರೂಪ.!

'ಹೌರಾ ಬ್ರಿಡ್ಜ್' ನಲ್ಲಿ ಉಪ್ಪಿ ಪತ್ನಿಯ ತಿರುಗಾಟ: ಬದಲಾಗಿದೆ ಪ್ರಿಯಾಂಕಾ ರೂಪ.!

Posted By:
Subscribe to Filmibeat Kannada

ನಟಿ ಪ್ರಿಯಾಂಕಾ ಉಪೇಂದ್ರ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ವಾರಗಳಿಂದಲೇ ಕಲಾವಿದರು ಹಾಗೂ ಅಭಿಮಾನಿಗಳು ಪ್ರಿಯಾಂಕಾ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುತ್ತಿದ್ದಾರೆ. ಇಂದು ಅಭಿಮಾನಿಗಳು ಹಾಗೂ ಕುಟುಂಬದವರ ಜೊತೆ ಬರ್ತಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ.

ಕನ್ನಡ ಸಿನಿಮಾರಂಗದಲ್ಲಿ ನಾಯಕಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಳ್ಳುತ್ತಿರುವ ನಾಯಕಿ ಪ್ರಿಯಾಂಕಾ ಉಪೇಂದ್ರ. ಎರಡು ಚಿತ್ರಗಳಲ್ಲಿ ಬ್ಯುಸಿ ಆಗಿರುವ ಪ್ರಿಯಾಂಕಾ ಅಭಿನಯದ 'ಹೌರಾ ಬ್ರಿಡ್ಜ್' ಚಿತ್ರದ ಲುಕ್ ರಿವೀಲ್ ಆಗಿದೆ. ಹಾಗಾದ್ರೆ ಪ್ರಿಯಾಂಕಾ ಲುಕ್ ಹೇಗಿದೆ.? ಮುಂದೆ ಓದಿ..

ಹೊಸ ಲುಕ್ ನಲ್ಲಿ ಪ್ರಿಯಾಂಕಾ

ಸಾಕಷ್ಟು ವರ್ಷಗಳಿಂದ ಸಿನಿಮಾಗಳಲ್ಲಿ ಒಂದೇ ಲುಕ್ ನಲ್ಲಿ ಕಾಣಿಸಿಕೊಳ್ತಿದ್ದ ಪ್ರಿಯಾಂಕಾ 'ಹೌರಾ ಬ್ರಿಡ್ಜ್' ಸಿನಿಮಾಗಾಗಿ ಮೇಕ್ ಓವರ್ ಮಾಡಿಕೊಂಡಿದ್ದಾರೆ. ಹೇರ್ ಕಟ್ ಮಾಡಿಸಿಕೊಂಡು ತುಂಬಾನೇ ಡಿಫ್ರೆಂಟ್ ಆಗಿ ಕಾಣಿಸುತ್ತಿದ್ದಾರೆ.

ಮತ್ತೆ ಒಂದಾದ್ರು 'ಮಮ್ಮಿ' ಟೀಂ

ಕಳೆದ ವರ್ಷ ಬಿಡುಗಡೆಯಾಗಿದ್ದ 'ಮಮ್ಮಿ ಸೇವ್ ಮಿ' ಸಿನಿಮಾದಲ್ಲಿ ಕೆಲಸ ಮಾಡಿದ್ದ ಬಹುತೇಕರು 'ಹೌರಾ ಬ್ರಿಡ್ಜ್'ನಲ್ಲಿ ಮತ್ತೆ ಒಂದಾಗಿದ್ದಾರೆ. ನಿರ್ದೇಶಕ ಹೆಚ್.ಲೋಹಿತ್ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು ಹುಟ್ಟುಹಬ್ಬಕ್ಕಾಗಿ ಹೊಸ ಪೋಸ್ಟರ್ ಅನ್ನ ರಿಲೀಸ್ ಮಾಡಿದ್ದಾರೆ

ಕೊನೆಯ ಹಂತದ ಚಿತ್ರೀಕರಣದಲ್ಲಿ

ಹೌರಾ ಬ್ರಿಡ್ಜ್ ಸಿನಿಮಾದ ಚಿತ್ರೀಕರಣ ಕೊನೆಯ ಹಂತಕ್ಕೆ ಬಂದಿದೆ. ಭಾಸ್ಕರ್ ಹಾಗೂ ಪ್ರಸಾದ್ ರಾವ್` ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಕೋಲ್ಕತಾದ ಲೈವ್ ಲೊಕೇಷನ್ಸ್ ನಲ್ಲಿ ಸಿನಿಮಾದ ಶೂಟಿಂಗ್ ಮುಗಿಸಿರುವ ನಿರ್ದೇಶಕ ಲೋಹಿತ್ ಇನ್ನೂ 20%ನಷ್ಟು ಮಾತ್ರ ಚಿತ್ರೀಕರಣವನ್ನ ಬಾಕಿ ಉಳಿಸಿಕೊಂಡಿದ್ದಾರೆ.

'ಹೌರಾ ಬ್ರಿಡ್ಜ್' ನಲ್ಲಿ ಉಪ್ಪಿ ಮಗಳು

'ಹೌರಾ ಬ್ರಿಡ್ಜ್' ಚಿತ್ರದ ಮೂಲಕ ಐಶ್ವರ್ಯ ಉಪೇಂದ್ರ ಚಿತ್ರರಂಗಕ್ಕೆ ಎಂಟ್ರಿಕೊಡ್ತಿದ್ದಾರೆ. 'ಹೌರಾ ಬ್ರಿಡ್ಜ್' ಅಮ್ಮ ಮಗಳ ಕಥಾಹಂದರ ಹೊಂದಿರೋದ್ರಿಂದ ಐಶ್ವರ್ಯ ರನ್ನ ಮಗಳ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

English summary
Priyanka Upendra changes her hairstyle for upcoming movie 'Howrah Bridge'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X