'ದೇವಕಿ'ಯಾಗಿ ಬದಲಾಯ್ತು 'ಹೌರಬ್ರಿಡ್ಜ್' ಸಿನಿಮಾ ಟೈಟಲ್

ಪ್ರಿಯಾಂಕ ಉಪೇಂದ್ರ ನಟನೆಯ ನಿರೀಕ್ಷಿತ ಸಿನಿಮಾ 'ಹೌರಬ್ರಿಡ್ಜ್' ಟೈಟಲ್ ಇದೀಗ ಬದಲಾಗಿದೆ. ಸಿನಿಮಾಗೆ 'ದೇವಕಿ' ಎಂಬ ಹೊಸ ಹೆಸರನ್ನು ಇಡಲಾಗಿದೆ.

'ಹೌರಬ್ರಿಡ್ಜ್' ಎಂಬ ಟೈಟಲ್ ಗಿಂತ 'ದೇವಕಿ' ಎಂಬ ಟೈಟಲ್ ಸಿನಿಮಾಗೆ ಸೂಕ್ತ ಎನಿಸಿ ಹೆಸರು ಬದಲಾವಣೆ ಮಾಡಲಾಗಿದೆ. ಚಿತ್ರದ ಫಸ್ಟ್ ಕಾಫಿ ನೋಡಿದ ನಂತರ ಚಿತ್ರತಂಡ ಈ ನಿರ್ಧಾರಕ್ಕೆ ಬಂದಿದೆ.

howrah bridge kannada movie titel changed as devaki

'ದೇವಕಿ' ಕಂಸನ ತಂಗಿ ಹಾಗೂ ಶ್ರೀಕೃಷ್ಣನ ತಾಯಿಯ ಹೆಸರು. ಇಂತಹ ಪವರ್ ಫುಲ್ ಹೆಸರು ಈ ಸಿನಿಮಾಗೆ ನಿಗದಿಯಾಗಿದೆ. ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಪಾತ್ರದ ಹೆಸರು ಕೂಡ 'ದೇವಕಿ' ಆಗಿದೆ. ಚಿತ್ರಕ್ಕೆ ಸರಿ ಎನ್ನಿಸುವ ಹೆಸರು ಇರಲಿ ಎಂದು ನಿರ್ದೇಶಕ ಲೋಹಿತ್ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ.

'ಮಮ್ಮಿ' ಸಿನಿಮಾದ ಯಶಸ್ಸಿನ ಬಳಿಕ ಮತ್ತೆ ನಿರ್ದೇಶಕ ಲೋಹಿತ್ ಹಾಗೂ ಪ್ರಿಯಾಂಕ ಉಪೇಂದ್ರ ಈ ಚಿತ್ರದಲ್ಲಿ ಒಂದಾಗಿದ್ದಾರೆ. ಹಾರರ್ ಹಾಗೂ ಥ್ರಿಲ್ಲರ್ ಕಥೆಯನ್ನು ಸುಂದರವಾಗಿ ತೆರೆ ಮೇಲೆ ಹೇಳುವ ಲೋಹಿತ್ ಈ ಚಿತ್ರದಲ್ಲಿಯೂ ಹೊಸ ಪ್ರಯತ್ನ ಮಾಡಿದ್ದಾರೆ.

ಮತ್ತೊಂದು ವಿಶೇಷ ಅಂದರೆ, ನಟ ಉಪೇಂದ್ರ ಪುತ್ರಿ ಐಶ್ವರ್ಯ ಉಪೇಂದ್ರ ಮೊದಲ ಬಾರಿಗೆ ಈ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡುತ್ತಿದ್ದಾರೆ. ತಾಯಿ ಪ್ರಿಯಾಂಕ ಜೊತೆಗೆ ಮಗಳು ಐಶ್ವರ್ಯ ಸಹ ಚಿತ್ರದಲ್ಲಿ ನಟಿಸಿದ್ದಾರೆ. ಐಶ್ವರ್ಯ ಉಪೇಂದ್ರ ಅವರ ಫಸ್ಟ್ ಲುಕ್ ಹಾಗೂ ಚಿತ್ರದ ಟೀಸರ್ ಇದೇ ವಾರ ರಿಲೀಸ್ ಆಗುತ್ತಿದೆ.

howrah bridge kannada movie titel changed as devaki

ಕನ್ನಡ ಹಾಗೂ ತಮಿಳು ಎರಡು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದ್ದು, ಎಪ್ರಿಲ್ ನಲ್ಲಿ ಅದ್ದೂರಿಯಾಗಿ ಚಿತ್ರ ರಿಲೀಸ್ ಮಾಡಲಾಗುತ್ತಿದೆ.

More from Filmibeat

English summary
Actress Priyanka Upendra's 'Howrah Bridge' kannada movie title changed as Devaki. The movie is directed by Lohith.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X