»   » ಬುಧವಾರ ಹೃತಿಕ್‌ ಮದುವೆ

ಬುಧವಾರ ಹೃತಿಕ್‌ ಮದುವೆ

Posted By: Staff
Subscribe to Filmibeat Kannada

ಬೆಂಗಳೂರು : ಹೃತಿಕ್‌ ರೋಷನ್‌ ಸೋಮವಾರ ಬೆಂಗಳೂರಿಗೆ ಆಗಮಿಸುವ ಮೂಲಕ ಆತನ ಮದುವೆ ದಿನಾಂಕದ ಬಗೆಗೆ ಇದ್ದ ಗೊಂದಲ ಬಗೆಹರಿದಂತಾಗಿದೆ. ಅವರು ಬಾಲ್ಯದಿಂದಲೂ ಪ್ರೇಮಿಸುತ್ತಲೇ ಇರುವ ಸಂಜಯ್‌ ಖಾನ್‌ ಪುತ್ರಿ ಸೂಸನ್‌ ಖಾನ್‌ ಅವರನ್ನು ಬುಧವಾರ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಲಿದ್ದಾರೆ.

ಹೃತಿಕ್‌ ಅಪ್ಪ ರಾಕೇಶ್‌ ರೋಷನ್‌ ಅವರಿಗೆ ಭೂಗತ ದೊರೆಗಳ ಬೆದರಿಕೆ ಹಾಗೂ ಇದು ಧರ್ಮಾತೀತ ಮದುವೆಯಾದ್ದರಿಂದ ಯಾವ ಸಂಪ್ರದಾಯದಲ್ಲಿ ನಡೆಯಬೇಕು ಎಂಬ ಜಿಜ್ಞಾಸೆ ಹೃತಿಕ್‌ ಮದುವೆಯನ್ನು ಜನವರಿ ಎರಡನೆ ವಾರದವರೆಗೆ ಮುಂದೂಡಲು ಎಡೆ ಮಾಡಿಕೊಟ್ಟವು ಎಂದು ಕುಟುಂಬದ ಮೂಲಗಳು ಹೇಳಿದ್ದವು. ಆ ದಿನಾಂಕ ಸೋಮವಾರ (ಡಿಸೆಂಬರ್‌ 18) ನಿರ್ಧರಿತವಾಗಬೇಕಿತ್ತು. ಆದರೆ ಈಗ ಹೃತಿಕ್‌ ನಗರಕ್ಕೆ ಬಂದಿಳಿದಿರುವುದು ಎಲ್ಲಾ ಅನುಮಾನಗಳಿಗೂ ತೆರೆ ಎಳೆದಿದೆ.

ಸೋಮವಾರ ಸಂಜೆಯೇ ಮೆಹೆಂದಿ. ಬುಧವಾರ ಮದುವೆ. ನಗರದಿಂದ 27 ಕಿ.ಮೀ. ದೂರದಲ್ಲಿ ಬೆಂಗಳೂರು - ಪುಣೆ ರಾಷ್ಟ್ರೀಯ ಹೆದ್ದಾರಿ 4ರ ಹತ್ತಿರವಿರುವ ಗೋಲ್ಡನ್‌ ಪಾಲ್ಮ್‌ ರೆಸಾರ್ಟ್‌ನಲ್ಲಿ ಸಮಾರಂಭ. ನೆಂಟರು ಇಷ್ಟರು ಆಗಲೇ ಮದುವೆಗೆ ಬಂದಿಳಿದಿದ್ದಾರೆ. ಹೃತಿಕ್‌ ಅಪ್ಪ- ಅಮ್ಮ ಭಾನುವಾರದ ಫ್ಲೈಟಿಗೇ ಬಂದು, ಮದುವೆಗೆ ಅಣಿ ಮಾಡುವುದರಲ್ಲಿ ನಿರತರಾಗಿದ್ದಾರೆ. ಎಲ್ಲವೂ ಪೊಲೀಸರ ಬಂದೋಬಸ್ತಿನಲ್ಲೇ ನಡೆಯುತ್ತಿದೆ. ಹೃತಿಕ್‌ಗೆ ಸ್ವಾಗತ ಕೋರಿದವರ ಪೈಕಿ ಪೊಲೀಸರೇ ಹೆಚ್ಚಾಗಿದ್ದರು !

ಆದರೂ ಇನ್ನೂ ಕೆಲ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ. ಹೃತಿಕ್‌ ಹಿಂದು. ಸೂಸನ್‌ ಮುಸ್ಲಿಂ. ಸೂಸನ್‌ ತಾಯಿ ಪಾರ್ಸಿ. ಮದುವೆ ಯಾವ ಸಂಪ್ರದಾಯದಲ್ಲಿ ನಡೆಯುತ್ತದೆ ಎಂಬುದು ಹೃತಿಕ್‌ ಕುಟುಂಬದ ಆಪ್ತರಿಗೂ ಇನ್ನೂ ತಿಳಿದಿಲ್ಲ. ಇನ್ನೆರಡೇ ದಿನ. ಎಲ್ಲಕ್ಕೂ ತೆರೆ ಬೀಳಲಿದೆ. ಶನಿವಾರದೊಳಗೆ ಹೊಸ ಜೋಡಿ ಬೆಂಗಳೂರು ಬಿಡಲಿದ್ದಾರೆ. ಹನಿಮೂನ್‌ ಎಲ್ಲೆಂದು ಇನ್ನೂ ತಿಳಿದಿಲ್ಲ.

(ಐಎಎನ್‌ಎಸ್‌)

English summary
Hrithik arrives bangalore for his marriage, its mehendi Monday
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada