»   » ಹೃತಿಕ್‌, ಸೂಸನ್‌ ರಿಜಿಸ್ಟರ್‌ ಮದುವೆ

ಹೃತಿಕ್‌, ಸೂಸನ್‌ ರಿಜಿಸ್ಟರ್‌ ಮದುವೆ

Posted By: Staff
Subscribe to Filmibeat Kannada

ಬೆಂಗಳೂರು: ನವಜಾತ ಬಾಲಿವುಡ್‌ ಸ್ಟಾರ್‌ ಹೃತಿಕ್‌ ರೋಷನ್‌ ಹಾಗೂ ಆತನ ದೀರ್ಘ ಕಾಲದ ಗೆಳತಿ ಸೂಸಾನ್‌ ಖಾನ್‌ ಅವರ ಮದುವೆ ಹಿಂದೂ ಮತ್ತು ಮುಸ್ಲಿಂ ಸಂಪ್ರದಾಯಗಳನ್ನು ಹೊತರುಪಡಿಸಿ ನಡೆಯಲಿದೆ. ಅಂದರೆ ನಿಖಾ ಇಲ್ಲ. ಸಪ್ತಪದಿಯೂ ಇಲ್ಲ. ಇನ್ನೊಂದು ಅರ್ಥದಲ್ಲಿ ಅದು ರಿಜಿಸ್ಟರ್‌ ಮ್ಯಾರೇಜ್‌.

ಬೆಂಗಳೂರು ತುಮಕೂರು ರಸ್ತೆಯಲ್ಲಿರುವ ವಧುವಿನ ತಂದೆ ನಟ, ನಿರ್ಮಾಪಕ ಸಂಜಯ್‌ ಖಾನ್‌ ಅವರ ರಿಸಾರ್ಟ್‌ನಲ್ಲಿ ನಡೆಯಲಿರುವ ಮದುವೆಯ ಸಂಭ್ರಮ ಏರುತ್ತಿರುವಂತೆಯೇ ವ್ಯಾಪಕ ಭದ್ರತೆ ಕೂಡಾ ಬಿಗಿಗೊಳ್ಳುತ್ತಿದೆ. ಇಂದು (ಮಂಗಳವಾರ) ಆರತಕ್ಷತೆ ನಡೆಯಲಿದ್ದು, ರಿಸಾರ್ಟ್‌ನ ಸುತ್ತಾ 25 ಯಾರ್ಡ್‌ ದೂರದಲ್ಲಿ ಪೊಲೀಸರು ಭದ್ರಕೋಟೆ ನಿರ್ಮಿಸಿದ್ದಾರೆ.

ಮದುವೆಯಲ್ಲಿ ಯಾರು ಭಾಗವಹಿಸುತ್ತಾರೆ ಎನ್ನುವುದೇ ಕುತೂಹಲದ ವಿಷಯವಾಗಿದೆ. ಕೆಲವು ಮೂಲಗಳ ಪ್ರಕಾರ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಬಾಲಿವುಡ್‌ ಸ್ಟಾರ್‌ ಶಾರುಖ್‌ ಖಾನ್‌, ಕರ್ನಾಟಕದ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ, ಗೃಹಸಚಿವ ಮಲ್ಲಿಕಾರ್ಜುನ ಖರ್ಗೆ, ವರನಟ ಡಾ. ರಾಜ್‌ಕುಮಾರ್‌ ಭಾಗವಹಿಸುತ್ತಾರೆ. ರಾಜ್ಯದ ಪೋಲೀಸರೂ ಸೇರಿದಂತೆ, ರಿಜರ್ವ್‌ ಪೊಲೀಸ್‌ ಪಡೆ ಮತ್ತು ರೆಸಾರ್ಟ್‌ನ ಖಾಸಗಿ ಭದ್ರತಾ ದಳಗಳು ಭದ್ರತೆ ಉಸ್ತುವಾರಿ ನೋಡಿಕೊಳ್ಳಲಿವೆ. ಅತಿಥಿಗಳ ಸಂಖ್ಯೆ 150 ದಾಟುವುದಿಲ್ಲ ಎಂದು ಹೇಳಲಾಗಿದೆ.

ವಧು ಮುಸ್ಲಿಂ, ವರ ಹಿಂದೂ ಆಗಿರುವುದರಿಂದ ಮದುವೆ ಯಾವ ಸಂಪ್ರದಾಯದ ರೀತಿಯಲ್ಲಿ ನಡೆಯಲಿದೆ ಎಂಬುದು ಚರ್ಚೆಯ ಸರಕಾಗಿತ್ತು. ಈಗ ಅದಕ್ಕೆ ತೆರೆ ಬಿದ್ದಿದ್ದು, ಮದುವೆಯನ್ನು ಎರಡೂ ಸಂಪ್ರದಾಯಗಳಿಂದ ಭಿನ್ನವಾಗಿ ಮಾಡಿ ರಿಜಿಸ್ಟ್‌ರ್‌ ಮಾಡಿಸುವ ತೀರ್ಮಾನಕ್ಕೆ ಬರಲಾಗಿದೆ. ಮದುವೆಯ ಸಂಪ್ರದಾಯಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯ ಕುಟುಂಬಗಳು ಚರ್ಚೆ ನಡೆಸುತ್ತಿದ್ದು, ಮದುವೆ ಜನವರಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ ಎಂದು ಈ ಮುಂಚೆ ಮಾದ್ಯಮಗಳು ವರದಿ ಮಾಡಿದ್ದವು.

ಮದುವಣಿಗರು ಶನಿವಾರ ಬೆಂಗಳೂರು ಬಿಡುವ ನಿರೀಕ್ಷೆ ಇದ್ದು, ಅತಿಥಿಗಳು ಗುರುವಾರ ಜಾಗ ಖಾಲಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. 

English summary
Hrithik Roshans much talked of marriage is on Wednesday

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada