»   » ಬೆಂಗಳೂರಲ್ಲಿ ಹಿಂಡುಗಟ್ಟಲೆ ಬಾಲಿವುಡ್‌ ಮುಖಗಳು

ಬೆಂಗಳೂರಲ್ಲಿ ಹಿಂಡುಗಟ್ಟಲೆ ಬಾಲಿವುಡ್‌ ಮುಖಗಳು

Posted By: Staff
Subscribe to Filmibeat Kannada

ಬೆಂಗಳೂರು : ಇಲ್ಲಿಂದ ತುಮಕೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಗೇನೋ ಗತ್ತು. ಬಣ್ಣ ಬಣ್ಣದ ಲಕ್ಷುರಿ ಕಾರುಗಳು ಸುಂಯ್‌ಗುಡುತ್ತಿವೆ. ಲೋಡ್‌ ಹೊತ್ತ ಲಾರಿಗಳ ಸರ್ದಾರ್‌ಜಿಗಳು ತಮ್ಮ ನೆಚ್ಚಿನ ನಟ- ನಟಿ ಕಣ್ಣಿಗೆ ಬಿದಾರೋ ಎಂದು ಕಣ್ಣಾಡಿಸುತ್ತಿದ್ದಾರೆ. ಬಾಲಿವುಡ್‌ನ ಹೊಸ ಮಿಂಚು ಹೃತಿಕ್‌ ರೋಷನ್‌ ಮದುವೆಯ ಸಂಭ್ರಮ ತಂದಿರುವ ಹಠಾತ್‌ ಬದಲಾವಣೆಯಿದು.

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸದಾ ಒಂದು ಡಜನ್ನು ಕಾರು ನಿಂತಿರುತ್ತವೆ. ಯಾವ ಫ್ಲೈಟಲ್ಲಿ ಯಾವ ತಾರೆ ಬಂದಿಳಿಯುತ್ತಾರೋ ಗೊತ್ತಿಲ್ಲ. ಆ ನಿರೀಕ್ಷೆಯಲ್ಲೇ ಒಂದು ಹಿಂಡು ಮಾಧ್ಯಮದವರೂ ಕ್ಯಾಮೆರಾ ಕೈಲಿ ಹಿಡಿದೇ ನಿಂತಿದ್ದಾರೆ. ಫೈವ್‌ ಸ್ಟಾರ್‌ ಹೊಟೇಲುಗಳಲ್ಲಿ ಮಿಂಚಿನ ಸಂಚಾರ. ನಗರದ ಹೊರ ವಲಯದಲ್ಲಿರುವ ಸಂಜಯ್‌ ಖಾನ್‌ರ ಗೋಲ್ಡನ್‌ ಪಾಮ್‌ ರೆಸಾರ್ಟ್‌ನ ಹಸುರು ಹುಲ್ಲು ನಿಮಿರಿ ನಿಂತಿದೆ. ಸುತ್ತ ಮುತ್ತೆಲ್ಲಾ ಪೊಲೀಸರ ದಂಡು. ನಡು ನಡುವೆ ಬಾಲಿವುಡ್‌ ನಟ- ನಟಿಯರ ಸಂಚಾರ. ಅಡಿಗೆಗೆ ಹೆಸರುವಾಸಿಯಾದ ಭೀಮಾ ಚಿಮ್ನಿ ಸಿಬ್ಬಂದಿ ಅದೇ ಲಾನಿನಲ್ಲಿ ಸದ್ದಿಲ್ಲದೆ ಪಾಕ ಸಿದ್ಧ ಪಡಿಸುತ್ತಿದ್ದಾರೆ.

ರೆಸಾರ್ಟ್‌ನ ಸುತ್ತಮುತ್ತಲ ಹಳ್ಳಿಗಳ ಪಡ್ಡೆ ಹುಡುಗರ ಇಣುಕು ನೋಟ ಫಲ ಕೊಡುತ್ತಿಲ್ಲ. ಸರ್ರನೆ ಬರುವ ಕಾರಿನ ಕಿಟಕಿಗಳೂ ಮುಚ್ಚಿರುತ್ತವೆ. ಮಂಗಳವಾರ ಹೃತಿಕ್‌- ಸೂಸನ್‌ ಖಾನ್‌ ಆರತಕ್ಷತೆ. ಆ ಪ್ರಯುಕ್ತ ಸೂಸನ್‌ ಚಿಕ್ಕಪ್ಪ ಹಾಗೂ ಸಿನಿಮಾ ನಿರ್ಮಾಪಕ ಫಿರೋಜ್‌ ಖಾನ್‌ ತನ್ನ ಅಣ್ಣನ ಮಗಳಿಗೆ ಕೊಡುತ್ತಿರುವ ವಿಶೇಷ ಉಡುಗೊರೆ ಕಾಕ್‌ಟೈಲ್‌ ಪಾರ್ಟಿ.

ಇಂಡಿಯಾ ಇನ್ಫೋ ಕಂಡಿರುವಂತೆ ಹೃತಿಕ್‌ ಮದುವೆಗೆ ಅತಿಥಿಗಳಾಗಿ ಬಂದಿರುವವರ ಪಟ್ಟಿ ಇಂತಿದೆ- ಡಿಂಪಲ್‌ ಕಪಾಡಿಯಾ, ರಿಷಿ ಕಪೂರ್‌, ಅನಿಲ್‌ ಕಪೂರ್‌ ಮತ್ತು ಕುಟುಂಬ,ಪ್ರೇಂ ಚೋಪ್ರಾ, ಉದಿತ್‌ ನಾರಾಯಣ್‌, ಸೋನು ನಿಗಮ್‌, ಶಂಕರ್‌ ಮಹದೇವನ್‌, ಸುಖ್‌ಬೀರ್‌, ದಾರಾಸಿಂಗ್‌ ಪುತ್ರ ಕರಣ್‌, ಡಿಸೈನರ್‌ ಅನ್ನಾ ಸಿಂಗ್‌.

ಖ್ಯಾತ ಸಂಗೀತಗಾರ ಲಕಿ ಅಲಿ ಕೂಡ ಸಮಾರಂಭಕ್ಕೆ ಬರುವ ನಿರೀಕ್ಷೆಯಿದೆ. ಇದು ರಿಜಿಸ್ಟರ್‌ ಮದುವೆಯಾದ್ದರಿಂದ ಕಂಡಾಪಟ್ಟೆ ಜನರನ್ನು ಕರೆದಿಲ್ಲ ಎಂಬ ಸುದ್ದಿಯಿದೆ. ಬಂದಿರುವ ಅತಿಥಿಗಳಲ್ಲಿ ಗಾಯಕರ ಸಂಖ್ಯೆಯೇ ಕಣ್ಣಿಗೆ ಕಟ್ಟುವಂತಿದ್ದು, ಮಂಗಳವಾರದ ಕಾಕ್‌ಟೈಲ್‌ ಪಾರ್ಟಿಯಲ್ಲಿ ಹಾಡಿನ ಹೊಳೆ ಹರಿಯುವ ಬಗೆಗೆ ಸ್ಥಳೀಯ ಹಿಂದಿ ಸಿನಿಮಾ ಅಭಿಮಾನಿಗಳು ಉತ್ಸಾಹದಿಂದಿದ್ದಾರೆ. ಕೊನೆ ಪಕ್ಷ ದನಿಯನ್ನಾದರೂ ಕೇಳಿ ಧನ್ಯರಾಗೋಣ ಎಂಬ ಆಸೆ ಅವರದು.

ಬಾ-ಲಂ--ಗೋ-ಚಿ : ಬೆಂಗ-ಳೂ-ರಿ--ದು ಐಟಿ ಪಾರ್ಕು ಮಾತ್ರ-ವ-ಲ್ಲ , ಸಿನಿ-ಮಾ ಪಾರ್ಕೂ ಹೌದು.

(ಇನ್ಫೋ ವಾರ್ತೆ)

English summary
Bangalore is busy with hrithiks marriage
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada