»   » ಗಾಂಧರ್ವ ವಿವಾಹದ ಆ ಹೊತ್ತು ಅಲ್ಲಿ ರಾತ್ರಿಯಾಗಲಿಲ್ಲ

ಗಾಂಧರ್ವ ವಿವಾಹದ ಆ ಹೊತ್ತು ಅಲ್ಲಿ ರಾತ್ರಿಯಾಗಲಿಲ್ಲ

Posted By: Staff
Subscribe to Filmibeat Kannada

ಬೆಂಗಳೂರು : ಅದು ರಾತ್ರಿ ಅನ್ನುವುದನ್ನು ಅಲ್ಲಿದ್ದ ಯಾರೂ ಲೆಕ್ಕಕ್ಕಿಟ್ಟಂತಿರಲಿಲ್ಲ . ಅಸಲಿಗೆ ಅಲ್ಲಿ ರಾತ್ರಿಯ ಯಾವ ಲಕ್ಷಣಗಳೂ ಇರಲಿಲ್ಲ . ಪೈಪೋಟಿಯ ಮೇಲೆ ಬೆಳಕು ಕಾರುತ್ತಿದ್ದ ಸಹಸ್ರಾರು ಬಣ್ಣದ ದೀಪಗಳು ಕತ್ತಲನ್ನು ಬಚ್ಚಿಟ್ಟು , ಹಗಲಿಗೆ ಸೆಡ್ಡು ಹೊಡೆದಿದ್ದವು.

ಗೋಲ್ಡನ್‌ ಪಾಮ್ಸ್‌ ರೆಸಾರ್ಟ್‌ ತುಂಬಾ ಸಂಭ್ರಮದ ಗಮಲು. ಅವರು ಹಾಡಿದರು. ಮತ್ತಷ್ಟು ಜನ ಮೈ ಮರೆತು ಕುಣಿದರು. ಆ ಹೊತ್ತಿಗೆ ಮಂಗಳವಾರದ ರಾತ್ರಿ ಅನ್ನುವ ಹೊತ್ತು ತಂತಾನೆ ಸರಿದು ಹೋಗಿತ್ತು . ಈ ನಡುವೆ ಇಷ್ಟೂ ಸಂಭ್ರಮಕ್ಕೆ ಕಾರಣರಾದ ಹೃತಿಕ್‌ ಹಾಗೂ ಸೂಸನ್‌ ಖಾನ್‌ ಪರಸ್ಪರ ಉಂಗುರ ಬದಲಿಸಿಕೊಂಡಿದ್ದರು.

ಗ್ರೇ ಸೂಟ್‌, ತಿಳಿ ನೀಲಿ ಷರಾಯಿ, ಮತ್ತು ಬೂದು ಬಣ್ಣದ ಕೊರಳಪಟ್ಟಿಯಲ್ಲಿ ಮದುಮಗ ಸಿಂಗರಗೊಂಡಿದ್ದ. ಮದುಮಗಳು ಆ ಸಂದರ್ಭಕ್ಕೆಂದೇ ವಿಶೇಷವಾಗಿ ಸಿದ್ಧಪಡಿಸಿದ್ದ, ವಜ್ರಗಳನ್ನು ಪೋಣಿಸಿದ್ದ ಚರ್ಮದ ಬಣ್ಣದ ಘಾಗ್ರಾ- ಚೋಲಿಯಲ್ಲಿ ಅಲಂಕೃತವಾಗಿದ್ದಳು. ಸಮಾರಂಭದ ಮುಖ್ಯ ಆಕರ್ಷಣೆ ಸಂಜೆಯ ಸಂಗೀತ ಧಾರೆ. ಕಹೋನ ಪ್ಯಾರ್‌ ಹೈ ಚಿತ್ರದ ಹಾಡಿಗೆ ಮದುಮಗ ಹೃತಿಕ್‌ನೇ ಹೆಜ್ಜೆ ಹಾಕಿದ್ದು ವಿಶೇಷ. ಜೊತೆಗೆ ನವವಧು ಸೂಸನ್‌ ಇದ್ದೇ ಇದ್ದಳು.

ಹಾಡುಗಾರ ಸುಖ್‌ಬೀರ್‌ ಸಿಂಗ್‌, ನೃತ್ಯ ಚತುರ ಚಿಂಕಿ ಪಾಂಡೆ, ರಾಕೇಶ್‌ ರೋಷನ್‌, ಸಂಜಯ್‌ ಖಾನ್‌, ಫಿರೋಜ್‌ ಖಾನ್‌, ರಿಷಿ ಕಪೂರ್‌, ಪ್ರಾಣ್‌, ಪ್ರೇಮ್‌ ಚೋಪ್ರಾ, ಜಿತೇಂದ್ರ, ಹಿರಿಯ ಕಾಂಗ್ರೆಸ್ಸಿಗ ಗುಲಾಂ ನಬಿ ಅಜಾದ್‌ ಮುಂತಾದವರು ಸಂಭ್ರಮದ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ನೃತ್ಯಸಂಜೆಯನ್ನು ಮತ್ತಷ್ಟು ಮೋಹಕಗೊಳಿಸಿದ್ದು ಡಿಂಪಲ್‌ ಕಪಾಡಿಯಾ.

ಅತಿಥಿಗಳಿಗಾಗಿ ಬಾಣಸಿಗರು ವಿಶೇಷವಾಗಿ ಭಾರತೀಯ, ಚೈನೀಸ್‌ ಮುಂತಾದ ಖಾದ್ಯಗಳನ್ನು ಸಿದ್ಧಪಡಿಸಿದ್ದರು. ಉಳಿದಂತೆ ಬಗೆಬಗೆ ಪಾನೀಯಗಳು ಅದ್ದೂರಿತನಕ್ಕೆ ತಕ್ಕನಾಗಿಯೇ 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada