ಅಂತೂ ಇಂತೂ ಹೃತಿಕ್ ಗೆ ವಿಚ್ಛೇದನ ಸಿಕ್ತು
ನವದೆಹಲಿ, ನ. 1: ಬಾಲಿವುಡ್ ಹಾಟ್ ಸ್ಟಾರ್ ಹೃತಿಕ್ ರೋಷನ್ ಮತ್ತು ಸುಸಾನ್ ಖಾನ್ ದಾಂಪತ್ಯ ಸಂಬಂಧಕ್ಕೆ ನ್ಯಾಯಾಲಯ ತೆರೆ ಎಳೆದಿದೆ. ತಮಗೆ ವಿಚ್ಛೇದನ ಬೇಕು ಎಂದು ಈ ಅರ್ಜಿ ಸಲ್ಲಿಸಿದ್ದ ತಾರಾ ದಂಪತಿಗೆ ಡೈವೋರ್ಸ್ ನೀಡಲು ಬಾಂದ್ರಾ ಕೋರ್ಟ್‌ಗೆ ಅಸ್ತು ಎಂದು ಶನಿವಾರ ಹೇಳಿದೆ. ಈ ಮೂಲಕ ಇಬ್ಬರು ವಿವಾಹ ಬಂಧನದಿಂದ ಮುಕ್ತರಾಗಿದ್ದಾರೆ.
ವಿಚ್ಛೇದನದ ನಂತರ ಮಕ್ಕಳು ಯಾರ ಜತೆ ಇರುತ್ತಾರೆ? ಅವರ ಭವಿಷ್ಯಕ್ಕೆ ಯಾವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂಬುದರ ಬಗ್ಗೆ ಇಲ್ಲಿಯವರೆಗೆ ನಿರ್ಧಾರವಾಗಿಲ್ಲ. ಈ ಬಗ್ಗೆ ಕೆಲವೇ ದಿನಗಳಲ್ಲಿ ಕೋರ್ಟ್ ತನ್ನ ಆದೇಶ ನೀಡಲಿದೆ. ಹೃತಿಕ್-ಸುಸಾನ್ ದಂಪತಿಗಳಿದೆ ಹ್ರೆಹಾನ್ ಮತ್ತು ಹ್ರಿದಾನ್ ಎಂಬ ಇಬ್ಬರು ಮಕ್ಕಳಿದ್ದಾರೆ.

ವಿಚ್ಛೇದನ ಕುರಿತು ಮಾಹಿತಿ ನೀಡಿದ ಹೃತಿಕ್ ಪರ ವಕೀಲ ದಿಪೇಶ್ ಮೆಹ್ತಾ, ಕಾನೂನಿನ ಪ್ರಕಾರ ಎಲ್ಲ ಕೆಲಸ ಕಾರ್ಯಗಳು ಮುಗಿದಿವೆ. ಯಾವುದೇ ವಿವಾದಗಳನ್ನು ಸುತ್ತಿಕೊಳ್ಳದೇ ವಿಚ್ಛೇದನ ಕೆಲಸ ಮುಗಿಸಲಾಗಿದೆ ಎಂದು ತಿಳಿಸಿದರು.
100 ಕೋಟಿ ಪರಿಹಾರ ಕೇಳಿದ್ದರೆ ಸುಸಾನ್ ಖಾನ್?
ಹಿಂದೊಮ್ಮೆ ಸುಸಾನ್ ಖಾನ್ ಜೀವನಾಂಶ ಎಂದು 100 ಕೋಟಿ ಕೇಳಿದ್ದರು ಎಂಬುದು ಸುದ್ದಿಯಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆ ನಡೆದಿತ್ತು. ಸ್ವತಃ ಹೃತಿಕ್ ರೋಷನ್ ಟ್ವೀಟ್ ಮಾಡುವ ಮೂಲಕ ಅನೇಕ ಸಂಗತಿಗಳನ್ನು ಹೊರಹಾಕಿದ್ದರು. ಆದರೆ ನಂತರ ಸುಸಾನ್ ಖಾನ್ ತಾನು ಅಂಥ ಯಾವ ಪ್ರಸ್ತಾವನೆ ಇಟ್ಟಿಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು.


Click it and Unblock the Notifications











