»   » ಗಾಯಕರಾದ ಹೃತಿಕ್‌ !

ಗಾಯಕರಾದ ಹೃತಿಕ್‌ !

Posted By: Staff
Subscribe to Filmibeat Kannada

ಮುಂಬಯಿ : ಬಾಲಿವುಡ್‌ ಚುಂಬಕ ಹೃತಿಕ್‌ ರೋಷನ್‌ ತಮ್ಮ ಕಲಾ ವೃತ್ತಿಯ ಮತ್ತೊಂದು ಮಜಲನ್ನು ಮುಟ್ಟಿದ್ದಾರೆ. ಈವರೆಗೂ ನಟನೆಯ ಮೂಲಕ ಸುದ್ದಿ ಮಾಡುತ್ತಿದ್ದ ಹೃತಿಕ್‌ ಈ ಬಾರಿ ತಮ್ಮ ಮುಂದಿನ ಚಿತ್ರದ ಹಾಡೊಂದನ್ನು ಹಾಡುವ ಮೂಲಕ ಅಭಿಮಾನಿಗಳ ಕಾತರಕ್ಕೆ ಕಾರಣರಾಗಿದ್ದಾರೆ. ಇದರೊಂದಿಗೆ 'ನಾಯಕ- ಗಾಯಕ" ದ್ವಿಪಾತ್ರವನ್ನು ನಿರ್ವಹಿಸಿದ ಕಲಾವಿದರ ಸಾಲಿಗೆ ಹೃತಿಕ್‌ ಸೇರ್ಪಡೆಯಾಗಿದ್ದಾರೆ.

ಭಾರೀ ನಿರೀಕ್ಷೆಯ 'ಆಪ್‌ ಮುಝೆ ಅಚ್ಛೆ ಲಗ್‌ನೆ ಲಗೆ" ಸಿನಿಮಾದ ಗೀತೆಗಾಗಿ ಇದೇ ಮೊದಲ ಬಾರಿಗೆ ಹೃತಿಕ್‌ ಹಾಡಿದ್ದಾರೆ. 'ತುಮ್ಸೆ ಯೆ ಕೆಹ್ನಾ ಹೈ.." ಎಂದು ಪ್ರಾರಂಭವಾಗುವ ಈ ಗೀತೆಗೆ ಹೃತಿಕ್‌ ಅವರ ಚಿಕ್ಕಪ್ಪ ರಾಜೇಶ್‌ ರೋಶನ್‌ ಸಂಗೀತ ನೀಡಿದ್ದರೆ, ಗೀತ ರಚನೆ ದೇವ್‌ ಕೊಹ್ಲಿ ಅವರದು.

ಹೃತಿಕ್‌ರ ಮೊದಲ ಚಿತ್ರ 'ಕಹೋ ನ ಪ್ಯಾರ್‌ ಹೈ" ನಲ್ಲಿ ನಾಯಕಿಯಾಗಿ ನಟಿಸಿದ್ದ ಅಮಿಶಾ ಪಟೇಲ್‌ 'ಆಪ್‌ ಮುಝೆ ಅಚ್ಛೆ ಲಗ್‌ನೆ ಲಗೆ" ನಲ್ಲಿ ಹೃತಿಕ್‌ಗೆ ಮತ್ತೊಮ್ಮೆ ನಾಯಕಿಯಾಗಿದ್ದಾರೆ. ಅಂದಹಾಗೆ, ಮೊದಲ ಹಾಡನ್ನು ಹಾಡುವ ಸಂದರ್ಭದಲ್ಲಿ ಹೃತಿಕ್‌ ತುಂಬಾ ಎಕ್ಸೈಟ್‌ ಆಗಿದ್ದರಂತೆ. ತಮ್ಮ ಗಾಯನವನ್ನು ಹೃತಿಕ್‌ ಗಂಭೀರವಾಗಿ ಸ್ವೀಕರಿಸಿದ್ದರು ಎನ್ನುತ್ತಾರೆ ಸಿನಿಮಾದ ನಿರ್ಮಾಪಕ ಮೋಹನ್‌ ಕುಮಾರ್‌.

ನಾಯಕರೇ ಗಾಯಕರಾಗುವ ಪರಂಪರೆ ಬಾಲಿವುಡ್‌ಗೆ ಹೊಸದೇನಲ್ಲ . ಈ ಮುನ್ನ ಅಶೋಕ್‌ ಕುಮಾರ್‌, ಕಿಶೋರ್‌ಕುಮಾರ್‌, ಅಮಿತಾಬ್‌ ಬಚ್ಚನ್‌, ಶಾರುಖ್‌ ಖಾನ್‌, ಅಮೀರ್‌ ಖಾನ್‌, ಗೋವಿಂದ, ಸಂಜಯ್‌ದತ್‌, ನಾನಾ ಪಾಟೇಕರ್‌ ಹಾಗೂ ಸಲ್ಮಾನ್‌ ಖಾನ್‌ ನಟನೆಯಾಂದಿಗೆ ಗಾಯನದಲ್ಲೂ ಮಿಂಚಿದ್ದರು. ಆದರೆ, ನಟನೆ ಹಾಗೂ ಗಾಯನ ಎರಡರಲ್ಲೂ ಅಪಾರ ಯಶಸ್ಸು ಗಳಿಸಿದ ಹೆಗ್ಗಳಿಕೆ ಮಾತ್ರ ಕನ್ನಡದ ವರನಟ ಡಾ.ರಾಜ್‌ಕುಮಾರ್‌ ಅವರಿಗೆ ಸೀಮಿತ.

(ಯುಎನ್‌ಐ)

English summary
Hrithik Roshan is now a singer too

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada