»   » ಮರೆಗೆ ಸರಿಯುತ್ತಿರುವ ಹೃತಿಕ್‌ಗೆ ಮರು ಜನ್ಮ?

ಮರೆಗೆ ಸರಿಯುತ್ತಿರುವ ಹೃತಿಕ್‌ಗೆ ಮರು ಜನ್ಮ?

Posted By: Super
Subscribe to Filmibeat Kannada

ಕ್ರಿಕೆಟ್‌ನಲ್ಲಿ ವಿವಿಎಸ್‌ ಲಕ್ಷ್ಮಣ್‌ 'ಒನ್‌ ಮ್ಯಾಚ್‌ ವಂಡರ್‌" ಆದಂತೆ ಬಾಲಿವುಡ್‌ನಲ್ಲಿ ಹೃತಿಕ್‌ ಒನ್‌ ಫಿಲ್ಮ್‌ ವಂಡರ್‌ ಆಗಿಬಿಟ್ಟರಾ?
ಜನ ಮಾತಾಡಿಕೊಳ್ಳುತ್ತಿರುವ ಇಂಥಾ ಒಂದು ಪ್ರಶ್ನೆಯನ್ನು ಎದುರಿಗಿಟ್ಟುಕೊಂಡ ಹೃತಿಕ್‌ ಮತ್ತೆ ಧೂಳು ಕೊಡವಿಕೊಂಡು ಮೇಲೇಳಲು ಇದೀಗ ಸಜ್ಜು. 'ಕಹೋ ನಾ ಪ್ಯಾರ್‌ ಹೈ ಸಿನಿಮಾ" ಬಿಡುಗಡೆ ಆದ ಒಂದೇ ವಾರದಲ್ಲಿ ಭಾರತದ ಅನೇಕ ನಗರಗಳ ಜಿಮ್‌ಗಳೆಲ್ಲಾ ಭರ್ತಿ. ಶಾರುಖ್‌ ಪೋಸ್ಟರ್‌ ಜಾಗೆಯಲ್ಲಿ ಭಾರೀ ಭುಜಗಳ ಪೈಲ್ವಾನ. ಹುಡುಗಿಯರ ಕನಸಿನ ಹುಡುಗನೂ ಅವನೇ. ಹೃತಿಕ್‌ ರೋಷನ್‌ ಎಂಟ್ರಿ ಇಷ್ಟೊಂದು ತೀವ್ರವಾಗಿತ್ತು. ಆದರೆ ನಂತರದ ದಿನಗಳಲ್ಲಿ ಅದು ಹಾಗೇ ಕರಗುತ್ತಾ ಬಂತು.

ಆಮೇಲೆ ತೆರೆ ಕಂಡ 'ಫಿಜಾ"ದಲ್ಲಿ ಮಿಂಚಿದ್ದು ಕರಿಷ್ಮಾ ಕಪೂರ್‌. 'ಮಿಷನ್‌ ಕಾಶ್ಮೀರ್‌"ನಲ್ಲಿ ಸಂಜಯ್‌ ದತ್‌ ಪಾತ್ರಕ್ಕೆ ಭಾರೀ ತೂಕ. 'ಯಾದೇಂ" ಚಿತ್ರದಲ್ಲಿ ಕರೀನಾ ಅಪ್ಪನ ಪಾತ್ರ ಮಾಡಿದ ಜಾಕಿ ಷ್ರಾಫ್‌, ಹೃತಿಕ್‌ನ ಓವರ್‌ಟೇಕ್‌ ಮಾಡಿಬಿಟ್ಟರು. 'ಕಭಿ ಕುಷಿ ಕಭಿ ಗಮ್‌" ಭಾರೀ ಸದ್ದು ಮಾಡಿತು. ಆದರೆ ಅದರ ಕ್ರೆಡಿಟ್ಟು ಅಮಿತಾಬ್‌ ಸೇರಿದಂತೆ ಬಹು ತಾರೆಯರಲ್ಲಿ ಹಂಚಿಹೋಯಿತು. ಕಹೋ ನಾ ಪ್ಯಾರ್‌ ಹೈನಲ್ಲಿ ಹೃತಿಕ್‌ ಯಶಸ್ಸಿನ ಗ್ರಾಫ್‌ ಯಾವ ಮಟ್ಟಕ್ಕೇರಿತೋ ಅಲ್ಲೇ ನಿಂತಿತು. ಇದೀಗ ಇಳಿಯುತ್ತಾ ಬಂದಿದೆ. ಅದು ಹೃತಿಕ್‌ಗೂ ಮನವರಿಕೆಯಾಗಿದೆ.

ಮುಂದಿನ ತಿಂಗಳು ಹೃತಿಕ್‌ರ ಉತ್ಕಟ ತಾಲೀಮಿನ ಚಿತ್ರ 'ಆಪ್‌ ಮುಜೆ ಅಚ್ಛೆ ಲಗ್‌ನೆ ಲಗೆ" ಚಿತ್ರ ತೆರೆ ಕಾಣಲಿದೆ. ಇದರಲ್ಲಿ ಹೃತಿಕ್‌ ಒಬ್ಬರೇ ನಾಯಕ. ಪೋಟಿಯಾಡ್ಡಲು ದ್ವಿತೀಯ ನಾಯಕನಾಗಿ ಯಾರೂ ಇಲ್ಲ. ಇತ್ತೀಚೆಗೆ ತೆರೆ ಕಂಡ 'ರಾಝ್‌" ಎಂಬ ಯಶಸ್ವಿ ಚಿತ್ರದ ನಿರ್ದೇಶಕ ವಿಕ್ರಮ್‌ ಭಟ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಾಯಕಿಯಾಗಿ ತಮ್ಮ ಚೊಚ್ಚಲ ಚಿತ್ರದ ಸಂಗಾತಿ ಅಮಿಷಾ ಪಾಟೀಲ್‌ ಇದ್ದಾರೆ.

ಮಿತಾಹಾರ, ಭಾರೀ ವ್ಯಾಯಾಮ, ನಟನೆಗೆ ತಕ್ಕಂಥ ಮಾನಸಿಕ ಸ್ಥಿತಿಯ ನಿರ್ಮಾಣ ಎಲ್ಲದಕ್ಕೂ ಒತ್ತು ಕೊಡುತ್ತಿರುವ ಹೃತಿಕ್‌ ಮುಂದಿನ ತಿಂಗಳಿಗಾಗಿ ಭಾರೀ ಕುತೂಹಲದಿಂದ ಕಾಯುತ್ತಿದ್ದಾರೆ. 

English summary
Hritik Roshan to give a hit next month

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada