»   » ಯೂಟ್ಯೂಬ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ 'ಹುಚ್ಚ-2'

ಯೂಟ್ಯೂಬ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ 'ಹುಚ್ಚ-2'

Posted By:
Subscribe to Filmibeat Kannada

17 ವರ್ಷಗಳ ಹಿಂದೆ ಕಿಚ್ಚ ಸುದೀಪ್ ಅಭಿನಯಿಸಿದ್ದ ಸೂಪರ್ ಹಿಟ್ ಸಿನಿಮಾ 'ಹುಚ್ಚ'. ಈಗ ಅದೇ ಟೈಟಲ್ ನಲ್ಲಿ ಮತ್ತೊಂದು ಸಿನಿಮಾ ತಯಾರಾಗಿದ್ದು, ಇದೇ ಮಾರ್ಚ್ 30 ರಂದು ತೆರೆಕಾಣುತ್ತಿದೆ.

ಡೈರೆಕ್ಟರ್ ಅವರೇ, ಆದ್ರೆ ನಾಯಕ ಬೇರೆ. ಹೌದು, 'ಹುಚ್ಚ-2' ಚಿತ್ರಕ್ಕೆ ನಾಯಕ ಡಾರ್ಲಿಂಗ್ ಕೃಷ್ಣ. ಸುದೀಪ್ ಅಭಿನಯಿಸಿದ್ದ ಹುಚ್ಚ ಚಿತ್ರವನ್ನ ನಿರ್ದೇಶನ ಮಾಡಿದ್ದ ಓಂ ಪ್ರಕಾಶ್ ರಾವ್ ಅವರೇ 'ಹುಚ್ಚ-2' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಈಗಾಗಲೇ ಚಿತ್ರದ ಟ್ರೈಲರ್ ಬಿಡಗಡೆಯಾಗಿದ್ದು, ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇದೊಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಡಿಫ್‌ರೆಂಟ್ ಲುಕ್‌ನಲ್ಲಿ ನಾಯಕ ಕೃಷ್ಣ ಕಾಣಿಸಿಕೊಂಡಿದ್ದಾರೆ.

ಓಂ ಪ್ರಕಾಶ್ ರಾವ್ ಮತ್ತು ಧನಂಜಯ್ ಮಧ್ಯೆ ಶೀತಲ ಸಮರ.!

huccha 2 movie will releasing on march 30th

ಡಾರ್ಲಿಗ್ ಕೃಷ್ಣನ ಜೋಡಿಯಾಗಿ ಶ್ರಾವ್ಯ ರಾವ್ ಅಭಿನಯಿಸಿದ್ದು, ವಿಶೇಷ ಪಾತ್ರದಲ್ಲಿ ಸಾಯಿ ಕುಮಾರ್ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಮಾಳವಿಕಾ ಅವಿನಾಶ್, ಅವಿನಾಶ್, ಓಂ ಪ್ರಕಾಶ್ ರಾವ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

huccha 2 movie will releasing on march 30th

ಅಂದ್ಹಾಗೆ, ರೇಣುಕಾ ಮೂವೀಸ್ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಉಮೇಶ್ ರೆಡ್ಡಿ ಎಂಬುವವರು ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.

ನಟಿ ರಾಜ್ ಶ್ರೀ ಪೊನ್ನಪ್ಪ ಪ್ರಕಾರ ಓಂಪ್ರಕಾಶ್ ರಾವ್ 'ಓವರ್ ರೇಟೆಡ್ ನಿರ್ದೇಶಕ'!

English summary
Sandalwood actor darling krishna starrer kannada movie huccha 2 movie will releasing on march 30th. the movie directed by om prakash rao.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada