ಮಡಿಕೇರಿ ಬೀದಿಯಲ್ಲಿ ಕಾರಿನ ಗ್ಲಾಸ್ ಒಡೆದು 'ಹುಚ್ಚಾಟ' ಮಾಡಿದ ವೆಂಕಟ್

Recommended Video

ಮಡಿಕೇರಿಯಲ್ಲಿ ಹುಚ್ಚ ವೆಂಕಟ್ ಒದೆ ತಿನ್ನಲು ಇದೇ ಕಾರಣ..? | Huccha Venkat | FILMIBEAT KANNADA

ನಟ, ನಿರ್ದೇಶಕ ಹುಚ್ಚ ವೆಂಕಟ್ ಚೆನ್ನೈ ಬೀದಿಯಲ್ಲಿ ಕೊಳಕು ಬಟ್ಟೆ, ಕಾಲಲ್ಲಿ ಚಪ್ಪಲಿ ಇಲ್ಲದೇ ಹುಚ್ಚನಂತೆ ಸುತ್ತಾಡಿ ಸುದ್ದಿಯಾಗಿದ್ದರು. ಈಗ ಮಡಿಕೇರಿಯಲ್ಲಿ ಸಾರ್ವಜನಿಕವಾಗಿ ರಂಪಾಟ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಮಡಿಕೇರಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಕಾರಿನ ಗಾಜು ಒಡೆದು ಹಾಕಿ ರೌಡಿಯಂತೆ ವರ್ತಿಸಿದ್ದಾನೆ. ಯಾವುದೇ ಕಾರಣವಿಲ್ಲದೇ ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿನ ಮೇಲೆ ತನ್ನ ಹುಚ್ಚಾಟ ತೋರಿದ್ದಾರೆ. ಕಲ್ಲಿನಿಂದ ಕಾರಿನ ಗಾಜು ಪೀಸ್ ಪೀಸ್ ಮಾಡಿದ್ದು, ಡೋರ್ ಗಳನ್ನ ಮುರಿದು ಹಾಕಿದ್ದಾರೆ. ಸಂಪೂರ್ಣವಾಗಿ ಕಾರು ಜಖಂಗೊಂಡಿದೆ.

ಕೆ.ಎಸ್.ಆರ್.ಟಿ.ಸಿ ಬಸ್ ಡಿಪೋ ಘಟಕ ಬಳಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ನಿಂತಿದ್ದ ಸ್ಥಳಿಯ ಜನರನ್ನ ನಿಂದಿಸಿದ್ದಾನೆ. ಇದರಿಂದ ತೀವ್ರವಾಗಿ ರೊಚ್ಚಿಗೆದ್ದ ಸಾರ್ವಜನಿಕರು ಹುಚ್ಚ ವೆಂಕಟ್ ಅವರಿಗೆ ಥಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಟಿವಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

Huccha Venkat creates Public nuisance at Madikeri town

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕಾರು ಮಾಲೀಕ ''ನಾನು ಎ.ಟಿ.ಎಂಗೆ ಹೋಗಿ ವಾಪಸ್ ಬಂದೆ. ವೆಂಕಟ್ ಕಾಣಿಸಿದರು, ನೋಡುತ್ತಿದ್ದೆ. ಆಮೇಲೆ ಯಾಕೋ ಗುರಾಯಿಸುತ್ತಿದ್ದೀಯಾ, ನೀವು ಮಡಿಕೇರಿಯವರು ಜಾಸ್ತಿ ಆಯ್ತು ಎಂದು ಏಕಾಏಕಿ ಹಲ್ಲೆ ನಡೆಸಿದರು. ನಂತರ ಕಾರನ್ನ ಕೂಡ ಒಡೆದು ಹಾಕಿದ್ದಾರೆ'' ಎಂದು ತಿಳಿಸಿದ್ದಾರೆ.

ಇದಕ್ಕೂ ಮುಂಚೆ ಪಾಂಡವಪುರದಲ್ಲಿ ಹುಚ್ಚ ವೆಂಕಟ್ ಕಾಣಿಸಿಕೊಂಡಿದ್ದರಂತೆ. ಅಲ್ಲಿಂದ ನೇರವಾಗಿ ಮಡಿಕೇರಿಗೆ ಹೋಗಿರುವ ಫೈರಿಂಗ್ ಸ್ಟಾರ್ ಮತ್ತೊಂದು ಹುಚ್ಚಾಟ ಪ್ರದರ್ಶಿಸಿದ್ದಾರೆ.

More from Filmibeat

English summary
Actor Director Huccha Venkat today created a nuisance at Madikeri town by damaging a car and having verbal spat with people.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X