For Quick Alerts
  ALLOW NOTIFICATIONS  
  For Daily Alerts

  ಗುರುಪ್ರಸಾದ್ 'ಪತಿವ್ರತೆ' ಹೇಳಿಕೆ ವಿರುದ್ಧ ಹುಚ್ಚ ವೆಂಕಟ್ ಆಕ್ರೋಶ.!

  |

  ಮೀಟೂ ಆರೋಪ ಮಾಡಿರುವ ನಟಿಯರ ವಿರುದ್ಧ 'ಮಠ' ಖ್ಯಾತಿಯ ಗುರುಪ್ರಸಾದ್ ಇತ್ತೀಚಿಗೆ ವಾಗ್ದಾಳಿ ನಡೆಸಿದ್ದರು. 'ತಮ್ಮ ಕುಟುಂಬದಲ್ಲಿ ತಾವು ಪತಿವ್ರತೆಯರು ಎಂದು ಸಾಬೀತು ಮಾಡೋಕೆ ಈ ರೀತಿ ಆರೋಪ ಮಾಡ್ತಿದ್ದಾರೆ' ಎಂದು ಹೇಳಿಕೆ ನೀಡಿದ್ದರು.

  ಇದಕ್ಕೆ ಪ್ರತಿಯಾಗಿ ನಟ-ನಿರ್ದೇಶಕ ಹುಚ್ಚ ವೆಂಕಟ್ ಕಿಡಿಕಾರಿದ್ದಾರೆ. ನಿರ್ದೇಶಕ ಗುರುಪ್ರಸಾದ್ ಅವರ ಹೇಳಿಕೆಯನ್ನ ಖಂಡಿಸಿ ಹಿಗ್ಗಾಮುಗ್ಗಾ ಬೈಯ್ದಿದ್ದಾರೆ. ವಿಡಿಯೋ ಮೂಲಕ ಗುರುಪ್ರಸಾದ್ ವಿರುದ್ಧ ಕೆಂಡಕಾರಿರುವ ಹುಚ್ಚ ವೆಂಕಟ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

  ಪತಿವ್ರತೆ ಅಂತ ಸಾಬೀತು ಮಾಡೋಕೆ 'ಮೀಟೂ': ಗುರುಪ್ರಸಾದ್ ಫೈರ್.! ಪತಿವ್ರತೆ ಅಂತ ಸಾಬೀತು ಮಾಡೋಕೆ 'ಮೀಟೂ': ಗುರುಪ್ರಸಾದ್ ಫೈರ್.!

  'ನಿಮ್ಮಂಥವರಿಂದಲೇ ಹೆಣ್ಮಕ್ಳು ಚಿತ್ರರಂಗಕ್ಕೆ ಬರಲ್ಲ. ಒಂದು ವೇಳೆ ಬಂದರೂ ಐಟಂ ಸಾಂಗ್ ಮಾಡ್ಬೇಕು ಅಂತ ಮೊದಲೇ ಹೇಳ್ತೀರಾ. ಐಟಂ ಸಾಂಗ್ ಗೆ ಅಡ್ಜಸ್ಟ್ ಮಾಡ್ಕೋಬೇಕು ಅಂತೀರಾ. ನಿಮ್ಮ ಮನೆಯಲ್ಲೂ ಹೆಣ್ಮಕ್ಳು ಇದ್ದಾರೆ, ನಿಮ್ಮ ಮನೆಯಲ್ಲೂ ತಾಯಿ ಇದ್ದಾರೆ. ಹೆಣ್ಮಕ್ಳ ಬಗ್ಗೆ ಮಾತನಾಡುವಾಗ ಕೇರ್ ಫುಲ್ ಆಗಿ ಮಾತನಾಡಬೇಕು'' ಎಂದು ಎಚ್ಚರಿಕೆ ನೀಡಿದ್ದಾರೆ.

  ಸರ್ಜಾ ವಿಷ್ಯದಲ್ಲಿ ಶ್ರುತಿ ಹೀಗೆ ಮಾಡಬಹುದಿತ್ತು, ಯಾಕೆ ಮಾಡಿಲ್ಲ: ಗುರು ಪ್ರಸಾದ್ ಸರ್ಜಾ ವಿಷ್ಯದಲ್ಲಿ ಶ್ರುತಿ ಹೀಗೆ ಮಾಡಬಹುದಿತ್ತು, ಯಾಕೆ ಮಾಡಿಲ್ಲ: ಗುರು ಪ್ರಸಾದ್

  'ಪತಿವ್ರತೆ ಅಂತ ಫ್ರೂವ್ ಮಾಡೋಕೆ ಹೆಣ್ಮಕ್ಳು ಈ ರೀತಿ ಮಾಡ್ತಾರೆ ಅಂತ ಹೇಗೆ ಹೇಳ್ತಿಯಾ.? ನೀನು ಈಗಲೇ ಆ ಇಬ್ಬರು ನಟಿಯರನ್ನ ಕ್ಷಮೆ ಕೇಳಬೇಕು' ಎಂದು ಏಕವಚನದಲ್ಲಿ ಹುಚ್ಚ ವೆಂಕಟ್ ವಾಗ್ದಾಳಿ ನಡೆಸಿದ್ದಾರೆ.

  ಗುರು ಪ್ರಸಾದ್ ಏನು ಹೇಳಿದ್ದರು.?

  'ಮೀಟು ಅಭಿಯಾನ ಒಳ್ಳೆಯದು ಯಾರಿಗೆ ಆಗಲಿ ಆ ತರಹದ ಕಿರುಕುಳವಾದ ಆಗಲೇ ಅದರ ಬಗ್ಗೆ ಖಂಡಿಸಬೇಕು. ಆಮೇಲೆ ಯಾವಾಗಲೋ ಮಾತಾಡೋದು ತಪ್ಪು. ಎಲ್ಲರೂ ಕೆಟ್ಟವರಲ್ಲ. ಕೆಲವರು ತಮ್ಮ ಅತ್ತೆ, ಮಾವ ಕುಟುಂಬದಲ್ಲಿ ತಾನು ಪತಿವ್ರತೆ ಎಂದು ಸಾಬೀತು ಪಡಿಸಿಕೊಳ್ಳಲು ಹಾಗೂ ತನ್ನ ಗಂಡನಿಗೆ ತನಗೆ ಅಂತ ದೊಡ್ಡ ಸ್ಟಾರ್ ಕರೆದಿದ್ದ, ಆದರೂ ನಾನು ನಿನಗೆ ಸಿಕ್ಕಿದ್ದೀನಿ ಸರಿಯಾಗಿ ನೋಡ್ಕೋ ಅನ್ನೋಕ್ಕಾಗಿ ಹೀಗೆ ಮೀಟು ಹೆಸರಲ್ಲಿ ಕೆಲವರ ಮಾನ ಹರಾಜು ಹಾಕೋ ಕೆಲಸ ಮಾಡ್ತಿದ್ದಾರೆ' ಎಂದು ಕಠಿಣವಾಗಿ ಮಾತಾಡಿದರು.

  English summary
  Kannada actor huccha venkat has express his angry on guruprasad me too statement.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X