ಹುಚ್ಚ ವೆಂಕಟ್ ಮತ್ತೊಂದು ಮದುವೆ: ಕೈಹಿಡಿದ ಪುಣ್ಯಾತ್ಗಿತ್ತಿ ಯಾರು.?

By Harshitha

Recommended Video

ಹುಚ್ಚ ವೆಂಕಟ್ ಗೂ ಸಿಕ್ತು ಮದುವೆ ಭಾಗ್ಯ !! | Filmibeat Kannada

'ರಮ್ಯಾ ನನ್ ಹೆಂಡತಿ' ಅಂತ ಹೇಳಿ ವರ್ಷಗಳ ಹಿಂದೆ ಬ್ರೇಕಿಂಗ್ ನ್ಯೂಸ್ ಕೊಟ್ಟವರು ಹುಚ್ಚ ವೆಂಕಟ್. ಮೊದಲು ರಮ್ಯಾ ಹೆಸರು ಹೇಳಿಕೊಂಡು ಬೇಜಾನ್ ಪಬ್ಲಿಸಿಟಿ ತೆಗೆದುಕೊಂಡ ಹುಚ್ಚ ವೆಂಕಟ್ ಬಳಿಕ 'ನನ್ ಮಗಂದ್', 'ನನ್ ಎಕ್ಕಡ' ಅಂತ ಡೈಲಾಗ್ ಹೊಡೆದು 'ಬಿಗ್ ಬಾಸ್' ಮನೆಗೆ ನೇರ ಪ್ರವೇಶ ಪಡೆದರು. ಬಳಿಕ ಆದ ವಿವಾದಗಳು ನಿಮಗೆಲ್ಲ ಗೊತ್ತೇ ಇದೆ.

ಯೂಟ್ಯೂಬ್ ಸ್ಟಾರ್, ಫೈರಿಂಗ್ ಸ್ಟಾರ್ ಅಂತೆಲ್ಲ ಕರೆಯಿಸಿಕೊಳ್ಳುತ್ತಿದ್ದ ಹುಚ್ಚ ವೆಂಕಟ್ ಈಗ ಚುನಾವಣಾ ಅಖಾಡಕ್ಕೂ ಇಳಿದಿದ್ದಾರೆ. ಎಲೆಕ್ಷನ್ ಬಿಜಿಯಲ್ಲಿ ಕ್ಷೇತ್ರ ಪರ್ಯಟನೆ ಮಾಡುವುದು ಬಿಟ್ಟು ಮಡಿಕೇರಿ ಸುತ್ತ ಹುಚ್ಚ ವೆಂಕಟ್ ರೌಂಡ್ ಹೊಡೆಯುತ್ತಿದ್ದಾರೆ. ಅದು ಮತ್ತೊಂದು ಮದುವೆ ಮಾಡಿಕೊಂಡು ಅನ್ನೋದು ಬ್ಲಾಸ್ಟಿಂಗ್ ನ್ಯೂಸ್.!

ಹೌದು, ನಂಬಿದ್ರೆ ನಂಬಿ ಬಿಟ್ಟರೆ ಬಿಡಿ... ಹುಚ್ಚ ವೆಂಕಟ್ ಮತ್ತೊಂದು ಬಾರಿ ಮದುವೆ ಆಗಿದ್ದಾರೆ. ಹುಚ್ಚ ವೆಂಕಟ್ ಕೈ ಹಿಡಿದ ಆ ಪುಣ್ಯಾತ್ಗಿತ್ತಿ ಯಾರಿರಬಹುದು ಅಂತ ಯೋಚನೆ ಮಾಡ್ತಿದ್ದೀರಾ.? ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

ಮದುವೆ ಬಗ್ಗೆ ಮಾತನಾಡಿದ ಹುಚ್ಚ ವೆಂಕಟ್

ಮದುವೆ ಬಗ್ಗೆ ಮಾತನಾಡಿದ ಹುಚ್ಚ ವೆಂಕಟ್

ತಾವು ಮತ್ತೊಂದು ಮದುವೆ ಆಗಿರುವುದಾಗಿ ಸ್ವತಃ ಹುಚ್ಚ ವೆಂಕಟ್ ಹೇಳಿಕೊಂಡಿದ್ದಾರೆ. ಫೇಸ್ ಬುಕ್ ಲೈವ್ ಗೆ ಬಂದು 'ವಿವಾಹ'ದ ಬಗ್ಗೆ ಮಾಹಿತಿ ನೀಡಿದ್ದಾರೆ ಹುಚ್ಚ ವೆಂಕಟ್.

ಯಾರು 'ಆ' ಹುಡುಗಿ.?

ಯಾರು 'ಆ' ಹುಡುಗಿ.?

ಐಶ್ವರ್ಯ ಎಂಬ ಹುಡುಗಿಯನ್ನ ಹುಚ್ಚ ವೆಂಕಟ್ ಮದುವೆ ಆಗಿದ್ದಾರಂತೆ. ಅಷ್ಟಕ್ಕೂ, ಯಾರೀ ಐಶ್ವರ್ಯ ಅಂದ್ರಾ.? ಹುಚ್ಚ ವೆಂಕಟ್ ನಟಿಸಿ, ನಿರ್ದೇಶನ ಮಾಡಿರುವ 'ಡಿಕ್ಟೇಟರ್ ಹುಚ್ಚ ವೆಂಕಟ್' ಚಿತ್ರದ ಹೀರೋಯಿನ್ ಈ ಐಶ್ವರ್ಯ.

ಮದುವೆ ಆಗಿದ್ದು ಯಾವಾಗ.?

ಮದುವೆ ಆಗಿದ್ದು ಯಾವಾಗ.?

''ಕಳೆದ ವಾರ ತಲಕಾವೇರಿಯಲ್ಲಿ ಐಶ್ವರ್ಯ ಎಂಬುವರನ್ನ ನಾನು ಮದುವೆ ಆದೆ. ಅದಾದ್ಮೇಲೆ, ಐಶ್ವರ್ಯ ಅವರ ದೊಡ್ಡಮ್ಮ ತೀರಿಕೊಂಡರು. ಹೀಗಾಗಿ ಮದುವೆ ಆದ ವಿಷಯವನ್ನ ನಾವು ಮನೆಯವರಿಂದ ಮುಚ್ಚಿಟ್ವಿ'' ಎಂದು ಫೇಸ್ ಬುಕ್ ಲೈವ್ ನಲ್ಲಿ ಹುಚ್ಚ ವೆಂಕಟ್ ಹೇಳಿದ್ದಾರೆ.

ಲವ್ ಮ್ಯಾರೇಜ್ ಅಂತೆ.!

ಲವ್ ಮ್ಯಾರೇಜ್ ಅಂತೆ.!

''ನಾವು ಪ್ರೀತಿಸಿ ಮದುವೆ ಆಗಿರೋದು. ಮನೆಯಲ್ಲಿ ವಿರೋಧ ಇದ್ದೇ ಇದೆ. ಐಶ್ವರ್ಯ ಬೇರೆ ಯಾರೂ ಅಲ್ಲ. 'ಡಿಕ್ಟೇಟರ್ ಹುಚ್ಚ ವೆಂಕಟ್' ಚಿತ್ರದ ಹೀರೋಯಿನ್. ಮದುವೆ ಆದ್ಮೇಲೆ, ಮನೆಯವರ ಆಶೀರ್ವಾದ ತೆಗೆದುಕೊಳ್ಳಲು ಫೋನ್ ಮಾಡಿದಾಗ ದೊಡ್ಡಮ್ಮ ತೀರಿಕೊಂಡ ವಿಚಾರ ತಿಳಿಯಿತು. ಹೀಗಾಗಿ ಮದುವೆ ವಿಷಯ ಹೇಳುವುದು ಬೇಡ ಅಂದುಕೊಂಡ್ವಿ'' ಎಂದಿದ್ದಾರೆ ಹುಚ್ಚ ವೆಂಕಟ್.

ನಮ್ಮಿಬ್ಬರನ್ನೂ ದೂರ ಮಾಡ್ಬೇಡಿ

ನಮ್ಮಿಬ್ಬರನ್ನೂ ದೂರ ಮಾಡ್ಬೇಡಿ

''ಮದುವೆ ಆಗಿ ಇಬ್ಬರೂ ಜೊತೆಯಲ್ಲಿ ಇದ್ದೇವೆ. ನಾನು ಅವಳನ್ನ ಚೆನ್ನಾಗಿ ನೋಡಿಕೊಳ್ತೀನಿ. ನಾನು ಅವಳನ್ನ ಬಹಳ ಪ್ರೀತಿಸುತ್ತೇನೆ. ಅವಳು ನನ್ನನ್ನ ಪ್ರೀತಿಸುತ್ತಾಳೆ. ನಾವು ತಪ್ಪು ಮಾಡಿಲ್ಲ. ಇಬ್ಬರೂ ಪ್ರೀತಿಸಿ ಮದುವೆ ಆಗಿರೋದು. ನಾವಿಬ್ಬರೂ ಮೇಜರ್. ಬಲವಂತವಾಗಿ ಮದುವೆ ಆಗಿಲ್ಲ. ನಮ್ಮಿಬ್ಬರನ್ನೂ ದೂರ ಮಾಡಬೇಡಿ'' ಎಂದು ಕೇಳಿಕೊಂಡಿದ್ದಾರೆ ಹುಚ್ಚ ವೆಂಕಟ್.

ಅದಾಗಲೇ ಮದುವೆ ಆಗಿದ್ದ ಹುಚ್ಚ ವೆಂಕಟ್

ಅದಾಗಲೇ ಮದುವೆ ಆಗಿದ್ದ ಹುಚ್ಚ ವೆಂಕಟ್

2007 ಜನವರಿ 3 ರಂದು ರೇಷ್ಮಾ ಎನ್ನುವವರ ಜೊತೆ ಸಂಪಂಗಿರಾಮನಗರದ ಗಣಪತಿ ದೇವಸ್ಥಾನದಲ್ಲಿ ಹುಚ್ಚ ವೆಂಕಟ್ ಮದುವೆ ಆಗಿದ್ದರು. ಬಳಿಕ ರೇಷ್ಮಾ ಏನಾದರು.? ಎಂಬುದರ ಬಗ್ಗೆ ಮಾಹಿತಿ ಇಲ್ಲ.

More from Filmibeat

English summary
Kannada Actor, Director Huccha Venkat married Aishwarya, heroine of 'Dictator Huccha Venkat' film. Take a look at the photo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X