ವೆಂಕಟ್ ಗೆ 'ಹುಚ್ಚು' ಬಿಡ್ತು: 'ದುರಹಂಕಾರಿ'ಯಾದ ಫೈರಿಂಗ್ ಸ್ಟಾರ್.!
Recommended Video

ಯಾವುದೇ ವಿಚಾರ ಆಗ್ಲಿ, ಅದರ ಬಗ್ಗೆ ಆಳವಾದ ಅಧ್ಯಯನ ಇದ್ಯೋ, ಇಲ್ವೋ... ಫೇಸ್ ಬುಕ್ ಲೈವ್ ಮೂಲಕ ಮನಬಂದಂತೆ ಮಾತನಾಡುವ, ಖಂಡಿಸುವ ಹುಚ್ಚ ವೆಂಕಟ್ ಗೆ ಈಗ 'ಹುಚ್ಚು' ಬಿಟ್ಟಿದೆ.
'ಬೆತ್ತಲೆ' ವಿಡಿಯೋ: ನಿರ್ದೇಶಕರಿಗೆ 'ಕೀಳು' ಭಾಷೆಯಲ್ಲಿ 'ಉಗಿದ' ಹುಚ್ಚ ವೆಂಕಟ್
ಇದೇನಪ್ಪಾ ಅಂತ ಕನ್ ಫ್ಯೂಸ್ ಆಗ್ಬೇಡಿ. ''ನಾನು ಹುಚ್ಚ ವೆಂಕಟ್'' ಅಂತ ಹೆಮ್ಮೆ ಇಂದ ಹೇಳಿಕೊಳ್ಳುವ ಅವರು.... ಅದೇ ಹೆಸರಿನಲ್ಲಿ ಮೂರ್ಮೂರು ಸಿನಿಮಾಗಳನ್ನ ಮಾಡಿದ್ದರು. ಈಗ ಏಕ್ದಂ ಅಂತ 'ಹುಚ್ಚ ವೆಂಕಟ್' ಹೆಸರನ್ನ ಸೈಡಿಗೆ ತಳ್ಳಿ 'ದುರಹಂಕಾರಿ' ಎಂಬ ಸಿನಿಮಾ ಮಾಡಲು ಹೊರಟಿದ್ದಾರೆ. ಮುಂದೆ ಓದಿರಿ...

ಹುಚ್ಚ ವೆಂಕಟ್ ಹೊಸ ಸಿನಿಮಾ
ಹುಚ್ಚ ವೆಂಕಟ್ ಹೊಸ ಸಿನಿಮಾದ ಹೆಸರೇ 'ದುರಹಂಕಾರಿ'. ಇಂದು (ಸೆಪ್ಟೆಂಬರ್ 19) ಹುಚ್ಚ ವೆಂಕಟ್ ರವರ ಹುಟ್ಟುಹಬ್ಬ. ಜನ್ಮದಿನದ ಪ್ರಯುಕ್ತ ತಮ್ಮ ಹೊಸ ಚಿತ್ರವನ್ನ ಹುಚ್ಚ ವೆಂಕಟ್ ಅನೌನ್ಸ್ ಮಾಡಿದ್ದಾರೆ.

ಪೊಲೀಸ್ ಆಫೀಸರ್
'ದುರಹಂಕಾರಿ' ಸಿನಿಮಾದಲ್ಲಿ ಹುಚ್ಚ ವೆಂಕಟ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಆಲ್ ಇನ್ ಒನ್
'ದುರಹಂಕಾರಿ' ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ, ನಾಯಕ ಎಲ್ಲರೂ ಒಬ್ಬರೇ. ಅವರೇ ಹುಚ್ಚ ವೆಂಕಟ್.

'ಹುಚ್ಚು' ಬಿಡ್ತು.!
ಇಲ್ಲಿಯವರೆಗೂ 'ಹುಚ್ಚ ವೆಂಕಟ್', 'ಪೊರ್ಕಿ ಹುಚ್ಚ ವೆಂಕಟ್', 'ತಿಕ್ಲ ಹುಚ್ಚ ವೆಂಕಟ್' ಅಂತೆಲ್ಲ ಸಿನಿಮಾ ಮಾಡಿದ್ದ ಹುಚ್ಚ ವೆಂಕಟ್ ಇದೀಗ ಆ ಸರಣಿಗೆ ಪೂರ್ಣ ವಿರಾಮ ಇಟ್ಟು 'ದುರಹಂಕಾರಿ' ಚಿತ್ರಕ್ಕೆ ಚಾಲನೆ ನೀಡಿದ್ದಾರೆ.


Click it and Unblock the Notifications











