For Quick Alerts
  ALLOW NOTIFICATIONS  
  For Daily Alerts

  ಹುಚ್ಚ ವೆಂಕಟ್ ಗೆ 'ಎಕ್ಕಡ' ಚಿಹ್ನೆ ಸಿಗೋದಕ್ಕೆ ಕಾರಣ ಗೊತ್ತಾ.?

  By Bharath Kumar
  |
  ದುಡ್ಡಿಗೆ ಮತ ಹಾಕೋರು ನನ್ನ ಎಕ್ಕಡ ಸಮ ಅಂದ ಹುಚ್ಚ ವೆಂಕಟ್ | Filmibeat Kannada

  ಫೈರಿಂಗ್ ಸ್ಟಾರ್ ಹುಚ್ಚ ವೆಂಟಕ್ ರಾಜರಾಜೇಶ್ವರಿ ನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದು, ಚುನಾವಣೆ ಆಯೋಗ ವೆಂಕಟ್ ಗೆ ಚಪ್ಪಲಿ ಚಿಹ್ನೆ ನೀಡಿದೆ. ಇದು ಜನಸಾಮಾನ್ಯರಿಗೆ ಅಚ್ಚರಿ ಉಂಟು ಮಾಡಿದೆ. ಯವಾಗಲೂ ನನ್ನ ಎಕ್ಕಡ, ಎಕ್ಕಡ ಎನ್ನುವ ವೆಂಕಟ್ ಗೆ ಎಕ್ಕಡನೇ ಚಿಹ್ನೆ ಆಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

  ಆದ್ರೆ, ವೆಂಕಟ್ ಗೆ ಚಪ್ಪಲಿ ಚಿಹ್ನೆ ಸಿಗಲು ಕಾರಣವೇನು, ಸ್ವತಃ ಹುಚ್ಚ ವೆಂಕಟ್ ಅವರೇ ಕೇಳಿ ಈ ಚಿಹ್ನೆ ಪಡೆದುಕೊಂಡ್ರಾ ಅಥವಾ ಚುನಾವಣೆ ಆಯೋಗವೇ ವೆಂಕಟ್ ಅವರ ಸೆಂಟಿಮೆಂಟ್ ನೋಡಿ ಈ ಚಿಹ್ನೆ ನೀಡಿದ್ಯಾ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿತ್ತು. ಇದಕ್ಕೀಗ ವೆಂಕಟ್ ಉತ್ತರ ನೀಡಿದ್ದಾರೆ.

  ಹುಚ್ಚ ವೆಂಕಟ್ ಗೆ 'ಎಕ್ಕಡ' ಚಿಹ್ನೆ ಸಿಕ್ಕಿದೆಯಂತೆ.! ಇದು ನಿಜಾನ.? ಹುಚ್ಚ ವೆಂಕಟ್ ಗೆ 'ಎಕ್ಕಡ' ಚಿಹ್ನೆ ಸಿಕ್ಕಿದೆಯಂತೆ.! ಇದು ನಿಜಾನ.?

  ಸ್ವತಃ ವೆಂಕಟ್ ಅವರೇ ಚಪ್ಪಲಿ ಚಿಹ್ನೆಯನ್ನ ಕೇಳಿ ಪಡೆದುಕೊಂಡಿದ್ದಾರಂತೆ. ಮಹಿಳೆಯರ ಬಗ್ಗೆ ಹೆಚ್ಚ ಕಾಳಜಿ ಹೊಂದಿರುವ ವೆಂಕಟ್ ಗೆ ಮಹಿಳೆಯರ ಚಪ್ಪಲಿ ಚಿಹ್ನೆ ಬೇಕಾಗಿತ್ತಂತೆ. ಆದ್ರೆ, ಮಹಿಳೆಯರ ಚಪ್ಪಲಿ ಚಿಹ್ನೆ ಇರಲಿಲ್ಲ. ಹೀಗಾಗಿ, ಗಂಡಸರ ಚಪ್ಪಲಿ ಚಿಹ್ನೆ ಪಡೆದುಕೊಂಡ್ರಂತೆ ಎಂದು ಫೈರಿಂಗ್ ಸ್ಟಾರ್ ಬಹಿರಂಗಪಡಿಸಿದ್ದಾರೆ.

  ಹುಚ್ಚ ವೆಂಕಟ್ 'ಆಸ್ತಿ' ವಿವರ ನೋಡಿ ಹೇಳಿ ಈತ 'ಶ್ರೀಮಂತನಾ-ಬಡವನಾ.?ಹುಚ್ಚ ವೆಂಕಟ್ 'ಆಸ್ತಿ' ವಿವರ ನೋಡಿ ಹೇಳಿ ಈತ 'ಶ್ರೀಮಂತನಾ-ಬಡವನಾ.?

  ಇನ್ನು ಚಪ್ಪಲಿ ಚಿಹ್ನೆ ಸಿಕ್ಕಿರೋದ್ರ ಬಗ್ಗೆ ಸಂತಸ ವ್ಯಕ್ತಪಡಿಸಿರುವ ವೆಂಕಟ್ ''ನೀವು ಯಾವತ್ತಾದ್ರು ನಿಮ್ಮ ಅಪ್ಪನಿಗೆ ಚಪ್ಪಲಿ ತೆಗೆದುಕೊಟ್ಟಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ನನ್ನ ತಂದೆಗೆ ನಾನು ಯಾವತ್ತು ಚಪ್ಪಲಿ ಸಮಾನ. ಇದನ್ನ ಯಾರೂ ನೆಗಿಟೀವ್ ಆಗಿ ತೆಗೆದುಕೊಳ್ಳಬಾರದು. ಯಾರೂ ಮತವನ್ನ ಐನೂರು ಸಾವಿರ ರೂಪಾಯಿಗೋಸ್ಕರ ಮಾಡಿಕೊಳ್ತಿದ್ದಾರೋ ಅವರು ನನ್ ಎಕ್ಕಡದ ಸಮಾನ ಎಂದು ಗುಡುಗಿದ್ದಾರೆ.

  ಇನ್ನು ಹುಚ್ಚಾ ವೆಂಕಟ್‌ ಪಕ್ಷೇತರವಾಗಿ ಚುನಾವಣೆಗೆ ನಿಂತಿದ್ದಾರೆ. ಆದ್ರೆ, ಇವರು ಸ್ಪರ್ಧೆ ಮಾಡುತ್ತಿರುವ ಸಾಮಾನ್ಯವಾದ ವ್ಯಕ್ತಿಗಳ ಎದುರಲ್ಲ, ಹಾಲಿ ಶಾಸಕ ಕಾಂಗ್ರೆಸ್‌ನ ಮುನಿರತ್ನ ಮತ್ತು ಅಮೂಲ್ಯ ಅವರ ಮಾವ ರಾಮಚಂದ್ರಪ್ಪ ಅವರನ್ನ ಎದುರಿಸುತ್ತಿದ್ದಾರೆ.

  English summary
  Kannada actor, rajarajeshwari nagar independent candidate Huccha Venkat Confirms, After Getting 'Slipper' Symbol From Election Commission.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X