ಕಾಲಲ್ಲಿ ಚಪ್ಪಲಿ ಇಲ್ಲ, ಕೊಳಕು ಬಟ್ಟೆ, ಚೆನ್ನೈನಲ್ಲಿ ಹುಚ್ಚ ವೆಂಕಟ್ ಅಲೆದಾಟ
Recommended Video
ಕೊಳಕು ಬಟ್ಟೆ, ಕಾಲಲ್ಲಿ ಚಪ್ಪಲಿ ಇಲ್ಲ, ಹುಚ್ಚನಂತೆ ಚೆನ್ನೈನ ಬೀದಿಯಲ್ಲಿ ನಟ ಹುಚ್ಚ ವೆಂಕಟ್ ಅಲೆದಾಡುತ್ತಿರುವ ವಿಡಿಯೋ ಮತ್ತು ಫೋಟೋ ವೈರಲ್ ಆಗಿದೆ. ಯುಎಫ್ ಓ ಕ್ಯೂಬ್ ಅಪ್ ಲೌಡ್ ವಿಚಾರವಾಗಿ ಚೆನ್ನೈಗೆ ತೆರೆಳಿದ್ದ 'ರಾಂಧವ' ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕರಿಗೆ ವೆಂಕಟ್ ಕಾಣಿಸಿಕೊಂಡಿದ್ದಾರೆ.
ವೆಂಕಟ್ ಅವರನ್ನ ಕಂಡು ಅಚ್ಚರಿಯಾದ ನಿರ್ದೇಶಕ ಸುನೀಲ್ ಆಚಾರ್ಯ ಮತ್ತು ಸ್ನೇಹಿತರು, ಅವರನ್ನ ಮಾತನಾಡಿಸಲು ಮುಂದಾಗಿದ್ದಾರೆ. ಆದ್ರೆ, ವೆಂಕಟ್ ಅವರಿಂದ ಯಾವುದೇ ರೀತಿಯ ಸಹಕಾರ ಸಿಕ್ಕಿಲ್ಲವಂತೆ.
ಹಾಗಾಗಿ, ವೆಂಕಟ್ ಅವರ ಫೊಟೋ ಮತ್ತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರು ಕುಟುಂಬದವರಿಗೆ ಈ ವಿಷಯ ಮುಟ್ಟಲಿ, ಅವರನ್ನ ಚೆನ್ನೈನಿಂದ ಕರೆತರುವ ಪ್ರಯತ್ನ ಮಾಡಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ವಿಡಿಯೋವನ್ನ ನಟ ಭುವನ್ ಪೊನ್ನಣ್ಣ ಕೂಡ ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು, ''ಹಾಕೋದಕ್ಕೆ ಕಾಲಿಗೆ ಚಪ್ಲೀನು ಇಲ್ದೆ ಚೆನ್ನೈ ನ ವೊಡಾಪಳನಿಯಲ್ಲಿ ಈ ರೀತಿ ಓಡಾಡುತ್ತಿರುವ ವಿಡಿಯೋ ನಮ್ಮ ರಾಂಧವ ಚಿತ್ರದ ಸದಸ್ಯರು ಕಳುಹಿಸಿಕೊಟ್ಟರು. ನಿಮಗೆ ಅವರ ಫ್ಯಾಮಿಲಿ ಅಥವಾ ಗೆಳೆಯರು ಪರಿಚಯವಿದ್ದಲ್ಲಿ ನನಗೆ ತಿಳಿಸಿ. ದಯವಿಟ್ಟು. ಸಹಾಯ ಮಾಡೋಣ. ಕೈ ಜೋಡಿಸಿ ಕೇಳಿಕೊಳ್ಳುತ್ತೇನೆ. ಪಾಪ!'' ಎಂದು ಪೋಸ್ಟ್ ಹಾಕಿದ್ದಾರೆ.
ಅಂದ್ಹಾಗೆ, ಹುಚ್ಚ ವೆಂಕಟ್ ಅವರು ಈ ರೀತಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಹಲವು ಬಾರಿ ರಸ್ತೆಗಳಲ್ಲಿ ಹೀಗೆ ಕಾಣಿಸಿಕೊಂಡಿದ್ದಾರೆ. ಆದ್ರೆ, ಈ ಸಲ ಚೆನ್ನೈನಲ್ಲಿ ಕಾಣಿಸಿಕೊಂಡಿರುವುದು ಬೇಸರ ತರಿಸಿದೆ.


Click it and Unblock the Notifications











