ಚೆನ್ನೈನಲ್ಲಿರುವ ಹುಚ್ಚವೆಂಕಟ್ ಮುನಿರತ್ನ ಬಗ್ಗೆ ಹೇಳಲೇಬೇಕು ಎಂದು ಹೇಳಿದ್ದೇನು?

Recommended Video

ನಾನು ಸಣ್ಣವನು, ತಪ್ಪು ಮಾಡಿದ್ರೆ ಕ್ಷಮಿಸಿ ಬಿಡಿ ಎಂದು ಕ್ಷಮೆ ಕೇಳಿದ ಹುಚ್ಚ ವೆಂಕಟ್..!

ಕಳೆದ ಎರಡ್ಮೂರು ದಿನಗಳಿಂದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ಚೆನ್ನೈನ ಬೀದಿಗಳಲ್ಲಿ ಹುಚ್ಚನಂತೆ ಅಲೆಯುತ್ತಿದ್ದಾರೆ ಎಂಬ ವಿಡಿಯೋ ಮತ್ತು ಫೋಟೋಗಳು ಹರಿದಾಡಿದ್ದವು. ಭುವನ್ ಪೊನ್ನಣ್ಣ ನಟನೆಯ ರಾಂಧವ ಚಿತ್ರದ ನಿರ್ದೇಶಕ, ನಿರ್ಮಾಪಕರು ಈ ವಿಡಿಯೋ ಮಾಡಿದ್ದರು.

ನಂತರ ಹುಚ್ಚ ವೆಂಕಟ್ ಅವರನ್ನ ಹೇಗಾದರೂ ಮಾಡಿ ಬೆಂಗಳೂರಿಗೆ ಕರೆದುಕೊಂಡು ಬರಬೇಕು ಎಂಬ ನಿರ್ಧಾರಕ್ಕೆ ಬಂದ ರಾಂಧವ ತಂಡ, ಮತ್ತೆ ಚೆನ್ನೈಗೆ ಹೋಗಿ ವೆಂಕಟ್ ಅವರನ್ನ ಸಂಪರ್ಕಿಸಿದರು.

ಬಳಿಕ, ಹೋಟೆಲ್ ವೊಂದರಲ್ಲಿ ರೂಂ ಬುಕ್ ಮಾಡಿ ವೆಂಕಟ್ ಅವರನ್ನ ನೋಡಿಕೊಳ್ಳಲಾಗುತ್ತಿದೆ. ಈ ಮಧ್ಯೆ ಕನ್ನಡ ನಿರೂಪಕಿ ರಜನಿ ಅವರು ವೆಂಕಟ್ ಜೊತೆ ಚಿಟ್ ಚಾಟ್ ಮಾಡಿದ್ದಾರೆ. ಈ ವೇಳೆ ಷರತ್ತು ವಿಧಿಸಿ ನಿರ್ಮಾಪಕ ಮುನಿರತ್ನ ಅವರ ಬಗ್ಗೆ ಮಾತನಾಡಲೇಬೇಕು ಎಂದು ಮಾತನಾಡಿದ್ದಾರೆ ಹುಚ್ಚ ವೆಂಕಟ್. ಏನಂದ್ರು? ಮುಂದೆ ಓದಿ....

ನಾನು ಯಾರನ್ನು ತುಳಿದಿಲ್ಲ

ನಾನು ಯಾರನ್ನು ತುಳಿದಿಲ್ಲ

''ಒಳ್ಳೆಯ ಸಿನಿಮಾ ಬಂದ್ರೆ ನಾನು ಯಾವತ್ತು ಜೊತೆಯಲ್ಲಿರುತ್ತೇನೆ. ಸಿನಿಮಾ ಇಂಡಸ್ಟ್ರಿಯಲ್ಲಿ ನಾನು ಯಾರನ್ನು ತುಳಿದಿಲ್ಲ. ತುಳಿಯುವ ಅವಶ್ಯಕತೆಯೂ ನನಗಿಲ್ಲ. ಅದೇ ರೀತಿ ನನ್ನ ಸ್ಥಾನವನ್ನ ಕಿತ್ತುಕೊಳ್ಳುವುದಕ್ಕೂ ಯಾರಿಂದಲೂ ಆಗಲ್ಲ, ನನ್ನ ಸ್ಥಾನ ಪಡೆಯುವುದಕ್ಕೂ ಆಗಲ್ಲ'' ಎಂದು ಮಾತು ಆರಂಭಿಸಿದ ಹುಚ್ಚ ವೆಂಕಟ್ ಇದ್ದಕ್ಕಿದ್ದಂತೆ ಮುನಿರತ್ನ ಬಗ್ಗೆ ನೆನಪಿಸಿಕೊಂಡರು.

ಮುನಿರತ್ನ ಅವರಿಗೆ ಆಲ್ ದಿ ಬೆಸ್ಟ್

ಮುನಿರತ್ನ ಅವರಿಗೆ ಆಲ್ ದಿ ಬೆಸ್ಟ್

''ಮುನಿರತ್ನ ಮತ್ತು ನನ್ನ ನಡುವೆ ಗಲಾಟೆ ಆಗಿತ್ತು. ಅವರು ನನಗೆ ಹಿರಿಯರು. ನಾನು ಚಿಕ್ಕ ಮಗು ಇದ್ದಂತೆ. ಅದನ್ನ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ಕೋಪದಲ್ಲಿ ಎರಡು ಮಾತು ಆಡಿದ್ದೆ. ಈಗ ಕುರುಕ್ಷೇತ್ರ ಸಿನಿಮಾ ಮಾಡಿದ್ದಾರೆ. ಚೆನ್ನಾಗಿ ಆಗಲಿ. ಸಿನಿಮಾ ಇನ್ನು ನೋಡಿಲ್ಲ'' ಎಂದು ಕುರುಕ್ಷೇತ್ರ ಸಿನಿಮಾ ಮಾಡಿರುವ ಬಗ್ಗೆ ಮಾತನಾಡಿದರು.

ಕೊನೆಯದಾಗಿ ನಾನು ನೋಡಿದ ಚಿತ್ರ

ಕೊನೆಯದಾಗಿ ನಾನು ನೋಡಿದ ಚಿತ್ರ

''ನಾನು ಕೊನೆಯದಾಗಿ ವಿಷ್ಣುವರ್ಧನ್ ಅವರ ಆಪ್ತರಕ್ಷಕ ಸಿನಿಮಾ ನೋಡಿದ್ದೆ. ಅದಾದ ಮೇಲೆ ಕನ್ನಡ ಸಿನಿಮಾ ನೋಡಿಲ್ಲ. ಹಾಗಂತ ನಾನು ಯಾರಿಗೂ ಪ್ರೋತ್ಸಾಹ ಕೊಟ್ಟಿಲ್ಲ ಅಂದುಕೊಳ್ಳಬೇಡಿ. ಸಿನಿಮಾದ ಹೆಸರಲ್ಲಿ ತಾಯಿ ಕಣ್ಣಲ್ಲಿ ನೀರು ಬಂತು ಅಂದ್ರೆ ಹುಚ್ಚ ವೆಂಕಟ್ ರಾಕ್ಷಸ ಆಗ್ತಾನೆ'' ಎಂದು ವೆಂಕಟ್ ಹೇಳಿಕೊಂಡಿದ್ದಾರೆ.

ಚುನಾವಣೆ ವೇಳೆ ಗಲಾಟೆ ಆಗಿತ್ತು

ಚುನಾವಣೆ ವೇಳೆ ಗಲಾಟೆ ಆಗಿತ್ತು

ಕಳೆದ ವಿಧಾನಸಭೆ ಚುನಾವಣೆ ವೇಳೆ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದಲ್ಲಿ ಹುಚ್ಚ ವೆಂಕಟ್ ಮತ್ತು ಮುನಿರತ್ನ ಇಬ್ಬರೂ ಸ್ಪರ್ಧಿಸಿದ್ದರು. ಮುನಿರತ್ನ ಕಾಂಗ್ರೆಸ್ ಪಕ್ಷದಿಂದ ಮತ್ತು ಹುಚ್ಚ ವೆಂಕಟ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅದಕ್ಕು ಮುಂಚೆ ಮುನಿರತ್ನ ಅವರು ಮನೆಗಳಿಗೆ ಕುಕ್ಕರ್ ಕೊಡ್ತಿದ್ದಾರೆ ಎಂದು ಬಹಿರಂಗವಾಗಿ ವೆಂಕಟ್ ಆರೋಪಿಸಿದ್ದರು. ಇದಾದ ಬಳಿಕವೇ ಮುನಿರತ್ನ ವಿರುದ್ಧ ನಾನೂ ಸ್ಪರ್ಧೆ ಮಾಡ್ತೀನಿ ಅಂತ ಚುನಾವಣೆಗೆ ನಿಂತರು.

More from Filmibeat

English summary
Kannada actor director huccha venkat spoke about producer munirathna and kurukshetra movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X