»   » 'ಬಿಗ್ ಬಾಸ್' ಸ್ಪರ್ಧಿಯಾಗಲಿದ್ದಾರೆ 'ಹುಚ್ಚ ವೆಂಕಟ್'

'ಬಿಗ್ ಬಾಸ್' ಸ್ಪರ್ಧಿಯಾಗಲಿದ್ದಾರೆ 'ಹುಚ್ಚ ವೆಂಕಟ್'

Posted By:
Subscribe to Filmibeat Kannada

ಯಾವ ಸೆಲೆಬ್ರಿಟಿಗೂ ಸಿಗದಷ್ಟು ಮನ್ನಣೆ ಯೂಟ್ಯೂಬ್ ನಲ್ಲಿ ಹುಚ್ಚ ವೆಂಕಟ್ ಗೆ ಸಿಕ್ಕಿದೆ. ಕ್ಯಾಮರಾ-ಮೈಕು ಸಿಕ್ತು ಅಂತ ಮನಬಂದಂತೆ ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಹುಟ್ಟುಹಾಕಿದ ಪರಿಣಾಮ ದಿನ ಬೆಳಗಾಗುವಷ್ಟರಲ್ಲಿ ವರ್ಲ್ಡ್ ಫೇಮಸ್ ಆದ ನಟ ಕಮ್ ನಿರ್ಮಾಪಕ ಕಮ್ ನಿರ್ದೇಶಕ ಹುಚ್ಚ ವೆಂಕಟ್.

ಇಂತಿಪ್ಪ ಹುಚ್ಚ ವೆಂಕಟ್ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸೆಣಸಾಡಲಿದ್ದಾರೆ. ಹಾಗಂತ ಖುದ್ದು ಹುಚ್ಚ ವೆಂಕಟ್ ಬಾಯ್ಬಿಟ್ಟಿದ್ದಾರೆ. ಖಾಸಗಿ ಸುದ್ದಿ ವಾಹಿನಿ ಕಸ್ತೂರಿ ನ್ಯೂಸ್ 24 ನಲ್ಲಿ ಪ್ರಸಾರವಾದ ವಿಶೇಷ ಚರ್ಚಾ ಕಾರ್ಯಕ್ರಮದಲ್ಲಿ ಹುಚ್ಚ ವೆಂಕಟ್ 'ಬಿಗ್ ಬಾಸ್' ಕನ್ಟೆನ್ಸೆಂಟ್ ಆಗುವ ಬಗ್ಗೆ ಬಹಿರಂಗ ಪಡಿಸಿದರು.

Huccha Venkat to particiapte in Bigg Boss Kannada reality show

''ಮೇ ಅಥವಾ ಜೂನ್ ಹೊತ್ತಿಗೆ ಶುರುವಾಗುವ ಕನ್ನಡದ ಬಿಗ್ ಬಾಸ್ ನಲ್ಲಿ ಭಾಗವಹಿಸುತ್ತಿದ್ದೇನೆ. ಅಷ್ಟರಲ್ಲಿ ನನ್ನ ಹುಚ್ಚ ವೆಂಕಟ್ 2 ಸಿನಿಮಾದ ಟ್ರೇಲರ್ ಮತ್ತು ಒಂದು ಸಾಂಗ್ ರೆಡಿಮಾಡಬೇಕು'' ಅಂತ ಹುಚ್ಚ ವೆಂಕಟ್ ಹೇಳಿದರು. [ಹುಚ್ಚ ವೆಂಕಟ್ ಫ್ಯಾನ್ಸ್ ಹಾಡು; ಮಸ್ತ್ ಮಜಾ ಮಾಡಿ]

ಅಲ್ಲಿಗೆ, ಬಿಗ್ ಬಾಸ್ ಮೂರನೇ ಆವೃತ್ತಿಯ ಮೊದಲನೇ ಸ್ಪರ್ಧಿ ಯಾರು ಅನ್ನೋದು ನಿಮಗೆ ಗೊತ್ತಾಯ್ತು. ಅಂದ್ಮೇಲೆ ಮನರಂಜನೆಯಲ್ಲಿ ಬಿಗ್ ಬಾಸ್-3 ರಾಜಿ ಇಲ್ಲ. ಹುಚ್ಚ ವೆಂಕಟ್ ಜೊತೆ ಬಿಗ್ ಬಾಸ್ ಮನೆಯಲ್ಲಿ ಯಾರ್ಯಾರು ಇರಲಿದ್ದಾರೆ ಅನ್ನೋದು ಸದ್ಯಕ್ಕೆ ಸಸ್ಪೆನ್ಸ್. ಹೆಚ್ಚಿನ ಮಾಹಿತಿಗಾಗಿ 'ಫಿಲ್ಮಿಬೀಟ್ ಕನ್ನಡ' ಪುಟಕ್ಕೆ ಭೇಟಿ ನೀಡುತ್ತಿರಿ.

English summary
Kannada Actor Huccha Venkat is all set to take part in Bigg Boss Kannada Reality Show. Huccha Venkat himself announced this news in a Discussion which was aired in Kasthuri Newz24.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada