'ನನ್ ಎಕ್ಕಡ' ಅಂತಿದ್ದ ಹುಚ್ಚ ವೆಂಕಟ್ ಕಾಲಲ್ಲೇ 'ಎಕ್ಕಡ' ಇಲ್ಲ.!
ಮಾತ್ತೆತ್ತಿದ್ರೆ ಸಾಕು... 'ನನ್ ಮಗಂದ್..', 'ನನ್ ಎಕ್ಕಡ..' ಅಂತ ಹೇಳ್ತಿದ್ದವರು ಒನ್ ಅಂಡ್ ಒನ್ಲಿ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್.
ಇಂಟರ್ ನೆಟ್ ಸ್ಟಾರ್ ಹುಚ್ಚ ವೆಂಕಟ್ ಗೂ ಚಪ್ಪಲಿ ಗೂ ಒಂಥರಾ ಅವಿನಾಭಾವ ನಂಟು. 'ಹುಚ್ಚ ವೆಂಕಟ್' ಚಿತ್ರದಲ್ಲಿ ಚಪ್ಪಲಿ ಕುರಿತಾಗಿಯೇ ಹುಚ್ಚ ವೆಂಕಟ್ ಒಂದು ಸೀನ್ ಇಟ್ಟಿದ್ದರು. ''ನಿಮ್ಮ ತಂದೆಯ ಚಪ್ಪಲಿ ಸೈಝ್ ಗೊತ್ತೇನ್ರೋ.?'' ಎಂದು ಯೂಟ್ಯೂಬ್ ನಲ್ಲಿ ಎಲ್ರಿಗೂ ಆವಾಝ್ ಹಾಕಿದ್ದರು.
ಸಾಲದಕ್ಕೆ, 'ಬಿಗ್ ಬಾಸ್' ಮನೆಯಲ್ಲಿ ಚಪ್ಪಲಿಯನ್ನ ತಲೆ ಮೇಲೆ ಹೊತ್ತು ನಿಂತಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಚಪ್ಪಲಿಯನ್ನೇ ತಮ್ಮ ಗುರುತಾಗಿ ಇಟ್ಟುಕೊಂಡಿದ್ದರು. ಚಪ್ಪಲಿಯನ್ನ ಇಟ್ಟುಕೊಂಡು ಇಷ್ಟೆಲ್ಲಾ ಮಾಡಿದ್ದ ಹುಚ್ಚ ವೆಂಕಟ್ ಇದೀಗ ಎಕ್ಕಡ ಇಲ್ಲದೆ ಅಲೆದಾಡುತ್ತಿದ್ದಾರೆ.
ನಂಬಿದ್ರೆ ನಂಬಿ, ಬಿಟ್ಟರೆ ಬಿಡಿ...ಕಾಲಿಗೆ ಎಕ್ಕಡ ಧರಿಸದೆ, ಚೆನ್ನೈ ಬೀದಿಗಳಲ್ಲಿ ಹುಚ್ಚ ವೆಂಕಟ್ ಓಡಾಡುತ್ತಿದ್ದಾರೆ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

'ದುರಹಂಕಾರಿ ಹುಚ್ಚ ವೆಂಕಟ್' ಸಿನಿಮಾ ಮಾಡ್ತೀನಿ ಅಂತ ಹೇಳಿದ್ದ ಹುಚ್ಚ ವೆಂಕಟ್ ಇದೀಗ ಬರಿಗಾಲಿನಲ್ಲಿ ಚೆನ್ನೈ ಬೀದಿಗಳಲ್ಲಿ ಸುತ್ತುತ್ತಿರುವುದು ಯಾಕೆ ಅನ್ನೋದಿನ್ನೂ ಗೊತ್ತಾಗಿಲ್ಲ.
ಸೋಷಿಯಲ್ ಮೀಡಿಯಾದಲ್ಲಿ ಫೈರ್ ಮಾಡುತ್ತಿದ್ದ ಹುಚ್ಚ ವೆಂಕಟ್ ಇದೀಗ ಕೊಂಚ ಸೈಲೆಂಟ್ ಆಗಿದ್ದಾರೆ. ಏಕಾಏಕಿ ಚೆನ್ನೈಗೆ ತೆರಳಿರುವ ಹುಚ್ಚ ವೆಂಕಟ್ ಗೆ ಅಲ್ಲೇನು ಕೆಲಸ ಎಂಬ ಮಾಹಿತಿ ಲಭ್ಯವಾಗಿಲ್ಲ.


Click it and Unblock the Notifications











