ಮತ್ತೆ ಪೋಲೀಸರ ಅತಿಥಿಯಾದ ಹುಚ್ಚ ವೆಂಕಟ್
Recommended Video

ಹುಚ್ಚ ವೆಂಕಟ್ ಒಂದಲ್ಲ ಒಂದು ವಿಚಾರವಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಕೆಲ ದಿನಗಳು ಸಿನಿಮಾ ವಿಚಾರವಾಗಿ ಸದ್ದು ಮಾಡಿದ ಹುಚ್ಚ ವೆಂಕಟ್ ಈಗ ತನ್ನ ರಂಪಾಟದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ವಿಚಿತ್ರ ಎಂದರೆ ನಟ ಹುಚ್ಚ ವೆಂಕಟ್ ರಂಪಾಟವನ್ನು ನೋಡಲು ಜನರು ಮುಗಿಬಿದ್ದಿರುವ ಘಟನೆ ಉಲ್ಲಾಳದಲ್ಲಿ ನಡೆದಿದೆ. ನಿನ್ನೆ ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್ ನ ಉಲ್ಲಾಳ ಮುಖ್ಯ ರಸ್ತೆಯಲ್ಲಿ ಹುಚ್ಚ ವೆಂಕಟ್ ಮಟ..ಮಟ..ಮಧ್ಯಾಹ್ನ ಕಂಠ ಪೂರ್ತಿ ಕುಡಿದು ಕುಡುಕರಂತೆ ಓಡಾಡಿದ್ದರು.

ಇಂದೂ ಕೂಡ ವೆಂಕಟ್ ಕಾಟಕ್ಕೆ ಅಲ್ಲಿಯ ಜನರು ಬೇಸತ್ತಿದ್ದಾರೆ. ನಿನ್ನೆ ಉಲ್ಲಾಳದ ಬಾರ್ ವೊಂದಲ್ಲಿ ಕುಡಿದು ಹೊರ ಬರುತ್ತಿದ್ದಂತೆ ಸ್ಥಳಿಯರು ಮುಗಿ ಬಿದ್ದು ಸೆಲ್ಫಿ ತೆಗೆದುಕೊಂಡಿದ್ದರು. ಬಳಿಕ ಕೈಯಲ್ಲಿ ಕೂಲ್ ಡ್ರಿಂಕ್ಸ್ ಬಾಟಲ್ ಹಿಡಿದುಕೊಂಡು ತೂರಾಟ ಮಾಡಿ ಎಲ್ಲರ ಚಿತ್ತ ತನ್ನತ್ತ ಬರುವಂತೆ ಮಾಡಿದ್ದರು ಹುಚ್ಚ ವೆಂಕಟ್.

ಇಂದು ಅಂಗಡಿಗಳ ಮುಂದೆ ಹೋಗಿ ರಂಪಾಟ ಮಾಡುತ್ತಿದ್ದ ಕಾರಣ ಅಲ್ಲಿಯ ಜನರು ಕುಡುಕರಂತೆ ವರ್ತಿಸಿದ ಸಮಸ್ಯೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದನ್ನ ಪರಿಗಣಿಸಿದ ಪೋಲೀಸರು ಹುಚ್ಚ ವೆಂಕಟ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


Click it and Unblock the Notifications











