twitter
    For Quick Alerts
    ALLOW NOTIFICATIONS  
    For Daily Alerts

    ಲೋಕಸಭೆ ಚುನಾವಣೆಯಲ್ಲಿ ಹುಚ್ಚ ವೆಂಕಟ್ ಸ್ಪರ್ಧೆ: ಕ್ಷೇತ್ರ ಯಾವುದು.?

    |

    ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ರಾಜಕೀಯದ ಕಡೆ ಒಲವು ತೋರಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡ್ತೀನಿ ಎಂದು ಹೇಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

    ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ನಾನು ಮಂಡ್ಯದಿಂದ ಸ್ಪರ್ಧೆ ಮಾಡ್ತೀನಿ. ಮಂಡ್ಯದ ಜನತೆ ನನ್ನ ಕೈ ಹಿಡಿಯುತ್ತಾರೆ. ಒಂದು ವೇಳೆ ಕೈಬಿಟ್ಟರೂ ಅದಕ್ಕೊಂದು ಕಾರಣ ಇರುತ್ತೆ ಎಂದು ಹೇಳಿದ್ದಾರೆ. ಪ್ರಸಕ್ತ ರಾಜಕೀಯ ವಿದ್ಯಮಾನದ ಬಗ್ಗೆ ಮಾತನಾಡಿದ ವೆಂಕಟ್ ಜನರು ತಪ್ಪು ಆಯ್ಕೆ ಮಾಡ್ತಿದ್ದಾರೆ. ರಾಜಕೀಯ ವ್ಯಕ್ತಿಗಳಲ್ಲ. ಸಮ್ಮಿಶ್ರ ಸರ್ಕಾರ ಬೇಗ ಪತನವಾಗುತ್ತೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿರುವುದು ರಾಜ್ಯ ಸರ್ಕಾರಕ್ಕೆ ತೊಂದರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಚುನಾವಣೆಯಲ್ಲಿ ಹುಚ್ಚ ವೆಂಕಟ್ ಸೋಲಲು ಈ 3 ಕಾರಣ ಇರಬಹುದು.!ಚುನಾವಣೆಯಲ್ಲಿ ಹುಚ್ಚ ವೆಂಕಟ್ ಸೋಲಲು ಈ 3 ಕಾರಣ ಇರಬಹುದು.!

    Huccha Venkat will contest in lok sabha election

    ಇನ್ನು ಕೇಂದ್ರದಲ್ಲಿ ಯಾವ ಸರ್ಕಾರ ಬರಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಹುಚ್ಚ ವೆಂಕಟ್, ''ನರೇಂದ್ರ ಮೋದಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ, ಮತ್ತೆ ಅವರು ಬರಬೇಕು ಎನ್ನುವುದು ನನ್ನ ಆಸೆ. ಒಂದು ವೇಳೆ ರಾಹುಲ್ ಗಾಂಧಿಗೂ ಅವಕಾಶ ಕೊಟ್ರೆ ಅದು ಒಳ್ಳೆಯದೇ'' ಎಂದಿದ್ದಾರೆ.

    ಪ್ರಚಾರ ಇಲ್ಲ, ಭಾಷಣನೂ ಮಾಡ್ಲಿಲ್ಲ, ವೆಂಕಟ್ ಗೆ ಸಿಕ್ಕ ಮತವೆಷ್ಟು.? ಪ್ರಚಾರ ಇಲ್ಲ, ಭಾಷಣನೂ ಮಾಡ್ಲಿಲ್ಲ, ವೆಂಕಟ್ ಗೆ ಸಿಕ್ಕ ಮತವೆಷ್ಟು.?

    ಈ ವರ್ಷ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಹುಚ್ಚ ವೆಂಕಟ್ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಯಾವುದೇ ಪ್ರಚಾರ ಮಾಡಿರಲಿಲ್ಲ. ಚುನಾವಣೆ ಸಮಯದಲ್ಲಿ ನಟಿಯೊಬ್ಬರ ಜೊತೆ ಮದುವೆಯಾಗಿದ್ದೀನಿ ಎಂದು ಹೇಳಿಕೊಂಡು ಕಾಣೆಯಾಗಿದ್ದರು.

    ಹೀಗಿದ್ದರೂ ಹುಚ್ಚ ವೆಂಕಟ್ ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ 764 ಮತಗಳು ಸಿಕ್ಕಿತ್ತು. ಇದು ಆಶ್ಚರ್ಯಕ್ಕೆ ಕಾರಣವಾಗಿತ್ತು. ಈಗ ಬೆಂಗಳೂರಿನಿಂದ ಮಂಡ್ಯ ಕಡೆ ಪ್ರಯಾಣ ಮಾಡಲಿದ್ದಾರೆ. ಅಲ್ಲಿ ವೆಂಕಟ್ ಗೆ ಎಷ್ಟು ಮತ ಸಿಗಲಿದೆ ಎಂದು ಕಾದು ನೋಡಬೇಕಿದೆ.

    ಮತ್ತೆ ಪೋಲೀಸರ ಅತಿಥಿಯಾದ ಹುಚ್ಚ ವೆಂಕಟ್ ಮತ್ತೆ ಪೋಲೀಸರ ಅತಿಥಿಯಾದ ಹುಚ್ಚ ವೆಂಕಟ್

    ಇತ್ತೀಚಿಗಷ್ಟೆ ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್ ನ ಉಲ್ಲಾಳ ಮುಖ್ಯ ರಸ್ತೆಯಲ್ಲಿ ಹುಚ್ಚ ವೆಂಕಟ್ ಕುಡಿದು ಕುಡುಕರಂತೆ ಓಡಾಡಿ ಕೆಲವರ ಮೇಲೆ ಹಲ್ಲೆ ಮಾಡಿದ್ದರು. ನಂತರ ಪೊಲೀಸರು ವೆಂಕಟ್ ಅವರನ್ನ ಬಂಧಿಸಿದ್ದರು. ಈಗ ಹೊರಗೆ ಬಂದಿರುವ ವೆಂಕಟ್ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಹೊರಟಿದ್ದಾರೆ.

    English summary
    Kannada actor, firing star Huccha Venkat will contest in upcoming lok sabha election 2019 from mandya lok sabha constituency.
    Monday, September 17, 2018, 13:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X