ಮತ್ತೆ ಹುಚ್ಚ ವೆಂಕಟ್ ರಂಪಾಟ : ಸುದ್ದಿ ವಾಹಿನಿಗೆ ನುಗ್ಗಿ ಆಕ್ರೋಶ

By Naveen

ನಟ ನಿರ್ದೇಶಕ ಹುಚ್ಚ ವೆಂಕಟ್ ಮತ್ತೆ ದೊಡ್ಡ ರಂಪಾಟ ಮಾಡಿಕೊಂಡಿದ್ದಾರೆ. ಸುದ್ದಿ ವಾಹಿನಿಗೆ ನುಗ್ಗಿ ನೇರ ಪ್ರಸಾರದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬೈ ಮೂಲದ ಐಟಂ ಡ್ಯಾನ್ಸರ್ ಶರಣ್ಯಾ ಸ್ಯಾಂಡಲ್ ವುಡ್ ಡೈರೆಕ್ಟರ್ ಮೆಲ್ವಿನ್ ಅವರ ವಿರುದ್ಧ ವಂಚನೆ ಆರೋಪದಡಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ''ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ನಿರ್ದೇಶಕ ಮೆಲ್ವಿನ್ ಮುಂದಾಗಿದ್ದರು'' ಎಂದು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು. ಈ ವಿಷಯದ ಬಗ್ಗೆ ಕನ್ನಡದ ಖ್ಯಾತ ಸುದ್ದಿ ವಾಹಿನಿಯಲ್ಲಿ ನಿರ್ದೇಶಕ ಮಲ್ಟಿನ್ ಮತ್ತು ಚಿತ್ರತಂಡದೊಂದಿಗೆ ನೇರ ಪ್ರಸಾರ ಚರ್ಚಾ ಕಾರ್ಯಕ್ರಮ ನಡೆಯುತ್ತಿತ್ತು.

Hucha Venkat again opposes item song

ನೇರ ಪ್ರಸಾರ ಕಾರ್ಯಕ್ರಮ ವೇಳೆ ಬಂದ ಹುಚ್ಚ ವೆಂಕಟ್ ಕೆಂಡಮಂಡಲವಾದರು. ಐಟಂ ಸಾಂಗ್ ಬ್ಯಾನ್ ಆಗಬೇಕು ಅಂತ ಹೇಳುತ್ತಿದ್ದ ವೆಂಕಟ್ ಕಾರ್ಯಕ್ರಮದಲ್ಲಿ ಇದ್ದ ನಿರ್ದೇಶಕರ ಮೇಲೆ ಹಲ್ಲೆ ಮಾಡಲು ಮುಂದಾದರು. ಒಂದು ಕ್ಷಣ ಇಡೀ ನ್ಯೂಸ್ ಸ್ಟೂಡಿಯೊ ಅಲ್ಲೋಲ ಕಲ್ಲೋಲವಾಗಿತ್ತು.

Hucha Venkat again opposes item song

ನಂತರ ಪ್ರತ್ಯೇಕ ಕೋಣೆಯಿಂದ ಮಾತನಾಡಿದ ಹುಚ್ಚ ವೆಂಕಟ್ '' ಹೆಣ್ಣುಮಕ್ಕಳಿಗೆ ಅವಮಾನ ಆದರೆ ನಾನು ಸಹಿಸವುದಿಲ್ಲ. ಹೆಣ್ಣು ಮಕ್ಕಳಿಗೆ ಐಟಂ ಎಂದು ಕರೆಯುವುದನ್ನು ನಿಲ್ಲಿಸಿ. ಜೊತೆಗೆ ಮುಂಬೈ ಮೂಲದ ಐಟಂ ಡ್ಯಾನ್ಸರ್ ಶರಣ್ಯಾ ಕೊಡಬೇಕಾದ ಹಣ ನೀಡಿ'' ಎಂದು ಕುಗಾಡಿದರು. ಈ ಚರ್ಚೆ ಸತತ ಮೂರ್ನಾಲ್ಕು ಗಂಟೆ ನಡೆಯಿತು.

More from Filmibeat

English summary
Kannada actor Hucha Venkat again opposes item song. Mumbai-based item actress Saranya has registered complaint against Kannada director Melvin at Jayanagar police station.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X