Rekha Vedavyas: ಶಾಕಿಂಗ್ ಲುಕ್‌ನಲ್ಲಿ 'ಹುಚ್ಚ' ನಟಿ ರೇಖಾ: ಅಷ್ಟಕ್ಕೂ ಏನಾಯ್ತು? ಅಭಿಮಾನಿಗಳಲ್ಲಿ ಆತಂಕ

'ಹುಚ್ಚ' ಚಿತ್ರದಲ್ಲಿ ಅಭಿಷ್ಟಾ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರೇಖಾ ಬಳಿಕ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲೂ ನಟಿಸಿ ಗೆದ್ದರು. ಕಳೆದ 9 ವರ್ಷಗಳಿಂದ ಆಕೆ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. 'ಹುಚ್ಚ' ನಟಿ ರೇಖಾ ಅಂತ್ಲೇ ಕನ್ನಡ ಸಿನಿರಸಿಕರ ಮನಸ್ಸಿನಲ್ಲಿ ಜಾಗ ಗಿಟ್ಟಿಸಿದ ಚೆಲುವೆ ಮುಂದೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

'ಚಿತ್ರ', 'ತುಂಟಾಟ', 'ಮೋನಲಿಸಾ', 'ಚೆಲ್ಲಾಟ' ಹೀಗೆ ಹಲವು ಸಿನಿಮಾಗಳಲ್ಲಿ ರೇಖಾ ನಟಿಸಿ ಮೋಡಿ ಮಾಡಿದರು. ಕೆಲ ದಿನಗಳ ಕಾಲ ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾದ ಚೆಲುವೆ ಗಣೇಶ್ ಜೋಡಿಯಾಗಿ 'ಹುಡುಗಾಟ' ಚಿತ್ರದಲ್ಲಿ ಮಿಂಚಿದರು. ಆ ಬಳಿಕ ಮತ್ತೆ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಈ ಬೆಂಗಳೂರು ಬೆಡಗಿ ನಟಿಸಿದರು. ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಬಂದ ರೇಖಾ ವೇದವ್ಯಾಸ್ ಮತ್ತೆ ಹಿಂತಿರುಗಿ ನೋಡಲಿಲ್ಲ.

Huchcha Actress Rekha Vedavyas new Look leaves fans shocked

2014ರಲ್ಲಿ ಕೊನೆಯದಾಗಿ 'ತುಳಸಿ' ಕನ್ನಡ ಚಿತ್ರದಲ್ಲಿ ರೇಖಾ ಕಾಣಿಸಿಕೊಂಡಿದ್ದರು. ಆ ಬಳಿಕ ಆಕೆ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಕೆಲ ವರ್ಷಗಳ ಹಿಂದೆ ತೂಕ ಹೆಚ್ಚಿಸಿಕೊಂಡು ದಪ್ಪ ಆಗಿದ್ದ ರೇಖಾ ಮತ್ತೆ ತೂಕ ಇಳಿಸಿ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಆಕೆ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ. ಹಾಗಾಗಿ ಅಭಿಮಾಇಗಳು ಮರೆತುಬಿಟ್ಟಿದ್ದರು.

ಇದೀಗ ದಿಢೀರನೆ ತೆಲುಗು ಕಿರುತೆರೆ ಕಾರ್ಯಕ್ರಮದಲ್ಲಿ ರೇಖಾ ವೇದವ್ಯಾಸ್ ಪ್ರತ್ಯಕ್ಷ ಆಗಿದ್ದಾರೆ. ಆದರೆ ಆಕೆಯನ್ನು ನೋಡಿದ ಕೆಲವರು ಶಾಕ್ ಆಗಿದ್ದಾರೆ. ಬಹಳ ಸಣ್ಣಗಾಗಿರುವ ರೇಖಾ ಗುರುತು ಸಿಗದ್ದಷ್ಟು ಬದಲಾಗಿದ್ದಾರೆ. ಅಭಿಮಾನಿಗಳಂತೂ 'ಹುಚ್ಚ' ನಟಿ ರೇಖಾಗೆ ಏನಾಯ್ತು ಎಂದು ಕೇಳುವಂತಾಗಿದೆ. 'ಶ್ರೀದೇವಿ ಡ್ರಾಮಾ ಕಂಪೆನಿ' ಶೋಗೆ ಅತಿಥಿಯಾಗಿ ರೇಖಾ ಬಂದಿದ್ದಾರೆ. ಅದರ ಪ್ರೋಮೊ ರಿಲೀಸ್ ಆಗಿದೆ.

Huchcha Actress Rekha Vedavyas new Look leaves fans shocked

ಶೋನಲ್ಲಿ ರೇಖಾಳನ್ನು ನೋಡಿದರವರು ಕೂಡ ಶಾಕ್ ಆಗಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆಕೆ ಬಹಳ ತೂಕ ಇಳಿಸಿಕೊಂಡು, ಪೇಷಂಟ್ ರೀತಿ ಬಹಳ ವೀಕ್‌ ಆಗಿರೋದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. 'ಶ್ರೀದೇವಿ ಡ್ರಾಮಾ ಕಂಪೆನಿ' ಕಾಮಿಡಿ ಶೋ ಆಗಿದ್ದು ಸ್ಪರ್ಧಿಗಳು ಕೂಡ ರೇಖಾರನ್ನು ನೋಡಿ ಖುಷಿಯಾಗಿದ್ದಾರೆ. ಆಕೆ ಕೂಡ ಕಾಮಿಡಿ ಪಂಚ್ ಮೂಲಕ ಎಲ್ಲರನ್ನು ರಂಜಿಸಿದ್ದಾರೆ.

ಕಾರ್ಯಕ್ರಮದ ತೀರ್ಪುಗಾರ್ತಿ ಇಂದ್ರಜ, ರೇಖಾರನ್ನು ನೋಡಿ ತಡೆಯಲಾಗದೇ ಏನಾಯ್ತು? ಎಂದು ಕೇಳಿದ್ದಾರೆ. ನಿಮ್ಮನ್ನು ಬಹಳ ದಿನಗಳ ಬಳಿಕ ನೋಡಿದ್ದು ಖುಷಿಯಾಯಿತು. ಜೊತೆಗೆ ನಿಮ್ಮನ್ನು ಹೀಗೆ ನೋಡಿ ಅಚ್ಚರಿಯಾಗುತ್ತಿದೆ ಎಂದಿದ್ದಾರೆ. ಅದಕ್ಕೆ ಸ್ಪಂದಿಸಿದ ರೇಖಾ, "ಸಡನ್ ಆಗಿ ಈ ರೀತಿ ಆಗಿಬಿಡ್ತು" ಎಂದಿದ್ದಾರೆ. ಆದರೆ ಏನಾಯ್ತು ಅನ್ನೋದು ಪ್ರೋಮೊದಲ್ಲಿ ರಿವೀಲ್ ಆಗಿಲ್ಲ. ಭಾನುವಾ ಕಂಪ್ಲೀಟ್ ಶೋ ಪ್ರಸಾರವಾದಾಗ ಅದಕ್ಕೆ ಉತ್ತರ ಸಿಗಲಿದೆ.

ನಟಿ ರೇಖಾ ವೇದವ್ಯಾಸ್ ಹೊಸ ಲುಕ್ ಇದೀಗ ಶೋ ಬಗ್ಗೆ ಸಸ್ಪೆನ್ಸ್ ಕ್ರಿಯೇಟ್ ಮಾಡಿದೆ. ಇನ್ನು ದಿಢೀರನೇ ಆಕೆಗೆ ಏನಾಯ್ತು? ಎಂದು ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಇನ್‌ಸ್ಟ್ರಾಂನಲ್ಲಿ ಆಕೆ ಹಂಚಿಕೊಂಡಿದ್ದ ಫೋಟೊಗಳಲ್ಲಿ ಚೆನ್ನಾಗಿಯೇ ಇದ್ದರು. ಆದರೆ ದಿಢೀರನೆ ಏನಾಯ್ತು? ಎಂದು ಗೊಂದಲಕ್ಕೀಡಾಗಿದ್ದಾರೆ. ಮೂರು ವರ್ಷಗಳ ಹಿಂದೆಯಷ್ಟೆ ತೆಲುಗು ಸಂದರ್ಶನವೊಂದರಲ್ಲಿ ಭಾಗಿ ಆಗಿ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಯಾವುದೇ ಚಿತ್ರದಲ್ಲಿ ನಟಿಸಲಿಲ್ಲ. ಈಗ ನೋಡಿದ್ರೆ ಈ ರೀತಿ ಕಾಣಿಸಿಕೊಂಡಿದ್ದಾರೆ.

'ಪರಿಚಯ', 'ಬಾಸ್', 'ಬೆಂಕಿ ಬಿರುಗಾಳಿ', 'ಲೂಸ್‌ಗಳು', 'ಪರಮಶಿವ' ಸೇರಿದಂತೆ ರೇಖಾ ನಟಿಸಿದ್ದಾರೆ. ಆದರೆ ಕನ್ನಡ ಸಿನಿರಸಿಕರು ಇವತ್ತಿಗೂ ಆಕೆಯನ್ನು 'ಹುಚ್ಚ' ನಟಿ ರೇಖಾ ಎಂದೇ ಗುರ್ತಿಸುತ್ತಾರೆ.

More from Filmibeat

English summary
Rekha Vedavyas's new look transformation shocks internet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X