'ಹುಚ್ಚ' 25 ವರ್ಷ,'ಈಗ' 14 ವರ್ಷ..'ಜುಲೈ 6' ಕಿಚ್ಚ ಸುದೀಪ್‌ಗೆ ಲಕ್ಕಿ.. ಬ್ರಹ್ಮಾಂಡದ ಅಪರೂಪದ ಯೋಗವೇ?
ಕಿಚ್ಚ ಸುದೀಪ್ ಕನ್ನಡ ಚಿತ್ರರಂಗ ಅಷ್ಟೇ ಅಲ್ಲ, ಭಾರತೀಯ ರಂಗವೇ ಕಂಡ ಅತ್ಯದ್ಭುತ ನಟ ಅನ್ನೋದು ಎರಡು ಮಾತಿಲ್ಲ. ಅವರ ವೃತ್ತಿ ಬದುಕಿನಲ್ಲಿ ಹಲವು ಸಿನಿಮಾಗಳು ಸೂಪರ್ ಹಿಟ್ ಲಿಸ್ಟ್ ಸೇರಿವೆ. ಹಲವು ಸಿನಿಮಾಗಳಿಗೆ ಪ್ರೇಕ್ಷಕರಿಗೆ ಮೆಚ್ಚುಗೆ ಗಳಿಸಿವೆ. ಆದರೆ, ಎರಡು ಸಿನಿಮಾಗಳು ಅವರ ವೃತ್ತಿ ಬದುಕಿಗೆ ತಿರುವುಗಳನ್ನು ಕೊಟ್ಟಿತ್ತು. ಅದರಲ್ಲಿ 'ಹುಚ್ಚ' ಹಾಗೂ 'ಈಗ' ಎರಡು ಸಿನಿಮಾಗಳು ಮೊದಲ ಸಾಲಿನಲ್ಲಿ ನಿಲ್ಲುತ್ತವೆ.
ವಿಶೇಷ ಅಂದರೆ, ಈ ಎರಡೂ ಸಿನಿಮಾಗಳು ರಿಲೀಸ್ ಆಗಿದ್ದೇ ತಾರೀಕಿನಂದು. 'ಹುಚ್ಚ' ಸಿನಿಮಾ ಜುಲೈ 6, 2001 ರಲ್ಲಿ ತೆರೆಕಂಡಿತ್ತು. ಪೂರ್ಣ ಪ್ರಮಾಣದಲ್ಲಿ ಮಾಸ್ ಹೀರೋ ಆಗಿ ನಟಿಸಿದ್ದ ಸಿನಿಮಾವಿದು. ಇನ್ನು ರಾಜಮೌಳಿ ನಿರ್ದೇಶಿಸಿದ 'ಈಗ' ಕಿಚ್ಚನನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮೆಚ್ಚಿಗೆ ಗಳಿಸುವಂತೆ ಮಾಡಿತ್ತು. ಇದು ಕೂಡ ಜುಲೈ 6, 2012ರಲ್ಲಿ ತೆರೆಕಂಡಿತ್ತು.

ಹೀಗಾಗಿ 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ಸಿನಿ ಜರ್ನಿಯಲ್ಲಿ ಜುಲೈ 6 ಮರೆಯಲಾಗದ ಸ್ಥಾನವಿದೆ. ಒಂದು ಕಡೆ ಈ ಎರಡೂ ಸಿನಿಮಾಗಳು ಒಂದೇ ಡೇಟ್‌ನಲ್ಲಿ ರಿಲೀಸ್ ಆಗಿದ್ದು ಕಾಕತಾಳೀಯ ಇರಬಹುದು. ಆದರೆ, ಜ್ಯೋತಿಷ್ಯ ಹಾಗೂ ಸಂಖ್ಯಾಶಾಸ್ತ್ರದ ದೃಷ್ಟಿಕೋನದಿಂದಲೂ ಈ ಮಹತ್ವವನ್ನು ಪಡೆದುಕೊಂಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಜ್ಯೋತಿಷ್ಯ ಹಾಗೂ ಸಂಖ್ಯಾಶಾಸ್ತ್ರದ ಹಿನ್ನೆಲೆಯಲ್ಲಿ ಈ ದಿನ ಸುದೀಪ್ ಪಾಲಿಗೆ ಎಷ್ಟು ಅದೃಷ್ಟ ಅನ್ನೋ ವಿಶ್ಲೇಷಣೆ ಇಲ್ಲಿದೆ.
ಸುದೀಪ್ 'ಹುಚ್ಚ'ಗೆ 25 ವರ್ಷ
2001ರ ಜುಲೈ 6ರಂದು 'ಹುಚ್ಚ' ರಿಲೀಸ್ ಆದಾಗ ಸುದೀಪ್ ಭವಿಷ್ಯವೇ ಬದಲಾಯಿತು. ಅಲ್ಲಿವರೆಗೂ ಕಿಚ್ಚ ಎರಡು ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ, ಅದು ಅವರಿಗೆ ಗೆಲುವು ತಂದು ಕೊಟ್ಟಿರಲಿಲ್ಲ. ಆದರೆ, 'ಹುಚ್ಚ' ಬ್ಲಾಕ್‌ಬಸ್ಟರ್ ಹಿಟ್ ಆಗಿ ಹೊರ ಹೊಮ್ಮಿತ್ತು. ಸ್ಯಾಂಡಲ್‌ವುಡ್‌ನಲ್ಲಿ ಸುದೀಪ್ ಯುಗ ಆರಂಭ ಆಗಿತ್ತು. ಹೊಸ ಹೀರೋ ಹುಟ್ಟಿಕೊಂಡಿದ್ದರು.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಜಾತಕದಲ್ಲಿ ಶನಿ ಮತ್ತು ರಾಹುವಿನ ಪ್ರಭಾವ ಧನಾತ್ಮಕವಾಗಿದ್ದಾಗ 'ಮಾಸ್' ಪ್ರೇಕ್ಷಕರ ಮನ ಗೆಲ್ಲುವ ಯೋಗ ಒಲಿಯುತ್ತದಂತೆ. ಸಂಖ್ಯಾಶಾಸ್ತ್ರದ ಪ್ರಕಾರ ಸಂಖ್ಯೆ 6ರ 'ಶುಕ್ರ'ಗ್ರಹವನ್ನು ಪ್ರತಿನಿಧಿಸುತ್ತದೆ. ಶುಕ್ರನು ಕಲೆ, ಗ್ಲಾಮರ್, ಸಿನಿಮಾ, ಕೀರ್ತಿ ಮತ್ತು ಸೌಂದರ್ಯದ ಕಾರಕನಾಗಿದ್ದಾನೆ. ಇನ್ನೂ ಸಂಖ್ಯಾಶಾಸ್ತ್ರದ ಪ್ರಕಾರವೂ 25 ವರ್ಷ ಅಂದರೆ, 2+5 = 7 ಇದು ಕೇತು ಗ್ರಹದ ಸಂಖ್ದೆ ಎನ್ನುತ್ತಾರೆ.

'ಈಗ'ಗೆ 14ರ ಸಂಭ್ರಮ
ರಾಜಮೌಳಿ ನಿರ್ದೇಶಿಸಿದ 'ಈಗ' ಸಿನಿಮಾ 2012ರ ಜುಲೈ 6ರಂದು ತೆರೆಕಂಡಿತ್ತು. ಈ ಸಿನಿಮಾ ಸುದೀಪ್‌ರನ್ನು ಕೇವಲ ಸ್ಯಾಂಡಲ್‌ವುಡ್ ಅಷ್ಟೇ ಅಲ್ಲ, ಇಡೀ ಭಾರತವೇ ತಿರುಗಿ ನೋಡುವಂತೆ ಮಾಡಿತ್ತು. ಸಂಖ್ಯಾಶಾಸ್ತ್ರದ ಪ್ರಕಾರ, ಸಂಖ್ಯೆ 6ರ 'ಶುಕ್ರ'ಗ್ರಹವನ್ನು ಪ್ರತಿನಿಧಿಸುತ್ತದೆ. ಹಾಗೇ 14ನೇ ವರ್ಷದ ಸಂಭ್ರಮ ಆಗಿದ್ದರಿಂದ 1+4 = 5 ಆಗುತ್ತದೆ. 5ನೇ ಸಂಖ್ಯೆಯು ಬುಧ ಗ್ರಹಕ್ಕೆ ಸಂಬಂಧಿಸಿದೆ. ಬುಧನು ಬುದ್ಧಿವಂತಿಕೆ, ವ್ಯಾಪಾರ ಮತ್ತು ಸಂವಹನದ ಕಾರಕ. 'ಈಗ' ಸಿನಿಮಾ ಸುದೀಪ್ ಅವರ ಬ್ಯುಸಿನೆಸ್ ಮಾರ್ಕೆಟ್ ಅನ್ನು ಬೇರೆ ರಾಜ್ಯಗಳಿಗೂ ವಿಸ್ತರಿಸಿದ್ದರ ಹಿಂದೆ ಈ ಬುಧನ ಚಮತ್ಕಾರವಿದೆ ಎನ್ನುತ್ತಾರೆ.
ಜುಲೈ 6ಕ್ಕೆ ಬ್ರಹ್ಮಾಂಡದ ಕೃಪೆ
'ಹುಚ್ಚ' ಸಿನಿಮಾದಲ್ಲಿ ಪ್ರೀತಿ ಹಾಗೂ ಭಾವನೆಗಳು ಕೆಲಸ ಮಾಡಿವೆ. ಅದೇ 'ಈಗ' ದ್ವೇಷ ಹಾಗೂ ಪ್ರತೀಕಾರದ ಭಾವನೆಗಳನ್ನು ಹೊತ್ತು ಬಂದಿತ್ತು. ಹೀಗಾಗಿ ಈ ಎರಡೂ ಸಿನಿಮಾಗಳೂ ಪ್ರೇಕ್ಷಕರ ಹೃದಯಕ್ಕೆ ನೇರವಾಗಿ ನಟಿದೆ ಎಂದು ಎಕ್ಸ್‌ಪರ್ಟ್ಸ್ ಹೇಳುತ್ತಾರೆ. ಜುಲೈ 6 ಕಿಚ್ಚ ಸುದೀಪ್ ಪಾಲಿಗೆ ಬ್ರಹ್ಮಾಂಡವೇ ಬರೆದ 'ಅದೃಷ್ಟದ ದಿನ'. ಒಂದೇ ದಿನಾಂಕದಂದು ಎರಡು ವಿಭಿನ್ನ ಶೈಲಿಯ ಸಿನಿಮಾಗಳು ಬಿಡುಗಡೆಯಾಗಿ ಇಷ್ಟೊಂದು ದೊಡ್ಡ ಯಶಸ್ಸು ಕಂಡಿದೆ. ಇದು ಅಪರೂಪದಲ್ಲೇ ಅಪರೂಪವಾಗಿದ್ದು, ಶುಕ್ರ ಹಾಗೂ ಬುಧನ ಕೃಪೆಯಿಂದ ಸುದೀಪ್‌ಗೆ ಯಶಸ್ಸು ಸಿಕ್ಕಿದೆ ಎನ್ನುತ್ತಾರೆ. ಏನೇ ಇದ್ದರೂ ಕಿಚ್ಚ ಸುದೀಪ್‌ಗೆ ಇದೆಲ್ಲ ನಂಬಿಕೆ ಇಲ್ಲದೇ ಇರಬಹುದು. ಜ್ಯೋತಿಷ್ಯ ಹಾಗೂ ಸಂಖ್ಯಾಶಾಸ್ತ್ರದಲ್ಲಿ ಅವರದ್ದೇ ಲೆಕ್ಕಾಚಾರಗಳಿವೆ. ಏನೇ ಇದ್ದರೂ ಈ ಎರಡೂ ಸಿನಿಮಾ ಕಿಚ್ಚ ಅಭಿನಯ ಇಂದಿಗೂ ಮೈ ಜುಂ ಎನಿಸುತ್ತದೆ.


Click it and Unblock the Notifications