»   » ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಹುಚ್ಚ ವೆಂಕಟ್

ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಹುಚ್ಚ ವೆಂಕಟ್

Posted By:
Subscribe to Filmibeat Kannada

ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ರವರು ಭಾನುವಾರ ತಮ್ಮ ತೋಟದ ಮನೆಗೆ ತೆರಳಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.

ಹುಚ್ಚ ವೆಂಕಟ್ ಗೆ 'ಸೂಪರ್ ಜೋಡಿ' ರಿಯಾಲಿಟಿ ಶೋನಲ್ಲಿ ಯುವತಿಯೊಬ್ಬಳ ಜೊತೆ ಪ್ರೇಮವಾಗಿತ್ತು. ಅವರನ್ನು ಮದುವೆ ಆಗಲು ಹುಚ್ಚ ವೆಂಕಟ್ ಮುಂದಾದಾಗ ನಟಿಯ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಬಗ್ಗೆ ಸ್ವತಃ ಹುಚ್ಚ ವೆಂಕಟ್ ಅವರು ಮಾಧ್ಯಮಗಳಿಗೆ ಎಸ್‌ಎಂಎಸ್ ಕಳುಹಿಸಿದ್ದರು ಎಂಬುದು ವರದಿ ಆಗಿದೆ.

Huchcha Venkat Attempted to Suicide

ಪ್ರಸ್ತುತ ಹುಚ್ಚ ವೆಂಕಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲೂ ಸಹ ಪ್ರೀತಿಯಿಂದ ನೊಂದಿರುವ ಅವರು ರಂಪಾಟ ಮಾಡುತ್ತಿರುವುದಾಗಿ ವರದಿ ಆಗಿದೆ. ಹುಚ್ಚ ವೆಂಕಟ್ ಈ ಹಿಂದೆಯೂ ಸಹ ನಟಿ ರಮ್ಯಾ ಅವರನ್ನು ಪ್ರೀತಿಸುತ್ತಿರುವುದಾಗಿ ಹುಚ್ಚ ವೆಂಕಟ್ ರಂಪಾಟ ಮಾಡಿರುವುದನ್ನು ನೆನಪಿಸಿಕೊಳ್ಳಬಹುದು.

English summary
Youtube star Huchcha Venkat Attempted to Suicide.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada